ಹಿರಿಯ ಲೇಖಕ ಪರಂಜ್ಯೋತಿ (ಕೆ.ಪಿ. ಸ್ವಾಮಿ) ಅವರ ಕಾದಂಬರಿ-ಕೋಡೆಮಳೆ. ನೀಲಗಿರಿ ಪ್ರದೇಶದ ಜನರ ಜನಜೀವನ ಕುರಿತ ಚಿತ್ರವು ಈ ಕಾದಂಬರಿಯ ವಸ್ತು. ನಿತ್ಯ ಹರಿದ್ವರ್ಣ ಕಾಡಾದ ನೀಲಗಿರಿ ಪ್ರದೇಶವು ಜನಸಂಸ್ಕೃತಿಯಿಂದಲೂ ಶ್ರೀಮಂತವಾಗಿದೆ. ಔಷಧಿ ಸಸ್ಯಗಳು ಹೇರಳವಾಗಿವೆ. ಪ್ರಕೃತಿಯಲ್ಲಿಯ ನಿಗೂಢ ರಹಸ್ಯಗಳು, ಕಾಡಿನ ದಟ್ಟ ಪರಿಚಯ, ಆ ಮೂಲಕ ಕಂಡುಕೊಳ್ಳುವ ಅಗೋಚರ ಶಕ್ತಿಯ ಕುರಿತು ನಂಬಿಕೆ-ಆಚರಣೆಗಳು ಹೀಗೆ ಕಾದಂಬರಿಯನ್ನುಅರ್ಥವತ್ತಾಗಿ ಹುರಿಗೊಳಿಸಿದೆ. ನಿರೂಪಣಾ ಶೈಲಿಯು ಪ್ರಬುದ್ಧವಾಗಿದೆ. ಸನ್ನಿವೇಶಗಳ ಜೋಡಣೆಯು ಕಲಾತ್ಮಕವಾಗಿದೆ. ಪರಿಣಾಮಕಾರಿ ಸಂಭಾಷಣೆಯು ಓದುಗರ ಮನಸ್ಸಿಗೆ ಮುದ ನೀಡುವಂತಿದೆ.
ಪತ್ರಕರ್ತ, ಕಾದಂಬರಿಕಾರ, ಸಾಮಾಜಿಕ ಅಧ್ಯಯನಕಾರರಾಗಿರುವ ಪರಂಜ್ಯೋತಿ ಎಂತಲೇ ಪರಿಚಿತರಾಗಿರುವ ಕೆ.ಪಿ. ಸ್ವಾಮಿ ಅವರು ಜನಿಸಿದ್ದು 1936 ಜೂನ್ 10ರಂದು ಮಂಡ್ಯ ಜಿಲ್ಲಯ ಮಳವಳ್ಳಿಯಲ್ಲಿ. ತಂದೆ ರವಳ ಮೇಸ್ತ್ರಿ, ತಾಯಿ ಚೌಡಮ್ಮ. ಉದ್ಯೋಗ ಹರಸಿ ತಮಿಳುನಾಡಿನ ಕಡೆಗೆ ವಲಸೆಬಂದ ಇವರ ಕುಟುಂಬ ನೆಲೆಸಿದ್ದು ನೀಲಗಿರಿಯಲ್ಲಿ. ಮೈಸೂರಿನಲ್ಲಿ ಪ್ರಾಥಮಿಕ ಶಿಕ್ಷಣ ಹಾಗೂ ಮಂಡ್ಯದಲ್ಲಿ ಪ್ರೌಢ ಶಿಕ್ಷಣ ಪಡೆದರು. ಪತ್ರಕರ್ತರಾಗಿ ವೃತ್ತಿ ಆರಂಭಿಸಿದ ಇವರು ಇಂದ್ರ ಧನುಸ್, ಪ್ರಪಂಚ, ಸೋವಿಯೆಟ್ ಲ್ಯಾಂಡ್ ಮುಂತಾದ ಪತ್ರಿಕೆಗಳಲ್ಲಿ ಉಪ ಸಂಪಾದಕರಾಗಿ, ಅನುವಾದಕರಾಗಿ ಕಾರ್ಯ ನಿರ್ವಹಿಸಿದ್ದರು. ಪರಂಜ್ಯೋತಿ ಅವರ ಪ್ರಮುಖ ಕೃತಿಗಳೆಂದರೆ ಒಲವು ಚೆಲುವಲ್ಲಿ, ಬದುಕು, ...
READ MORE