ಇಂಡಿಯಾ ಮತ್ತು ಇರಾನ್ ಈ ಎರಡು ದೇಶದ ಹೆಸರುಗಳ ಸಂಯುಕ್ತ ಪದವೇ ಇಂಡಿರಾನ್. ರಾನಿನ ಹೆಣ್ಣು ಮತ್ತು ಇಂಡಿಯಾದ ಗಂಡಿನ ಮುಖಾಮುಖಿ ನಿರೂಪಿಸುವ ಕಥಾಹಂದರವನ್ನು ಒಳಗೊಂಡಿದೆ ಕಿರುಕಾದಂಬರಿ. ಇರಾನಿನ ಹೆಣ್ಣು ಭಾರತದ ಗಂಡು ಇಬ್ಬರೂ ಹದಿಹರೆಯಯಲ್ಲಿರುವಾಗ ಪರಸ್ಪರ ಸಂಧಿಸಿ, ಪರಿಚಯಿಸಿಕೊಂಡ ನೆನಪು ಮತ್ತು ಆ ನೆನಪಿನ ಮುಂದುವರಿಕೆಯಾಗಿ ದೀರ್ಘಾವಧಿಯ ಕಾಲ ನಡೆದ ಇಮೇಲ್ ವಿನಿಮಯ, ಅದರಿಂದ ಉಳಿದುಕೊಂಡ ಸಂಬಂಧವೇ ಕಾದಂಬರಿಯ ಪ್ರಮುಖ ವಸ್ತು. ಇರಾನಿನ ರಾಜಕಾರಣ, ರಾಜಕೀಯ ಬಿಕ್ಕಟ್ಟು, ತೈಲ, ಭಾರತ, ಇರಾನ್ ದ್ವಿಪಕ್ಷೀಯ ಸಂಬಂಧ, ಇರಾನ್ ಸಂಸ್ಕೃತಿ, ಸಾಮಾಜಿಕ ಬದುಕಿನ ಬಗ್ಗೆಯೂ ಹೊರಳಿಕೊಂಡು ಕಾದಂಬರಿ ವಸ್ತು ವಿಸ್ತಾರದ ಪರಿಧಿ ಹೆಚ್ಚಿಸಿಕೊಂಡಿದೆ. ಇಬ್ಬರ ಇ ಮೇಲ್ ಪತ್ರ ಸಂಭಾಷಣೆಯಲ್ಲಿ ಪ್ರಸ್ತಾಪವಾಗುವ ಇರಾನಿನ ನಿರಂಕುಶ ರಾಜಸತ್ತೆ ಇಸ್ಲಾಮಿಕ್ ಧಾರ್ಮಿಕ ಸರ್ವಾಧಿಕಾರ ಸತ್ತೆಯ ಕಡೆಗೆ ಹೊರಳುವುದು, ಆ ನಂತರ ಧರ್ಮಗುರುಗಳ ಬಿಗಿ ಹಿಡಿತದಿಂದ ಪಾರಾಗಲು ದೇಶ ಹೆಣಗಾಡುವುದು ಹೀಗೆ ಪ್ರಮುಖ ವಿಷಯಗಳ ಬಗ್ಗೆ ಕೃತಿಯಲ್ಲಿ ವಿವರಗಳನ್ನು ನೀಡಿದ್ದಾರೆ.