ಡಾ. ಶಿವರುದ್ರ ಕೆ. ಕಲ್ಲೋಳಿಕರ ಕಾದಂಬರಿ 'ಹೊಲಗೇರಿಯ ರಾಜಕುಮಾರ'. ಈ ಕೃತಿಯ ನಾಯಕ ಮಾದೇವನಿಗೆ ಸುಂದರ ಬದುಕನ್ನು ರೂಪಿಸಿಕೊಟ್ಟದ್ದು ಹೊಲಗೇರಿ. ಅವನನ್ನು ಕೊಲ್ಲಲು ಸಂಚು ಹೂಡಿದ್ದು ರಾಜ ಮನೆತನ. ಮುಂದೊಂದು ದಿನ ತಾನು ಮರಾಠ ವಂಶಕ್ಕೆ ಸೇರಿದವನೆಂಬ ಸತ್ಯ ತಿಳಿದು ಕುರಂದವಾಡಕ್ಕೆ ಪಯಣಿಸುತ್ತಾನೆ. ಅವನು ತನ್ನ ಮೂಲವನ್ನು ಹುಡುಕುತ್ತಾ ಹೊರಟ ಸಂದರ್ಭದಲ್ಲಿ ಇತ್ತ ಹೆಂಡತಿ ಸುಮತಿ ತನ್ನ ಮಕ್ಕಳನ್ನು ಕಟ್ಟಿಕೊಂಡು ಪಟ್ಟ ಪಾಡು ಅಷ್ಟಿಷ್ಟಲ್ಲ. ಮಾದೇವನಿಗೆ ಚಿಕ್ಕಂದಿನಲ್ಲಿ ಸಣ್ಣ ಜ್ವರ ಬಂದರೂ ಸಹ ಅವನ ತಾಯಿ ನಲುಗಿ ಹೋಗಿ ಕಂಡ ದೇವರಿಗೆಲ್ಲ ಹರಕೆ ಹೊತ್ತದ್ದು, ಅವನನ್ನು ವಿದ್ಯಾವಂತನಾಗಿಸಿ ಒಳ್ಳೆಯ ಕೆಲಸ ಸಿಗುವಂತಾಗಿಸಿದ್ದು, ಮಾದೇವ ಹೊಲಗೇರಿಯಲ್ಲಿ ಬೆಳೆದರೆ ಏನಂತೆ, ಅವನೂ ಆ ಪರಿಸರದಲ್ಲೇ ರಾಜನಂತೆ ಬದುಕುತ್ತಿದ್ದ ಎಂಬುದನ್ನು ಕಾದಂಬರಿಯ ಶೀರ್ಷಿಕೆಯೆ ನಮಗೆ ಅರ್ಥೈಸುತ್ತದೆ.
ಕುರಂದವಾಡದಲ್ಲಿ ತನಗೇನೂ ಸಿಗದೆ ತನ್ನ ತಪ್ಪಿನ ಅರಿವಾಗಿ 'ಹಕ್ಕಿಯೊಂದು ಮರಳಿ ಸೇರಿತು ಗೂಡಿಗೆ' ಎಂಬಂತೆ ಮಾದೇವ ಮತ್ತೆ ಹೊಲಗೇರಿಗೆ ವಾಪಾಸಾಗುವದನ್ನು ಕಲ್ಲೋಳಿಕರ ಅವರು ಬಹಳ ಮನೋಜ್ಞವಾಗಿ ಚಿತ್ರಿಸಿದ್ದಾರೆ. ಬೆಳಗಾವಿ ಸೀಮೆಯ ಆ ಭಾಷೆಯ ಸೊಗಡು, ತಂತ್ರಗಾರಿಕೆ ಎಂಥವರನ್ನೂ ತಲ್ಲಣಗೊಳಿಸುತ್ತದೆ.
,ಪ್ರೊ. ಶಿವರುದ್ರ ಕಲ್ಲೋಳಿಕರ ಅವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಅಧ್ಯಾಪಕರು. ಹೊಲೆಗೇರಿಯ ರಾಜಕುಮಾರ ಎಂಬುದು ಇವರ ಮೊದಲ ಕಾದಂಬರಿ. ...
READ MORE