ಕಪ್ಪು

Author : ಕುಂ. ವೀರಭದ್ರಪ್ಪ

Pages 172

₹ 110.00




Year of Publication: 2014
Published by: ಕನ್ನಡ ಸಾಹಿತ್ಯ ಪರಿಷತ್ತು
Address: ಪಂಪ ಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು-560018

Synopsys

ದೇವದಾಸಿಯಂತಹ ಮೌಢ್ಯ ಹಾಗೂ ಅನಿಷ್ಟ ಪದ್ಧತಿಯ ಸುತ್ತ ಈ ಕಾದಂಬರಿಯನ್ನು ಹೆಣೆಯಲಾಗಿದೆ. ಗೌರಿ ಎನ್ನುವ ಸುಂದರ ಹುಡುಗಿ ಹಳ್ಳಿಯ ಗೌಡನ ಕಾಮದ ಕಣ್ಣಿಗೆ ಬೀಳುತ್ತಾಳೆ. ದೇವಸ್ಥಾನದ ಪೂಜಾರಿಗೆ ಎಲ್ಲಮ್ಮ ದೇವರು ಮೈಮೇಲೆ ಬಂದು ಗೌರಿ ದೇವರಿಗೆ ಮೀಸಲು ಎಂದು ಭವಿಷ್ಯ ನುಡಿಯುತ್ತಾನೆ. ಆಗ ಶುರುವಾಗುತ್ತದೆ ಈ ಅನಿಷ್ಟ ಪದ್ಧತಿಯಿಂದ ತಪ್ಪಿಸಿಕೊಳ್ಳಲು ಗೌರಿ ಮತ್ತು ಆಕೆಯ ಮನೆಯವರ ಓಟ. ಆ ಓಟದಲ್ಲಿ, ಹೋರಾಟದಲ್ಲಿ ಆಕೆಯ ತಂದೆತಾಯಿಯನ್ನು ಸಾಯಿಸಿ, ಇದ್ದೊಬ್ಬ ಅಣ್ಣನನ್ನು ದೂರ ಮಾಡಿ ಆಕೆಯನ್ನು ಮತ್ತೆ ಹಳ್ಳಿಗೆ ಕರೆತರಲಾಗುತ್ತದೆ. ಹೀಗೆ ದೇವದಾಸಿ ಪದ್ಧತಿ ಹೆಸರಲ್ಲಿ ನಡೆಯುತ್ತಿದ್ದ ದೌರ್ಜನ್ಯವನ್ನು ಎಳೆಎಳೆಯಾಗಿ ಬಿಡಿಸಿಡುವ ಪ್ರಯತ್ನ ಮಾಡಿದ್ದಾರೆ ಲೇಖಕರು. 

About the Author

ಕುಂ. ವೀರಭದ್ರಪ್ಪ
(01 October 1953)

ಕುಂ.ವೀ. ಎಂದೇ ಜನಪ್ರಿಯರಾಗಿರುವ ಕಾದಂಬರಿಕಾರ, ಕತೆಗಾರ ಕುಂ. ವೀರಭದ್ರಪ್ಪ ಅವರು ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಕೊಟ್ಟೂರಿನವರು. 1953ರ ಅಕ್ಟೋಬರ್ 1ರಂದು ಜನಿಸಿದರು. ‘ಬೇಲಿ ಮತ್ತು ಹೊಲ’ ಕಿರುಕಾದಂಬರಿಯ ಮೂಲಕ ಕನ್ನಡ ಸಾಹಿತ್ಯದ ಶಿಷ್ಟ ಪರಂಪರೆಯ ಬೇಲಿಗಳನ್ನು ಜಿಗಿದ ಕುಂ. ವೀರಭದ್ರಪ್ಪ, ಓದುಗರನ್ನು ಆಕರ್ಷಿಸಿದ್ದು ತಮ್ಮ ವಿಶಿಷ್ಟ ಭಾಷಾ ಪ್ರಯೋಗ ಮತ್ತು ನುಡಿಗಟ್ಟುಗಳಿಂದ. ಅವರ ಕತೆಗಳಲ್ಲಿ ಕಾದಂಬರಿಗಳಲ್ಲಿ ಕಾಣಿಸಿಕೊಂಡ ಭಾಷೆ ಅವರಿಗೆ ಸಾಹಿತ್ಯದಲ್ಲೊಂದು ಪ್ರತ್ಯೇಕ ಸ್ಥಾನ ಕಲ್ಪಿಸಿಕೊಟ್ಟಿತು. ’ಎಲುಗನೆಂಬ ಕೊರಚನೂ ಚವುಡನೆಂಬ ಹಂದಿಯೂ’, ’ಕತ್ತಲಿಗೆ ತ್ರಿಶೂಲ ಹಿಡಿದ ಕತೆ’ಗಳ ಮೂಲಕ ಸಣ್ಣ ಕತೆಯ ದಿಕ್ಕನ್ನು ಬದಲಾಯಿಸಿದರು. ಶಿವರಾಜ್ ...

READ MORE

Related Books