ಕಾಡಿಗೊಂದು ಕಿಟಕಿ-ಲೇಖಕ ಎಂ. ದಾನೇಶ್ ಅವರ ಕಾದಂಬರಿ. ಒಂದು ಖಾಸಗಿ ಕಾಡು ಅಥವಾ ದಟ್ಟವಾದ ಖಾಸಗಿ ತೋಟದಲ್ಲಿ ಅನೇಕ ವರ್ಷಗಳಿಂದ ಬದುಕು ಸವೆಸುತ್ತಿರುವ ಒಂದು ಜನಸಮೂಹದ ಬದುಕು, ಬವಣೆ, ಪರಿಶ್ರಮ, ಸಂತಸ, ಸಂಕಟಗಳನ್ನು ಚಿತ್ರಿಸುತ್ತದೆ. ಅಲ್ಲದೆ, ಹೊರ ಜಗತ್ತಿನೊಂದಿಗೆ ಅವರಿಗಿರುವ ಸಂಬಂಧ, ತಾಕಲಾಟದ ಕತೆಯನ್ನು ನಿರೂಪಿಸುತ್ತದೆ. ನಗರದಲ್ಲಿ ನಡೆಯುವ ಕಾರ್ಯವೊಂದು ಈ ಕಾಡಂಚಿನ ಬದುಕನ್ನು ಆವರಿಸಿಕೊಳ್ಳುವ ರೀತಿ ಮತ್ತು ಆ ವರೆಗಿನ ನೆಮ್ಮದಿಗೆ ಆ ಕ್ರೌರ್ಯದಿಂದಾಗುವ ಹಾನಿ ಈ ಇಡೀ ಕಾದಂಬರಿಯ ದೊಡ್ಡ ತಿರುವು ಇಲ್ಲಿಯ ಕಥಾ ವಸ್ತು.
ಎಂ.ದಾನೇಶ್ ಅವರು ದಕ್ಷಿಣ ಕನ್ನಡ ಜಿಲ್ಲೆಯ ಪಾಣೆಮಂಗಳೂರು (ಜನನ: 28-07-1992) ಮೂಲದವರು. ಮಂಗಳೂರಿನ ರೋಶನಿ ನಿಲಯ ಕಾಲೇಜಿನಿಂದ ಬಿ.ಎಸ್.ಡಬ್ಲ್ಯೂ ಪದವಿ ಹಾಗೂ ಎಸ್.ಡಿ.ಎಂ ಕಾಲೇಜು ಉಜಿರೆಯಲ್ಲಿ ಕಮ್ಯೂನಿಕೇಶನ್ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಗರಿಗೆದರಿದ ಕೊಡೆ- ಕವನ ಸಂಕಲನ, ಪುಷ್ಪಧ್ವನಿ ಹಾಗೂ ಕಾಡಿಗೊಂದು ಕಿಟಕಿ-ಇವು ಕಾದಂಬರಿಗಳನ್ನು ರಚಿಸಿದ್ದಾರೆ. ...
READ MORE