‘ಕಲ್ಕಿ’ ಲಿಖಿತ ಪಟೇಲ್ ಅವರ ಕಾದಂಬರಿ. ಈ ಕೃತಿಗೆ ಡಾ.ಬೈರಮಂಗಲ ರಾಮೇಗೌಡ ಬೆನ್ನುಡಿ ಬರೆದಿದ್ದಾರೆ. ಕೃತಿಯ ಕುರಿತು ಬರೆಯುತ್ತಾ ‘ಕಲ್ಕಿಯ ಕಥೆ ಸರಳತೆಯಿಂದ ಸಂಕೀರ್ಣತೆಯತ್ತ ಸಾಗಿ ಕೌತುಕದಲ್ಲಿ ಮುಗಿಯುವಂಥದ್ದು, ಕಾದಂಬರಿಯ ಪ್ರಧಾನ ಪಾತ್ರ ವೃತ್ತಿಯಿಂದ ವಕೀಲನಾದ ರಮೇಶ್ ಆಯ್ಕೆಮಾಡಿಕೊಂಡ ವೃತ್ತಿಯ ವಿಚಾರದಲ್ಲಿ ಅವನಿಗೆ ಪ್ರೀತಿಯೂ ಇದೆ. ಗೌರವವೂ ಇದೆ, ನಿಷ್ಠೆಯೂ ಇದೆ. ನಾಲ್ಕಾರು ಜನ ಜ್ಯೂನಿಯರ್ ಗಳನ್ನು ಇಟ್ಟುಕೊಂಡು ಶಿಸ್ತು ಮತ್ತು ದಕ್ಷತೆಗಳಿಂದ ಕಾರ್ಯನಿರ್ವಹಿಸುವ ಅವನು ನ್ಯಾಯಾಲಯ ಹಾಗೂ ಕಚೇರಿಯ ಒತ್ತಡಗಳನ್ನು ಅಲ್ಲೇ ಬಿಟ್ಟು, ಮನೆಯಲ್ಲಿ ಪತ್ನಿ ಅನುಪಮಾಳನ್ನು ಸದಾ ಸಂತೋಷ ಸಮಾಧಾನಗಳಲ್ಲಿ ಇರುವಂತೆ ಮಾಡಿ ಪತಿಯ ಕರ್ತವ್ಯವನ್ನೂ ನಿರ್ವಹಿಸುತ್ತಿದ್ದವನು. ರಮೇಶ ಅನುಪಮಾ ಅವರದು ಸರಸ ಸಾಮರಸ್ಯಗಳ ಅನುರೂಪ ದಾಂಪತ್ಯ ಆಗಾಗ ಹರಿದಿನಗಳ ನೆಪದಲ್ಲಿ ಪತ್ನಿಯೊಂದಿಗೆ ಅವಳ ತವರೂರಿಗೂ ಹೋಗಿ ಅತ್ತೆ ಮಾವನಿಗೂ ಸಂತೋಷವುಂಟುಮಾಡುವ ಜಾಯಮಾನ ಅವನದು. ಅಲ್ಲಿಗೆ ಹೋದಾಗ ಮಾವನ ಸಂಬಂಧಿಕರ ಒಂದು ಕುಟುಂಬದವರು ವಯಸ್ಸಾದ ಅಜ್ಜ ಅಜ್ಜಿಯರನ್ನು ಊರಾಚೆಯ ಗುಡಿಸಲಿನಲ್ಲಿ ಕೊನೆಗಾಲವನ್ನು ಕಳೆಯುವಂತೆ ಮಾಡಿರುವುದನ್ನು ನೋಡಿ ಮರುಗುವಂಥ ಹೃದಯವಂತ. ಗೆಳೆಯರೊಂದಿಗೆ ಮಧುರ ಬಾಂಧವ್ಯವನ್ನು ಇರಿಸಿಕೊಳ್ಳುವಂಥ ಸ್ನೇಹಜೀವಿ. ದುರಾಸೆ ಇಲ್ಲದವನು, ಪರೋಪಕಾರಕ್ಕೆ ಸದಾ ಮುಂದೆ ಇರುವವನು’. ಎಂದು ಕಥಾ ಹಂದರವನ್ನು ಸೂಕ್ಷ್ಮವಾಗಿ ವಿವರಿಸಿದ್ದಾರೆ.
ಲೇಖಕಿ ಲಿಖಿತ ಪಿ. ಪಟೇಲ್ ಅವರು ಮೂಲತಃ ಮೈಸೂರಿನವರು. ಬೆಂಗಳೂರಿನಲ್ಲಿ ವಾಸವಿದ್ದಾರೆ. ತಂದೆ ಆರ್. ಪುರುಷೋತ್ತಮ, ತಾಯಿ ಬಿ. ಇಂದಿರಾ. ಬೆಂಗಳೂರು ವಿವಿಯ ಕಾನೂನು ಪದವೀಧರೆ. ಸದ್ಯ ಬೆಂಗಳೂರಿನಲ್ಲಿ ವಕೀಲೆ. ಸಾಹಿತ್ಯದಲ್ಲಿ ಆಸಕ್ತಿ. ಕೃತಿಗಳು: ಕಲ್ಕಿ, ಜನನಿ (ಕಾದಂಬರಿಗಳು) ...
READ MORE