ʼಹೊಟ್ಟೆಗಾಗಿ ಗೇಣು ಬಟ್ಟೆಗಾಗಿʼ ಸಾಮಾಜಿಕ ಕಾದಂಬರಿಯಾಗಿದ್ದು ಲೇಖಕಿ ಉಷಾ ನವರತ್ನರಾಂ ಅವರಿಂದ ರಚಿತವಾಗಿದೆ. ಕ್ಯಾಬರೆ ನರ್ತಕಿಯೊಬ್ಬಳ ಸುತ್ತ ಈ ಕಾದಂಬರಿಯು ಸುತ್ತುತ್ತದೆ. 37 ಅಧ್ಯಾಯಗಳನ್ನು ಹೊಂದಿದೆ. ಕ್ಯಾಬರಿ ನರ್ತಕಿಯ ಬದುಕಿನ ಏರಿಳಿತಗಳು, ಜನರು ಅವಳನ್ನು ನೋಡುವ ಪರಿ ಹಾಗೂ ಅವಳ ಬದುಕಿನಲ್ಲಿ ಅನುಭವಿಸುವ ನೋವುಗಳು, ಕ್ಷಣಮಾತ್ರದಲ್ಲಿ ಬದಲಾಗುವ ಬದುಕಿನ ಚಿತ್ರಣಗಳನ್ನು ಲೇಖಕಿ ಸರಳಭಾಷೆಯಲ್ಲಿ ರಚಿಸಿದ್ದಾರೆ. ಬದುಕಿನ ಒತ್ತಡಕ್ಕೆ ಮಣಿದು ನರ್ತಕಿಯೊಬ್ಬಳು ಕ್ಯಾಬರೆ ನರ್ತಕಿಯಾಗುವ, ಸಮಾಜದಲ್ಲಿ ಹೆಣ್ಣೊಬ್ಬಳು ಅನುಭವಿಸುವ ತೊಂದರೆಗಳನ್ನು ಈ ಕಾದಂಬರಿಯು ತೆರೆದಿಡುತ್ತದೆ.
ಲೇಖಕಿ ಉಷಾ ನವರತ್ನರಾಂ ಅವರು ಹುಟ್ಟಿದ್ದು ಬೆಂಗಳೂರಿನಲ್ಲಿ. ತಂದೆ- ಎಂ.ವಿ. ಸುಬ್ಬರಾವ್. ತಾಯಿ- ಶಾಂತಾ. ಪ್ರಾರಂಭಿಕ ಶಿಕ್ಷಣವನ್ನು ಶಿವಮೊಗ್ಗದ ಮೇರಿ ಇಮ್ಯಾಕುಲೇಟ್ ಕಾನ್ವೆಂಟ್ ಹಾಗೂ ಬೆಂಗಳೂರಿನ ಮಹಿಳಾ ಸೇವಾ ಸಮಾಜದಲ್ಲಿ ಪೂರ್ಣಗೊಳಿಸಿದರು. ಆನಂತರ ಮೌಂಟ್ ಕಾರ್ಮಲ್ ಕಾಲೇಜಿನಿಂದ ಇಂಗ್ಲಿಷ್ ಸಾಹಿತ್ಯ ಹಾಗೂ ಇತಿಹಾಸದಲ್ಲಿ ಪದವಿ ಪಡೆದರು. ಪತ್ರಿಕೋದ್ಯಮದಲ್ಲಿ ಡಿಪ್ಲೊಮಾ ಪೂರೈಸಿದರು. ವಿದ್ಯಾರ್ಥಿನಿಯಾಗಿದ್ದಾಗಲೇ ಹಲವು ಲೇಖನಗಳನ್ನು ಪ್ರಕಟಿಸಿದರು. ಇಂಗ್ಲಿಷ್ ಮತ್ತು ಕನ್ನಡ ಪತ್ರಿಕೆಗಳ ಅಂಕಣಗಾರ್ತಿಯಾಗಿದ್ದು, ಗೆಳತಿ ಮತ್ತು ಉಷಾ ಪತ್ರಿಕೆಗಳ ಸಂಪಾದಕಿಯಾಗಿದ್ದರು. ಮಹಿಳಾ ಸೇವಾ ಸಮಾಜದಲ್ಲಿ ಅಧ್ಯಾಪಕಿಯಾಗಿ 27 ವರ್ಷ ಸೇವೆ ಸಲ್ಲಿಸಿ, ಸ್ವಯಂ ನಿವೃತ್ತಿ ಪಡೆದರು. ನಾಲ್ಕು ವರ್ಷ ರೀಜನಲ್ ಫಿಲಂ ಸೆನ್ಸಾರ್ ...
READ MORE