ಗಂಡಸು ಎಷ್ಟೇ ಅಯೋಗ್ಯ ಕೆಲಸಗಳನ್ನು ಮಾಡಿದರೂ ತನ್ನ ಹೆಂಡತಿ ಮಾತ್ರ ಪರಿಶುದ್ಧಳಾಗಿರಬೇಕೆಂದು ಯೋಚಿಸುತ್ತಾನೆ. ಆತ ಸೂಳೆಯನ್ನು ತಾಳಿಕೊಳ್ಳಬಲ್ಲ, ಆದರೆ ಹೆಂಡತಿ ಪತಿತ ಎಂಬುದನ್ನು ಸಹಿಸಲಾರ, ಮತ್ತೊಬ್ಬರ ಬೇಲಿಯ ಹೂವನ್ನು ಅವನು ಹೊಸಕಿ ಹಾಕಬಲ್ಲ. ಆದರೆ ತನ್ನ ಬೇಲಿಯ ಹೂವನ್ನು ಎಚ್ಚರದಿಂದ ಕಾಯುತ್ತಾನೆ." ಇಂತಹ ಸಾಲುಗಳು ಸಾಮಾಜಿಕ ವ್ಯವಸ್ಥೆಯ ಬಗ್ಗೆ ಚಿಂತನೆಗೈಯಲು ಅನುವು ಮಾಡಿಕೊಡುತ್ತವೆ.
ಸಾಹಿತಿ, ಕಾದಂಬರಿಗಾರ್ತಿ ಚಿತ್ರಲೇಖಾ ಎಸ್ ಅವರು 1945 ಮೇ 01 ಜನಿಸಿದರು. ಇವರ ಬಹುತೇಕ ಕಾದಂಬರಿಗಳು ಸಿನಿಮಾಗಳಾಗಿವೆ. ‘ಮುದುಡಿದ ತಾವರೆ ಅರಳಿತು, ಸಮಯದ ಗೊಂಬೆ’ ಕನ್ನಡದಲ್ಲಿ ಚಲನಚಿತ್ರವಾಗಿದೆ. ‘ಪ್ರೇಮಪಲ್ಲವಿ, ಸ್ವರ್ಗದ ನೆರಳು, ಕೆಂಪಾದ ದೀಪ, ಹೂಮಂಚ, 47 ದಿನಗಳು 1987, ಕರುಣಹತ್ಯೆ, ನಂಜಾದ ನೆನಪು, ಸಂಗಮಿಸದ ನದಿಗಳು’ ಅವರ ಪ್ರಮುಖ ಕಾದಂಬರಿಗಳು. ...
READ MORE