ಜನಿವಾರ ಮತ್ತು ಶಿವದಾರ

Author : ಬಸವರಾಜ ಕಟ್ಟೀಮನಿ

Pages 250




Year of Publication: 1934
Published by: ಶಾರದಾ ಪ್ರಕಟನಾಲಯ
Address: ಬೆಂಗಳೂರು

Synopsys

ಮಗಳ ಮದುವೆಗೆ ಸಾಕಷ್ಟು ವರದಕ್ಷಿಣೆ ನೀಡಲಾಗದ ಅಸಹಾಯಕ ಪಾಲಕರೊಬ್ಬರ ದುರ್ಬರ ಪರಿಸ್ಥಿತಿ ಹಾಗೂ ಅವರ ಮಗಳ ಕಣ್ಣೀರು ಒಂದೆಡೆ ಮತ್ತು ಸಾಮಾಜಿಕ ಕ್ರೌರ್ಯ ಮತ್ತೊಂದೆಡೆ. ಈ ಎರಡೂ ಅಂಶಗಳು ಕಾದಂಬರಿಯ ವಸ್ತುಗಳಾದವು. 1933ರಲ್ಲಿಯ ಈ ಸಾಮಾಜಿಕ ಸನ್ನಿವೇಶವು 1954ರಲ್ಲಿಯೂ ಬದಲಾಗದ್ದು ಲೇಖಕ ಬಸವರಾಜ ಕಟ್ಟೀಮನಿ ಅವರಲ್ಲಿ ನೋವುಂಟು ಮಾಡಿದ್ದು, ಈ ಸಾಮಾಜಿಕ ಕ್ರೌರ್ಯವನ್ನೇ ಕಾದಂಬರಿಯ ಕೇಂದ್ರವಾಗಿಸಿದ್ದಾರೆ.

ವಿಜಾತಿ ಯುವಕನನ್ನು ಮದುವೆಯಾಗಿ ಓಡಿ ಹೋಗುವುದು, ನಂತರ ಅವರು ಸಮಾಜದ ಕಟು ಟೀಕೆಗೆ ಒಳಗಾಗುವುದು ಮಾತ್ರವಲ್ಲ; ಬಹುತೇಕ ಪ್ರಕರಣಗಳು ಸಾವಿನಲ್ಲಿ ಅಂತ್ಯ ಕಾಣುವ ವೃತ್ತಾಂತಗಳು ಇವೇ ಮೊದಲಾದ ಸನ್ನಿವೇಶಗಳು ಕಾದಂಬರಿಯ ಸಂವೇದನಾಶೀಲತೆಯನ್ನು ಹೆಚ್ಚಿಸಿದ್ದು ಒಂದೆಡೆಯಾದರೆ ಧರ್ಮ-ಜಾತಿ-ಮತಗಳ ಮಧ್ಯೆ ಅಮಾನವೀಯವಾದ ಬದುಕಿನ ನರಳಾಟವನ್ನೂ ಸಹ ಇಲ್ಲಿ ಪರಿಣಾಮಕಾರಿಯಾಗಿ ಚಿತ್ರಿತವಾಗಿದೆ.

About the Author

ಬಸವರಾಜ ಕಟ್ಟೀಮನಿ
(05 October 1919 - 23 October 1989)

ಬಸವರಾಜ ಕಟ್ಟೀಮನಿಯವರು ಬದುಕು ಹಾಗೂ ಸಾಹಿತ್ಯದಲ್ಲೂ  ಕ್ರಾಂತಿಕಾರಿಯಾಗಿದ್ದರು. 1919 ಅಕ್ಟೋಬರ್‌ 5 ರಂದು ಬೆಳಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕಿನ ಮಲಾಮರಡಿ ಗ್ರಾಮದಲ್ಲಿ ಜನಿಸಿದರು. ಅವರ ಮೊದಲ ಕಥೆ ’ಕಾರವಾನ್’, ಕಟ್ಟೀಮನಿಯವರ ಮೊದಲೆರಡು ಕಾದಂಬರಿಗಳು ಸ್ವಾತಂತ್ರ್ಯ ಹೋರಾಟವನ್ನು ಕುರಿತಾಗಿ ಬರೆದಂಥವು. ಆ ಬಳಿಕ ಅವರು ಸಮಾಜದಲ್ಲಿ ನಡೆಯುತ್ತಿರುವ ಕಾರ್ಮಿಕ ಶೋಷಣೆ, ಸ್ತ್ರೀಶೋಷಣೆ, ಬಡವರ ಶೋಷಣೆ, ದಲಿತರ ಶೋಷಣೆ—ಇವೆಲ್ಲವಗಳ ವಿರುದ್ಧ ಕಟುವಾಗಿ ಬರೆದಿದ್ದಾರೆ.  ಕಥಾ ಸಂಕಲನ - ಸೆರೆಯಿಂದ ಹೊರಗೆ, ಆಗಸ್ಟ್ ಒಂಬತ್ತು, ಗುಲಾಬಿ ಹೂ, ಜೋಳದ ಬೆಳೆಯ ನಡುವೆ, ಜೀವನ ಕಲೆ, ಸುಂಟರಗಾಳಿ, ಸೈನಿಕನ ಹೆಂಡತಿ, ಹುಲಿಯಣ್ಣನ ಮಗಳು, ಗರಡಿಯಾಳು. ನಾಟಕ ...

READ MORE

Related Books