ರಂಗನಿರ್ದೇಶಕ, ನಟ ಮೌನೇಶ್ ಬಡಿಗೇರ ಕತೆಗಾರ ಕೂಡ. ’ಮಾಯಾ ಕೋಲಾಹಲ’ ಪ್ರಕಟಿತ ಕತೆಗಳ ಸಂಕಲನ. ಸೂಜಿದಾರ’ ಎಂಬ ಚಿತ್ರ ನಿರ್ದೇಶಿಸಿದ್ದಾರೆ. ಕನ್ನಡ ರಂಗಭೂಮಿಯಲ್ಲಿ ಸಕ್ರಿಯರಾಗಿರುವ ಮೌನೇಶ ಅಭಿನಯ ಕಲಿಕೆಯ ಕಾರ್ಯಾಗಾರ ನಡೆಸುತ್ತಿದ್ದಾರೆ. ʻಮಾಯಾಕೋಲಾಹಲʼ ಸಂಕಲನಕ್ಕೆ 2015ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರ, ಟೊಟೊ ಪುರಸ್ಕಾರ', 'ಡಾ. ಯು ಆರ್ ಅನಂತಮೂರ್ತಿ ಪುರಸ್ಕಾರ', `ಬಸವರಾಜ ಕಟ್ಟಿಮನಿ ಪುರಸ್ಕಾರ ಪಡೆದಿದ್ದಾರೆ.
“ವಿಶಾಂಕೇ ಅರ್ಥಾತ್ ವಿಧ್ವಂಸಕ ಶಾಂತಿ ಕೇಂದ್ರ' ('ರಂಗಭೂಮಿ' ಉಡುಪಿ ನಡೆಸಿದ 'ಡಾ. ಹೆಚ್. ಶಾಂತಾರಾಮ್ ವಿಶ್ವ ಕನ್ನಡ ನಾಟಕ ರಚನಾ ಸ್ಪರ್ಧೆ'ಯಲ್ಲಿ ಪ್ರಥಮ ಬಹುಮಾನ ಪಡೆದ ಕೃತಿ) ಹಾಗೂ 'ಟಪಾಲುಮನಿ'(ರವೀಂದ್ರನಾಥ ಠಾಕೂರರ ಡಾಕ್‌ಘರ್ ನಾಟಕದ ರೂಪಾಂತರ) ನಾಟಕಗಳು.
ಇನ್ನು, ನೀನಾಸಮ್ ನಿರ್ಮಿಸಿದ 'ಕನ್ನಡ ಕಾವ್ಯ ಕನ್ನಡಿ'ಯಲ್ಲಿ ಕುವೆಂಪು ಹಾಗೂ ಚಂದ್ರಶೇಖರ ಕಂಬಾರರ ಪದ್ಯಗಳ ದೃಶ್ಯಕಾವ್ಯ ನಿರ್ದೇಶನ, ವಿವೇಕ ಶಾನಭಾಗರ ಕಥೆ ಆಧಾರಿತ 'ನಿರ್ವಾಣ' ಕಿರುಚಿತ್ರ, 'ಸೂಜಿದಾರ' 2019ರಲ್ಲಿ ರಾಜ್ಯಾದ್ಯಂತ ತೆರೆಕಂಡ ಕನ್ನಡ ಚಲನಚಿತ್ರವಾಗಿದೆ.
'ಪ್ರೇಮವೆಂಬ ಅವರ್ಗೀಯ ವ್ಯಂಜನʼ ಕೃತಿಯು ಇವರ ಇತ್ತೀಚಿನ ಪ್ರೇಮದ ಕುರಿತಾದ ಗ-ಪದ್ಯಗಳ ಸಂಕಲನವಾಗಿದೆ. ಹೀಗೆ ತಮ್ಮ ಬರಹದ ಜೊತೆ ಅಭಿನಯ ಶಿಕ್ಷಕನಾಗಿ ಗುರುತಿಸಿಕೊಂಡಿರುವ ಮೌನೇಶ ಬಡಿಗೇರ ಅವರಿಗೆ ಈ ಕ್ಷೇತ್ರದಲ್ಲಿ ಸುಮಾರು ಹದಿನಾರು ವರ್ಷಗಳಿಗೂ ಮಿಕ್ಕ ಅನುಭವವಿದೆ.