ಶೆಲ್ಲಿ ಕೂಡ್ಲಿಗಿ ಅವರ ಕಾದಂಬರಿ ‘ಕೇರಿ ಮುಟ್ಟಿದ ಮಾವು’. ಈ ಕಾದಂಬರಿಗೆ ಕವಿ, ಸಂಸ್ಕೃತಿ ಚಿಂತಕರಾದ ವಡ್ಡಗೆರೆ ನಾಗರಾಜಯ್ಯ ಅವರು ಬೆನ್ನುಡಿಗಳನ್ನು ಬರೆದಿದ್ದಾರೆ.
ಮಣೆಗಾರ್ ಶೆಕ್ಷಾವಲಿ ಎಂಬುದು ಇವರ ಪೂರ್ಣ ಹೆಸರು. ತಮ್ಮ ಹೆಸರಿನ (ಶೆ)ಕ್ಷಾವ(ಲಿ) ಮೊದಲ ಮತ್ತು ನಾಲ್ಕನೇ ಅಕ್ಷರ ಸೇರಿಸಿ ಜೊತೆಗೆ ಹುಟ್ಟೂರಿನ ಮೇಲಿನ ಅಭಿಮಾನದಿಂದ "ಶೆಲ್ಲಿ ಕೂಡ್ಲಿಗಿ" ಎಂಬ ಕಾವ್ಯನಾಮದ ಮೂಲಕ ನಾನು ಕೃತಿಗಳನ್ನು ರಚಿಸುತ್ತಿರುವೆ. ತಂದೆ ಅಬ್ದುಲ್ ರೋಫ್ ತಾಯಿ ಜಮಿಲಾ ಬೀ. ಪ್ರಾಥಮಿಕ ಶಿಕ್ಷಣ ಹುಟ್ಟೂರು ಕೂಡ್ಲಿಗಿ ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಯಲ್ಲಿ 1992ನೇ ಸಾಲಿನಿಂದ ಆರಂಭವಾಯಿತು. 1999ರಿಂದ ಪ್ರೌಢ ಶಿಕ್ಷಣನ್ನು ಅದೇ ಊರಿನ ಐತಿಹಾಸಿಕ ಶಾಲೆ ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಆರಂಭವಾಯಿತು. ಹೊಸಪೇಟೆ(ಪ್ರಸ್ತುತ ವಿಜಯನಗರ)ಯ ನೈಸೆಟ್ ...
READ MORE