ಕೃಷ್ಣಾರ್ಪಣ – ಸತ್ಯಕಾಮರ ಈ ಕೃತಿಯು ಜನ್ಮಭೂಮಿ ಲೇಖಕರ ಜನ್ಮಸ್ಥಳವಾದ ಗಲಗಲಿಗೆ ಸಂಬಂಧಿಸಿದುದು. ಇಲ್ಲಿ ನಡೆಯುವ ಅನೇಕ ಕೊಲೆಗಳ ಬಗ್ಗೆ, ಕಲ್ಪನೆಗಳ ಬಗ್ಗೆ ಕಾದಂಬರಿಕಾರರು ವಿಡಂಬನಾತ್ಮಕವಾಗಿ ವರ್ಣಿಸಿದ್ದಾರೆ. ಮತ್ತು ಗಲಗಲಿಯ ಗ್ರಾಮದ ಅಂದಿನ, ಇಂದಿನ ಸ್ಥಿತಿಗತಿಗಳನ್ನು ಮಾರ್ಮಿಕವಾಗಿ ;ಕೃಷ್ಣಾರ್ಪಣ; ಕೃತಿಯಲ್ಲಿ ಸತ್ಯಕಾಮರು ವರ್ಣಿಸಿದ್ಧಾರೆ.
ಒಂದು ಹಳ್ಳಿಯ 2000 ವರ್ಷದ ಇತಿಹಾಸ ಕಥಾನಕವಾಗಿದೆ. ನದಿಗೆ ಊರು ಸೇರಿದ ಕಥೆಯಲ್ಲ, ಕೃಷ್ಣನಿಗೆ ಎಲ್ಲರೂ ಅರ್ಪಿತವಾದ ಕಥೆ ಇದಾಗಿದೆ. ಇಲ್ಲಿ ಪುರಾಣ ಮುಳುಗಿದೆ, ವರ್ತಮಾನದ ಎಚ್ಚರವೊಂದು ಜೀವಂತವಾಗಿ ನೋಡುತ್ತಿದೆ. ಭವಿಷ್ಯದ ಕಾಣೆಯೂ ಇದೆ. ಇದು ಭೂತದಲ್ಲಿ ನಿಂತು ಭವಿಷ್ಯವನ್ನು ನೋಡುವ ವರ್ತಮಾನ. ಅದಕ್ಕೆಂದೇ ಸತ್ಯಕಾಮರಿಗೆ ಕೃಷ್ಣಾರ್ಪಣ ಎಂಬ ಎರಡು ಸಾವಿರ ಇಸವಿಯ ಘಟನೆ 1981ರ ಆ ದಿನಗಳಲ್ಲೇ ಕಾಣಿಸಿತ್ತು ಎಂದು ಹೇಳಬಹುದು.
’ಸತ್ಯಕಾಮ’ ಎಂಬುದು ಅನಂತ ಕೃಷ್ಣಾಚಾರ್ಯ ಶಹಾಪುರ ಅವರ ಕಾವ್ಯನಾಮ. ತಮ್ಮ ಕಾದಂಬರಿ ಹಾಗೂ ತಂತ್ರವಿದ್ಯೆ, ಕೃಷಿಯ ಮೂಲಕ ನಾಡಿನ ಮನೆ ಮಾತಾದವರು ’ಸತ್ಯಕಾಮ’. ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲ್ಲೂಕಿನ ಗಲಗಲಿಯಲ್ಲಿ 1920ರ ಮಾರ್ಚ್ 2ರಂದು ಜನಿಸಿದರು. (ಕೆಲವು ಕಡೆ ಏಪ್ರಿಲ್ 16 ಎಂದು ದಾಖಲಾಗಿದೆ.) ಆರಂಭಿಕ ಶಿಕ್ಷಣವನ್ನು ಗಲಗಲಿಯಲ್ಲಿ ಪಡೆದ ಅವರು ಮುಲ್ಕಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ ಶಾಲೆಯ ಗೊಡವೆಗೇ ಹೋಗದೆ ಒಂದು ವರ್ಷ ಗಲಗಲಿಯಲ್ಲಿಯೇ ಕಳೆದರು. 1935ರಲ್ಲಿ ಬಾಗಲಕೋಟೆಯ ಸಕ್ರಿ ಹೈಸ್ಕೂಲಿಗೆ ಸೇರಿದರಾದರೂ ಓದು ಮುಂದುವರಿಸಲಿಲ್ಲ. ಭಾರತದಲ್ಲಿ ಉಪ್ಪಿನ ಸತ್ಯಾಗ್ರಹ ನಡೆಯುತ್ತಿದ್ದ 1930-31ರಲ್ಲಿ ಬಾಲಕ ಅನಂತ ...
READ MORE