‘ಜೂಜು’ ಕೆ.ಎನ್. ವೆಂಕಟಸುಬ್ಬರಾವ್ ಅವರ ಕಾದಂಬರಿ. ಇವರು ಕೆ.ವಿ.ಎನ್. (ಕಳಲೆ ನಾಗರಾಜರಾವ್ ವೆಂಕಟಸುಬ್ಬರಾವ್) ಎಂದೇ ಪರಿಚಿತರು. ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವೀಧರರು. ಪತ್ರಕರ್ತರಾಗಿ ಸೇವೆ ಸಲ್ಲಿಸಿ ನಿವೃತ್ತರು. ಇವರ ಜೂಜು ಕಾದಂಬರಿಯು ಕಥಾ ವಸ್ತು, ನಿರೂಪಣಾ ಶೈಲಿ, ಪಾತ್ರಗಳ ಸೃಷ್ಟಿ, ಸನ್ನಿವೇಶದ ಜೋಡಣೆ, ಪರಿಣಾಮಕಾರಿ ಸಂಭಾಷಣೆ ಇತ್ಯಾದಿ ಸಾಹಿತ್ಯಕ ಅಂಶಗಳಿಂದ ಓದುಗರ ಗಮನ ಸೆಳೆಯುತ್ತದೆ.
ರಾಜ್ಯದ ಸಾಂಸ್ಕೃತಿಕ ಮತ್ತು ಪತ್ರಿಕೋದ್ಯಮ ವಲಯಗಳಲ್ಲಿ ಕೆ.ಎನ್.ವಿ. ಎಂದೇ ಪರಿಚಿತರಾಗಿರುವ ಕಳಲೆ ನಾಗರಾಜರಾವ್ ವೆಂಕಟಸುಬ್ಬರಾವ್ ಇಂಗ್ಲೀಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವೀಧರರು (ಮೈಸೂರು ವಿಶ್ವವಿದ್ಯಾನಿಲಯ). 1978ರಲ್ಲಿ ಉಪಸಂಪಾದಕರಾಗಿ ಕನ್ನಡ ದೈನಿಕ ಕನ್ನಡ ಪ್ರಭ ಪ್ರವೇಶಿಸಿದರು. ಪತ್ರಿಕೆಯ ಸುದ್ದಿ ಮೇಜು, ಸಾಪ್ತಾಹಿಕ ಪ್ರಭ ಮತ್ತು ಚಿತ್ರಪಭ ವಿಭಾಗಗಳಲ್ಲಿ ಕೆಲಸ ಮಾಡಿದರು. 1993ರಲ್ಲಿ ಹಿರಿಯ ವರದಿಗಾರರಾಗಿ ಇಂಗ್ಲೀಷ್ ದೈನಿಕ ದೈನಿಕ ದಿ ಹಿಂದು (ಬೆಂಗಳೂರು ಆವೃತ್ತಿ) ಸೇರಿದರು. 2011 ರಲ್ಲಿ ವಿಶೇಷ ವರದಿಗಾರರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದಾರೆ. ಕೃತಿಗಳು: ಝೂಲಾಘಾಟ್ (1988), ತಂತ್ರ (2000), ಮೃಗ (2003) ಇಂದ್ರಪ್ರಸ್ಥ (2009) ಹಾಗೂ ಜೂಜು ...
READ MORE