ಲೇಖಕ ಶ್ರೀಕೃಷ್ಣ ಆಲನಹಳ್ಳಿ ಅವರ ಕಾದಂಬರಿ-ಕಾಡು. ಗಿರೀಶ್ ಕಾರ್ನಾಡ್ ನಿರ್ದೇಶನದಲ್ಲಿ ಈ ಕಾದಂಬರಿಯು ಚಲನಚಿತ್ರವಾಯಿತು. ಶ್ರೀಕೃಷ್ಣ ಆಲನಹಳ್ಳಿ ಅವರಿಗೆ ಹೆಸರು ತಂದು ಕೊಟ್ಟ ಕೃತಿ ಇದು. ಚಲನಚಿತ್ರವಾಗಿಯೂ ಪ್ರೇಕ್ಷಕರ ಮೆಚ್ಚುಗೆ ಪಡೆದಿದೆ.
ಕವಿ-ಕತೆಗಾರ ಶ್ರೀಕೃಷ್ಣ ಆಲನಹಳ್ಳಿ ಅವರು ಜನಿಸಿದ್ದು 1947ರ ಏಪ್ರಿಲ್ 3ರಂದು. ಮೈಸೂರು ಜಿಲ್ಲೆ ಹೆಗ್ಗಡದೇವನಕೋಟೆ ತಾಲ್ಲೂಕಿನ ಆಲನಹಳ್ಳಿಯಲ್ಲಿ ಜನಿಸಿದ ಶ್ರೀಕೃಷ್ಣ ಕನ್ನಡದ ಪ್ರತಿಭಾವಂತ ಲೇಖಕರಲ್ಲಿ ಇವರು ಪ್ರಮುಖರು. ಕೆಲವು ಕಾಲ ಅಧ್ಯಾಪಕರಾಗಿ ಕೆಲಸ ಮಾಡಿದ ಶ್ರೀಕೃಷ್ಣ ಅವರು ನಗರೀಕರಣ ಮತ್ತು ಆಧುನಿಕ ಆರ್ಥಿಕತೆಯ ಸ್ಪರ್ಶಕ್ಕೆ ಸಿಕ್ಕ ಗ್ರಾಮೀಣ ಬದುಕಿನ ಪಲ್ಲಟಗಳನ್ನು ಅತ್ಯಂತ ಸಹಜ ರೀತಿಯಲ್ಲಿ ತಮ್ಮ ಕಥೆ-ಕಾದಂಬರಿಗಳಲ್ಲಿ ಕಟ್ಟಿಕೊಟ್ಟಿದ್ದಾರೆ. ಶ್ರೀಕೃಷ್ಣ ಅವರ ಕೃತಿಗಳು: ಮಣ್ಣಿನ ಹಾಡು, ಕಾಡುಗಿಡದ ಹಾಡು-ಪಾಡು, ಪ್ರಕಟಿಸಲಾಗದ ಪದ್ಯಗಳು, ಡೋಗ್ರಾ ಪಹಾಡಿ ಗೀತೆಗಳು (ಕವನ ಸಂಕಲನಗಳು). ತಪ್ತ, ಫೀನಿಕ್ಸ್ (ಕಥಾ ಸಂಕಲನಗಳು), ಕಾಡು, ಪರಸಂಗದು ...
READ MORE