ಜೀವ ಜಾತ್ರೆ

Author : ಮೌನೇಶ ಬಡಿಗೇರ

Pages 416

₹ 450.00




Year of Publication: 2024
Published by: ಅಂಕಿತ ಪುಸ್ತಕ
Address: #53, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು - 560 004.
Phone: 080 - 2661 7100 / 2661 7755

Synopsys

‘ಜೀವ ಜಾತ್ರೆ’ ಮೌನೇಶ ಬಡಿಗೇರ ಅವರ ಕಾದಂಬರಿಯಾಗಿದೆ. ಇದಕ್ಕೆ ಎಚ್. ಎಸ್. ರಾಘವೇಂದ್ರ ರಾವ್ ಅವರ ಬೆನ್ನುಡಿ ಬರಹವಿದೆ; ಕಥೆ, ಕವಿತೆ, ಕಾದಂಬರಿ ಮುಂತಾದ ಪ್ರಕಾರಗಳ ಸಾಧ್ಯತೆಗಳನ್ನು ಅರಸುವ ಕೆಲಸವು 'ಸೃಜನಶೀಲ ಕಲ್ಪನೆ' ಮತ್ತು 'ಮಾಧ್ಯಮ ಶೋಧನೆ'ಗಳನ್ನು ಅವಲಂಬಿಸಿರುತ್ತದೆ. ಇವುಗಳ ಜೊತೆಗೆ, ಜಡವಲ್ಲದ ಕೇವಲ ಬೌದ್ಧಿಕವಲ್ಲದ ತಾತ್ವಿಕ ಕುತೂಹಲ/ಚಿಂತನೆಯೂ ಅದಕ್ಕೆ ಅಗತ್ಯವಾದ ಇನ್ನೊಂದು ಗುಣ. ಇದೆಲ್ಲದರ ಸಂಗಡ ಕತೆಗಾರನಿಗೆ ಲೋಕವನ್ನು ಅದರ ಸ್ಥೂಲನೆಲೆಯಲ್ಲಿ ಮಾತ್ರವಲ್ಲ, ವಿವರಗಳಲ್ಲಿ ಕಾಣುವ ಗುಣವೂ ಬೇಕು. 'ಮೂರ್‍ತ' ಮತ್ತು 'ಅಮೂರ' ಒಟ್ಟಿಗೆ ಗ್ರಹಿಸುವ, ಒಟ್ಟಾಗಿ ಹೆಣೆಯುವ ಕೆಲಸ ಬಹಳ ಜಟಿಲವಾದುದು. ಮೌನೇಶ್ ಈ ಎಲ್ಲ ಶಕ್ತಿಗಳನ್ನೂ ಬೇರೆ ಬೇರೆ ಪ್ರಮಾಣದಲ್ಲಿ ಪಡೆದಿದ್ದಾರೆ ಎಂಬುವುದನ್ನು ಈ ಪುಸ್ತಕದಲ್ಲಿ ನೋಡಬಹುದು.

About the Author

ಮೌನೇಶ ಬಡಿಗೇರ

ರಂಗನಿರ್ದೇಶಕ, ನಟ ಮೌನೇಶ್ ಬಡಿಗೇರ ಕತೆಗಾರ ಕೂಡ. ’ಮಾಯಾ ಕೋಲಾಹಲ’ ಪ್ರಕಟಿತ ಕತೆಗಳ ಸಂಕಲನ. ಸೂಜಿದಾರ’ ಎಂಬ ಚಿತ್ರ ನಿರ್ದೇಶಿಸಿದ್ದಾರೆ. ಕನ್ನಡ ರಂಗಭೂಮಿಯಲ್ಲಿ ಸಕ್ರಿಯರಾಗಿರುವ ಮೌನೇಶ ಅಭಿನಯ ಕಲಿಕೆಯ ಕಾರ್ಯಾಗಾರ ನಡೆಸುತ್ತಿದ್ದಾರೆ. ʻಮಾಯಾಕೋಲಾಹಲʼ ಸಂಕಲನಕ್ಕೆ 2015ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರ, ಟೊಟೊ ಪುರಸ್ಕಾರ', 'ಡಾ. ಯು ಆರ್ ಅನಂತಮೂರ್ತಿ ಪುರಸ್ಕಾರ', `ಬಸವರಾಜ ಕಟ್ಟಿಮನಿ ಪುರಸ್ಕಾರ ಪಡೆದಿದ್ದಾರೆ.  “ವಿಶಾಂಕೇ ಅರ್ಥಾತ್ ವಿಧ್ವಂಸಕ ಶಾಂತಿ ಕೇಂದ್ರ' ('ರಂಗಭೂಮಿ' ಉಡುಪಿ ನಡೆಸಿದ 'ಡಾ. ಹೆಚ್. ಶಾಂತಾರಾಮ್ ವಿಶ್ವ ಕನ್ನಡ ನಾಟಕ ರಚನಾ ಸ್ಪರ್ಧೆ'ಯಲ್ಲಿ ಪ್ರಥಮ ಬಹುಮಾನ ಪಡೆದ ಕೃತಿ) ಹಾಗೂ 'ಟಪಾಲುಮನಿ'(ರವೀಂದ್ರನಾಥ ಠಾಕೂರರ ಡಾಕ್‌ಘರ್‌ ...

READ MORE

Related Books