ನೆಲದ ಕವಿ ಎಂದೇ ಪರಿಚಿತರಾದ ಜಂಬಣ್ಣ ಅಮರಚಿಂತರು ಬರೆದ ಕಾದಂಬರಿ ’ಕುರುಮಯ್ಯ ಮತ್ತು ಅಂಕುಶದೊಡ್ಡಿ’.
ತೊಂಬತ್ತರ ದಶಕದ ಕೊನೆಯಲ್ಲಿ ಬರೆದ ಈ ಕಾದಂಬರಿಯು ಕೊರವ ಸಮುದಾಯದ ದಾರುಣ ಬದುಕಿನ ಚಿತ್ರವನ್ನು ಕಟ್ಟಿಕೊಡುತ್ತದೆ. ಕಷ್ಟ ಬಂದಾಗ ಸ್ವಂತ ಹೆಂಡತಿಯನ್ನೇ ಮಾರುವ ಅನಿಷ್ಟ ಪದ್ಧತಿಯ ಮೇಲೆ ಲೇಖಕರು ಕಾದಂಬರಿಯ ವಸ್ತುವನ್ನು ಕಟ್ಟುತ್ತಾರೆ.
ಈ ಕಾದಂಬರಿಯಲ್ಲಿ ಬರುವ ಕುಶಾಲಪ್ಪ ಮತ್ತು ಸಂಶಾಲಪ್ಪ ಅಣ್ಣತಮ್ಮಂದಿರಿಬ್ಬರು ಆಡಳಿತಶಾಹಿ ವ್ಯವಸ್ಥೆಯ ಮುಖಂಡರಾಗಿ ಕಾಣುತ್ತಾರೆ. ಕುಶಾಲಪ್ಪ ಮತ್ತು ಅವನ ತಮ್ಮ ಸಂಶಾಲಪ್ಪನ ಜಗಳದ ರಾಜಕೀಯಕ್ಕೆ ಬಲಿಯಾಗುವ 'ಕೊರವರ' ಎಂಬ ಇಡೀ ಸಮುದಾಯದ ಕತೆಯೇ ಈ ಕಾದಂಬರಿಯಾಗಿದೆ.
ಜಂಬಣ್ಣ ಅಮರಚಿಂತ ಅವರು 1945 ಏಪ್ರಿಲ್ 7ರಂದು ರಾಯಚೂರಿನಲ್ಲಿ ಜನಿಸಿದರು. ಆರೋಗ್ಯ ಇಲಾಖೆ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದ ಜಂಬಣ್ಣ ಅವರು ಬರೆದ ಪ್ರಮುಖ ಕೃತಿಗಳೆಂದರೆ ಮುಂಜಾವಿನ ಕೊರಳು, ಅಧೋ ಜಗತ್ತಿನ ಆಕಾವ್ಯ; (ಕವನ ಸಂಗ್ರಹಗಳು), ಝರಿ-ಬೆಟ್ಟ (ಕಾದಂಬರಿ),ಅಮರಚಿಂತ ಕಾವ್ಯ (ಸಮಗ್ರ ಕಾವ್ಯ). ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ರಾಜ್ಯೋತ್ಸವ ಪ್ರಶಸ್ತಿ, ಕನ್ನಡ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ...
READ MORE