‘ಜಾಗೃತಿ’ ಕೆ.ಚಿನ್ನಪ್ಪ ಭಾರತಿ ಅವರ ಕಾದಂಬರಿಯಾಗಿದೆ. ಐದು ಭಾರತೀಯ ಭಾಷೆಗಳಲ್ಲದೆ ಇಂಗ್ಲಿಷ್ನಲ್ಲಿಯೂ ಭಾಷಾಂತರಗೊಂಡ ಈ ಕೃತಿ ಮುಖ್ಯವಾಗಿ ಗುಡ್ಡಗಾಡು ಜನಾಂಗವೊಂದರ ಕ್ರಾಂತಿಕಾರಿ ಕಥೆಯನ್ನು ಹೇಳುತ್ತದೆ. ನಾಗರಿಕತೆಯಿಂದ ಬಹುದೂರ ತಮ್ಮ ಪಾಡಿಗೆ ಬದುಕುತ್ತಿರುವ ಜನರಿಗೆ ಅಧಿಕಾರಶಾಹಿಯಿಂದ ಎದುರಾಗುವ ಕಿರುಕುಳದ ಚಿತ್ರಣವಿದೆ.
ಕೆ. ಸುಶೀಲಾ ಅವರು ಆರೋಗ್ಯ, ವೈದ್ಯಕೀಯ ಹಾಗೂ ಮನೋವೈದ್ಯಕೀಯ ವಿಚಾರದ ಕುರಿತು ಹಲವಾರು ಕೃತಿಗಳನ್ನು ಬರೆದಿದ್ದಾರೆ. ಕೃತಿಗಳು: ಆಧುನಿಕ ಖಾಯಿಲೆಗಳ ವಿಸ್ಮಯಲೋಕ, ಕುಲದ ನೆಲೆ ...
READ MOREಹೊಸತು-2004- ಮಾರ್ಚ್
ತಮಿಳಿನ ಕಾದಂಬರಿಯೊಂದರ ಕನ್ನಡಾನುವಾದ. ಐದು ಭಾರತೀಯ ಭಾಷೆಗಳಲ್ಲದೆ ಇಂಗ್ಲಿಷ್ನಲ್ಲಿಯೂ ಭಾಷಾಂತರ |ಗೊಂಡ ಈ ಕೃತಿ ಮುಖ್ಯವಾಗಿ ಗುಡ್ಡಗಾಡು ಜನಾಂಗವೊಂದರ ಕ್ರಾಂತಿಕಾರಿ ಕಥೆಯನ್ನು ಹೇಳುತ್ತದೆ. ನಾಗರಿಕತೆಯಿಂದ ಬಹುದೂರ ತಮ್ಮ ಪಾಡಿಗೆ ಬದುಕುತ್ತಿರುವ ಜನರಿಗೆ ಅಧಿಕಾರಶಾಹಿಯಿಂದ ಎದುರಾಗುವ ಕಿರುಕುಳದ ಚಿತ್ರಣವಿದೆ. ಶೋಷಿತ ವರ್ಗಗಳ ಹೊಸ ಪೀಳಿಗೆ ಅನ್ಯಾಯದ ವಿರುದ್ಧ ಸಿಡಿದು ಹೋರಾಟಗಾರರಾಗಿ ರೂಪುಗೊಂಡಿರು ವುದು ಕಾದಂಬರಿಯ ವಸ್ತು ಶ್ರಮಜೀವಿ - ಅಧಿಕಾರಶಾಹಿ ವರ್ಗಗಳ ಮುಖಾಮುಖಿ.