ಕಾದಂಬರಿಕಾರ್ತಿ ಉಷಾನವರತ್ನರಾಂ ಅವರ ಸಾಮಾಜಿಕ ಕಾದಂಬರಿ ಕರುಣಾಳು ಬಾ ಬೆಳಕೆ. ಒಳ್ಳೇ ಮಕ್ಕಳು ಹುಟ್ಟಬೇಕಾದರೆ ಒಳ್ಳೆ ತಂದೆತಾಯಿಗಳಿಗೆ ಹುಟ್ಟಬೇಕಾಗುವುದು ನಿಜ. ವಿರಸ ದಾಂಪತ್ಯದ ಅನೈತಿಕ ಸಂಬಂಧದ ಮಕ್ಕಳು ಬೆಳೆಯುವ ಪರಿಸರ, ಆ ಮಕ್ಕಳ ಸಮಸ್ಯೆಗಳೇ ಬೇರೆ. ಕರುಣ ವಿವಾಹಪೂರ್ವದ ಅನೈತಿಕ ಸಂಬಂಧದಿಂದ ಜನಿಸಿದರೂ ಅವಳನ್ನ ತಮ್ಮ ಮಗಳೆಂದೇ ಪ್ರೀತಿ ಆದರದಿಂದ ಸಾಕಿದ ಜಾನಕಿ ಸುಬ್ರಹ್ಮಣ್ಯಂ ಅವಳಿಗಾಗಿ ಏನು ಮಾಡಲೂ ಸಿದ್ಧರಿದ್ದರು. ಆದರೆ ಅವಳ ನಿಜವಾದ ತಂದೆ ಭಾಸ್ಕರ ತನ್ನ ಪ್ರೇಯಸಿಯ ನೆನಪಿನ ಕುಡಿಯನ್ನು ತನ್ನೊಂದಿಗೆ ತನ್ನದೇ ಆದ ಮಕ್ಕಳೊಂದಿಗೆ ಬೆಳೆಸಿ ತಾನು ಮಾಡಿದ ತಪ್ಪಿಗಾಗಿ ಪಶ್ಚಾತ್ತಾಪಪಟ್ಟಾಗ ಪ್ರೇಯಸಿಯ ಪುತ್ರಿ ಕರುಣಾಳನ್ನು ಪತ್ನಿ ಶೈಲಜ ಒಪ್ಪುವಳೆ? ಕೊನೆಗೆ ಕರುಣಾ ತನ್ನ ನಿಜವಾದ ತಂದೆಯನ್ನು ಒಪ್ಪುವಳೇ? ಇದೇ ಈ ಕಾದಂಬರಿಯ ಜೀವಾಳ.
ಲೇಖಕಿ ಉಷಾ ನವರತ್ನರಾಂ ಅವರು ಹುಟ್ಟಿದ್ದು ಬೆಂಗಳೂರಿನಲ್ಲಿ. ತಂದೆ- ಎಂ.ವಿ. ಸುಬ್ಬರಾವ್. ತಾಯಿ- ಶಾಂತಾ. ಪ್ರಾರಂಭಿಕ ಶಿಕ್ಷಣವನ್ನು ಶಿವಮೊಗ್ಗದ ಮೇರಿ ಇಮ್ಯಾಕುಲೇಟ್ ಕಾನ್ವೆಂಟ್ ಹಾಗೂ ಬೆಂಗಳೂರಿನ ಮಹಿಳಾ ಸೇವಾ ಸಮಾಜದಲ್ಲಿ ಪೂರ್ಣಗೊಳಿಸಿದರು. ಆನಂತರ ಮೌಂಟ್ ಕಾರ್ಮಲ್ ಕಾಲೇಜಿನಿಂದ ಇಂಗ್ಲಿಷ್ ಸಾಹಿತ್ಯ ಹಾಗೂ ಇತಿಹಾಸದಲ್ಲಿ ಪದವಿ ಪಡೆದರು. ಪತ್ರಿಕೋದ್ಯಮದಲ್ಲಿ ಡಿಪ್ಲೊಮಾ ಪೂರೈಸಿದರು. ವಿದ್ಯಾರ್ಥಿನಿಯಾಗಿದ್ದಾಗಲೇ ಹಲವು ಲೇಖನಗಳನ್ನು ಪ್ರಕಟಿಸಿದರು. ಇಂಗ್ಲಿಷ್ ಮತ್ತು ಕನ್ನಡ ಪತ್ರಿಕೆಗಳ ಅಂಕಣಗಾರ್ತಿಯಾಗಿದ್ದು, ಗೆಳತಿ ಮತ್ತು ಉಷಾ ಪತ್ರಿಕೆಗಳ ಸಂಪಾದಕಿಯಾಗಿದ್ದರು. ಮಹಿಳಾ ಸೇವಾ ಸಮಾಜದಲ್ಲಿ ಅಧ್ಯಾಪಕಿಯಾಗಿ 27 ವರ್ಷ ಸೇವೆ ಸಲ್ಲಿಸಿ, ಸ್ವಯಂ ನಿವೃತ್ತಿ ಪಡೆದರು. ನಾಲ್ಕು ವರ್ಷ ರೀಜನಲ್ ಫಿಲಂ ಸೆನ್ಸಾರ್ ...
READ MORE