ಪೂರ್ಣಚಂದ್ರ ತೇಜಸ್ವಿ ಅವರ ಮೊದಲ ಕಾದಂಬರಿ. 1962ರಲ್ಲಿ ರಚಿಸಿದ್ದ ಈ ಕಾದಂಬರಿಯನ್ನು ಅವರು ನಿಧನದ ನಂತರ (2013) ಪ್ರಕಟವಾಯಿತು. ತೇಜಸ್ವಿಯವರು ಈ ಕಾದಂಬರಿಯನ್ನು ತೇಜಸ್ವಿಯವರು ಪ್ರಕಟಿಸದೇ ಹಸ್ತಪ್ರತಿಯಲ್ಲಿ ಇಟ್ಟಿದ್ದರು. ತಮ್ಮ ಕೊನೆಯ ದಿನಗಳಲ್ಲಿ ತಿದ್ದಿ ಪ್ರಕಟಿಸಲು ಬಯಸಿದ್ದರು. ಈ ಕಾದಂಬರಿಯಲ್ಲಿನ ಅನೇಕ ಘಟನೆಗಳು, ಸನ್ನಿವೇಶಗಳು, ಆಶಯಗಳು ತೇಜಸ್ವಿಯವರ ಇನ್ನಿತರ ಕಥೆ, ಕಾದಂಬರಿಗಳಲ್ಲಿ ವಿಕಾಸ ಆಗಿರುವುದನ್ನು ಗಮನಿಸಬಹುದು. ತೇಜಸ್ವಿಯವರ ಸಾಹಿತ್ಯಾಭಿವ್ಯಕ್ತಿಯ ಶಕ್ತಿ-ಸಾಮರ್ಥ್ಯ ಹರೆಯದಲ್ಲಿಯೇ ಕೈಗೂಡಿತ್ತು ಎಂಬುದಕ್ಕೆ ಈ ಕೃತಿ ಸಾಕ್ಷಿಯಂತಿದೆ. ಕರ್ವಾಲೋ ಕಾದಂಬರಿಗೆ ಚಿತ್ರ ಬರೆದು ಅದರ ಸೌಂದರ್ಯ ಹೆಚ್ಚಿಸಿದ್ದ ಖ್ಯಾತ ಕಲಾವಿದ ಕೆ.ಟಿ.ಶಿವಪ್ರಸಾದರು ಈ ಕಾದಂಬರಿಗೂ ಚಿತ್ರ ರಚಿಸಿ ನೀಡಿದ್ದಾರೆ.
ಕನ್ನಡದ ಹೆಸರಾಂತ ಲೇಖಕ ಕುವೆಂಪು ಅವರ ಪುತ್ರರಾಗಿರುವ ಪೂರ್ಣಚಂದ್ರ ತೇಜಸ್ವಿ ಅವರು 08-09-1938ರದು ಜನಿಸಿದರು. ತಮ್ಮ ಬರವಣಿಗೆಯ ಮೂಲಕವೇ ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ. ’ಚಿದಂಬರ ರಹಸ್ಯ’ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿರುವ ತೇಜಸ್ವಿ ಅವರು ಕನ್ನಡದಲ್ಲಿ ನವ್ಯ ಸಾಹಿತ್ಯ ಚಳುವಳಿಯು ಉಚ್ಛ್ರಾಯ ಸ್ಥಿತಿಯಲ್ಲಿದ್ದ ದಿನಗಳಲ್ಲಿ ಅದಕ್ಕಿಂತ ಭಿನ್ನವಾದ ನೆಲೆಯ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದರು. ನವ್ಯ ಲೇಖಕರು ನಗರ ಕೇಂದ್ರಿತ, ವ್ಯಕ್ತಿನಿಷ್ಟ ಸಾಹಿತ್ಯ ರಚನೆಯಲ್ಲಿ ನಿರತರಾಗಿದ್ದ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದ ಬದುಕು ಕುರಿತ ಮತ್ತು ಅದು ಹಳಹಳಿಕೆಯ ಧ್ವನಿಯಲ್ಲಿ ಇರದ ಹಾಗೆ ನೋಡಿಕೊಂಡರು. ಲೋಹಿಯಾ ಚಿಂತನೆಗಳಿಂದ ಪ್ರೇರಿತರಾಗಿದ್ದ ...
READ MORE