ಕಪಿಲೆ ಹರಿದಳು ಕಡಲಿಗೆ-ಈ ಕೃತಿಯು ಕರ್ನಾಟಕ ಸಂಗೀತ ವಿದುಷಿ ಬೆಂಗಳೂರು ನಾಗರತ್ನಮ್ಮ ಅವರ ಜೀವನಚರಿತ್ರೆ ಆಧರಿತ ಕಾದಂಬರಿ. ಲೇಖಕರು ಪ್ರೊ. ಮಲೆಯೂರು ಗುರುಸ್ವಾಮಿ. ನಂಜನಗೂಡಿನವರಾದ ಬೆಂಗಳೂರು ನಾಗರತ್ನಮ್ಮ ತಂದೆ ಸುಬ್ಬರಾಯರು. ದೇವದಾಸಿಯಾಗಿದ್ದ ತಾಯಿ ಪುಟ್ಟಲಕ್ಷಮ್ಮ ಅವರೂ ಸಂಗೀತಗಾರ್ತಿ. 1978 ನವೆಂಬರ್ 3 ರಂದು ನಾಗರತ್ಮಮ್ಮ ಜನಿಸಿದರು. 1892 ರಲ್ಲಿ ಮೈಸೂರಿನ ಚಾಮರಾಜ ಒಡೆಯರ ಅವರಿಂದ ಗೌರವಿಸಲ್ಪಟ್ಟರು. ಅನಂತರ ಅವರು ಮದ್ರಾಸಿನಲ್ಲಿ ನೆಲೆಸುತ್ತಾರೆ. ದೇಶಾದ್ಯಂತ 1235 ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಆಂಧ್ರಪ್ರದೇಶ ಸರ್ಕಾರದಿಂದ ಪ್ರತಿಷ್ಠಿತ ಗಂಡಬೇರುಂಡ ಪ್ರಶಸ್ತಿ ಪಡೆದರು. ತಮಿಳುನಾಡಿನ ತಿರುವಯ್ಯೂರಿನಲ್ಲಿಯ ಕಾವೇರಿ ನದಿ ತಟದಲ್ಲಿ ತಮ್ಮ ಗುರು ತ್ಯಾಗರಾಜ ಅವರ ಸಮಾಧಿ ಸ್ಥಳವನ್ನು ಜೀರ್ಣೋದ್ಧಾರ ಮಾಡಿದರು. 1952 ಮೇ 19 ರಂದು ನಿಧನರಾದರು. ಗುರು ತ್ಯಾಗರಾಜರ ಸಮಾಧಿ ಬಳಿಯೇ ಅವರ ಸಮಾಧಿ ಮಾಡಲಾಗಿದೆ. ಕಪಿಲಾ ಹಾಗೂ ಕಾವೇರಿ ನದಿಯೊಂದಿಗೆ ತಳುಕು ಹಾಕಿಕೊಂಡಿರುವ ಅವರ ಬದುಕು ಕೊನೆಗೆ ಕಡಲು ಸೇರುವ ಸಂಕೇತವಾಗಿ ಈ ಕಾದಂಬರಿಯು ಧ್ವನಿಸುತ್ತದೆ.
ಚಾಮರಾಜನಗರ ತಾಲೂಕಿನ ಮಲೆಯೂರು ಗ್ರಾಮದಲ್ಲಿ ಪ್ರೊ.ಮಲೆಯೂರು ಗುರುಸ್ವಾಮಿ ಅವರು 1947ರ ಆಗಸ್ಟ್ 1ರಂದು ಜನಿಸಿದರು. ತಂದೆ ಶಿವಣ್ಣ, ತಾಯಿ ಮರೆಮ್ಮ. ಪ್ರಸ್ತುತ ಮೈಸೂರಿನ ಹಿನಕಲ್ನ ಆಶ್ರಮ ರಸ್ತೆಯ ಮಹಾಮನೆಯಲ್ಲಿ ವಾಸ. ಜೆಎಸ್ಎಸ್ ಸಂಸ್ಥೆಯಲ್ಲಿ ವಿಶ್ರಾಂತ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಗುರುಸ್ವಾಮಿ ಅವರ ಸೃಜನಶೀಲ ಕೃತಿಗಳಾದ ಮಹಾಯಾತ್ರಿಕ, ಅಪ್ರತಿಮವೀರ, ಚರಿತ್ರೆಯ ಪುಟಕ್ಕೆ ಒಂದು ಟಿಪ್ಪಣಿ ಕಾದಂಬರಿಗಳು, ಮಾತೆಂಬುದು ಜ್ಯೋತಿರ್ಲಿಂಗ ವಚನ ಸಾಹಿತ್ಯ, ಶ್ರೀ ಕಾರ್ಯಸ್ವಾಮಿ ಮಠದ ಕ್ಷೇತ್ರ ಚರಿತ್ರೆ, ಶರಣ ಕಿರಣ ವ್ಯಕ್ತಿ ಚಿತ್ರ, ಪ್ರಭುಲಿಂಗ ಲೀಲೆ ವಿಮರ್ಶಾ ಕೃತಿಗಳನ್ನು ರಚಿಸಿದ್ದಾರೆ. ಮೂಡಲ ಸೀಮೆಯ ಕಥೆಗಳು, ಕಾಡಂಚಿನ ಕೋಗಿಲೆಗಳ ಕಲರವ, ಕಪಿಲಾ ...
READ MORE