ಕಾಗೆ ಮುಟ್ಟಿತು

Author : ಗೀತಾ ನಾಗಭೂಷಣ

Pages 276

₹ 120.00




Year of Publication: 2002
Published by: ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ
Address: ಸರಸ್ವತಿ ಗೋದಾಮ, ಕಲಬುರ್ಗಿ
Phone: 9448124431

Synopsys

ಖ್ಯಾತ ಕಾದಂಬರಿಗಾರ್ತಿ ಗೀತಾ ನಾಗಭೂಷಣ ಅವರ ಕಾದಂಬರಿ-ಕಾಗೆ ಮುಟ್ಟಿತು. ಬಡವರು ತಿಳಿಯದೇ ಮಾಡುವ ಸಣ್ಣ ತಪ್ಪುಗಳೂ ಮಹಾಪರಾಧಗಳಾಗಿ ಕಂಡು, 'ಆಳಿಗೊಂದು ಕಲ್ಲು ಎಸೆಯುವ ಈ ಏಕತರಫಿ ನ್ಯಾಯ ನೀಡುವ ಇಂದಿನ ಕುರುಡು ವ್ಯವಸ್ಥೆಯಲ್ಲಿ ಚಂದದ ಮುಖವಾಡಗಳ ಹಿಂದಿರುವ, ಉಳ್ಳವರ ಮೇಲಿನ ಕಪ್ಪು ಕಲೆಗಳು ಕಾಣಿಸುವುದೇ ಇಲ್ಲ. ಕದ್ದು ಮುಚ್ಚಿ ಮಾಡುವ ಕೆಲವು ಹುನ್ನಾರಗಳ ಪಿಂಡ'ಕ್ಕೆ ಕಾಗೆಯೂ ಮುಟ್ಟುವುದಿಲ್ಲ - ಅದು ಸುಳ್ಳನ್ನು ಸಮರ್ಥಿಸಿಕೊಳ್ಳುವುದಿಲ್ಲ. ಅಂತೆಯೇ 'ಝಟ ಬೋಲೆ ಕವ್ವಾ ಕಾಟೆ'ಯ ಈ - ಸಾಚಾತನವೇ 'ಕಾಗೆ ಮುಟ್ಟಿತು' ಕಾದಂಬರಿ. ಹೈದ್ರಾಬಾದ್ -ಕರ್ನಾಟಕ ಗ್ರಾಮ ಭಾಷೆ ಸೊಗಡಿನಿಂದ ಕಥೆಯ ನಿರೂಪಣೆಯೂ ಅತ್ಯಂತ ಪರಿಣಾಮಕಾರಿಯಾಗಿ, ಓದುಗರ ಮನವನ್ನು ಆವರಿಸಿಕೊಳ್ಳುತ್ತದೆ. 

About the Author

ಗೀತಾ ನಾಗಭೂಷಣ
(25 March 1942 - 28 June 2020)

ಕನ್ನಡದ ಲೇಖಕಿಯರಲ್ಲಿ ಒಬ್ಬರಾದ ಗೀತಾ ನಾಗಭೂಷಣ ಅವರು ತಮ್ಮ ಕಾದಂಬರಿ-ಕತೆಗಳ ಮೂಲಕ ಜನಪ್ರಿಯರಾದವರು. ಗುಲ್ಬರ್ಗದ ಬಡ ಕುಟುಂಬದಲ್ಲಿ 1942ರ ಮಾರ್ಚ್ 25ರಂದು ಜನಿಸಿದರು. ತಂದೆ ಶಾಂತಪ್ಪ-ತಾಯಿ ಶರಣಮ್ಮ. ಮೆಟ್ರಿಕ್ ಮುಗಿಸಿದ ಮೇಲೆ ಕೆಲವುಕಾಲ ಕಲೆಕ್ಟರ್ ಕಛೇರಿಯಲ್ಲಿ ಉದ್ಯೋಗ ಮಾಡಿ ಬೆಳಗಿನ ಶಾಲೆಯಲ್ಲಿ ಓದಿ ಪದವಿ ಪಡೆದು, ಸಂಜೆ ಕಾಲೇಜಿನಲ್ಲಿ ಓದಿ ಬಿಎಡ್ ಮತ್ತು ಎಂ.ಎ. ಪದವಿ ಗಳಿಸಿದರು. ಓದುವಾಗಲೇ ಉದ್ಯೋಗ ಮಾಡುತ್ತಿದ್ದ ಇವರು ಎಂ.ಎ. ಪದವಿ ಗಳಿಸಿದ ನಂತರ ಶ್ರೀ ನಗರೇಶ್ವರ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ, ಪ್ರಾಧ್ಯಾಪಕಿಯಾಗಿ, ಪ್ರಾಚಾರ್ಯೆಯಾಗಿ 30ವರ್ಷಗಳ ಸೇವೆ ಸಲ್ಲಿಸಿ ನಿವೃತ್ತರಾದರು. ...

READ MORE

Related Books