ಕಣ್ಣಿಗೆ ಕಂಡಿದ್ದಷ್ಟೇ ಸತ್ಯವೆನ್ನುವ, ಥಳಕು ಬಳುಕಿಗೆ ಮಾರುಹೋಗುವ, ತೋರಿಕೆಯ ಈ ಜಗತ್ತಿನಲ್ಲಿ ಅಡಿಕೆಯಷ್ಟು ಕೆಲಸಕ್ಕೆ ಆನೆ ಗಾತ್ರದ ಪ್ರಚಾರ ಮಾಡುತ್ತಾರೆ. ಆದರೆ ಮುಚ್ಚಿ ತಿಂದದ್ದು ಆನೆಗಾತ್ರವಾದರೂ, ಅಡಿಕೆಯಷ್ಟೇ ತೋರಿಸಿ, ಸೋಗು ಹಾಕಿ ಬದುಕುವವರ ಮಧ್ಯ ಪ್ರಾಮಾಣಿಕರ ಕೆಲಸ ಗೌಣವಾಗಿ ಹೋಗುತ್ತಿದೆ. ಆದರೆ ಒಂದೊಮ್ಮೆ ಆ ಪ್ರಾಮಾಣಿಕ ಶಕ್ತಿ ಎದ್ದು ನಿಂತಾಗ, ಆ ದಿವ್ಯ ಬೆಳಕಿನಲ್ಲಿ ಕತ್ತಲೆಗೆ ಜಾಗವಿರುವುದಿಲ್ಲ ಎಂಬಂತಹ ವಿಚಾರಗಳನ್ನು ಹೊತ್ತು, ಹದಗೆಟ್ಟು ಹೋಗಿರುವ ವ್ಯವಸ್ಥೆಯನ್ನು, ಅವಸ್ಥೆಯನ್ನು ಅಧಿಕಾರಿಯಲ್ಲದಿದ್ದರೂ, ಒಬ್ಬ ಬರಹಗಾರ್ತಿಯಾಗಿ ನನಗೆ ನಿಲುಕುವ ಮಟ್ಟದಲ್ಲಿ ಬರವಣಿಗೆಯಲ್ಲಿ ಹಿಡಿದಿಟ್ಟು ಕೊನೆಪಕ್ಷ ಓದುಗರಿಗೆ ಈ ಕೃತಿಯ ಮೂಲಕ ತಲುಪಿಸಿದ್ದಾರೆ. ಪ್ರಜಾಸತ್ತಾತ್ಮಕ ವ್ಯವಸ್ಥೆಯ ಮೂಲ ಘಟಕವಾದ ಹಳ್ಳಿಯ ಪಂಚಾಯತಿ ಸಂಸ್ಥೆಯ ಆಡಳಿತ ವ್ಯಾಪ್ತಿಯ ಕಾರ್ಯಚಟುವಟಿಕೆಗಳ ಸಿಹಿಕಹಿ ಚಿತ್ರಣ ಇಲ್ಲಿದೆ. ರಾಮ ರಾವಣರನ್ನು ಸೃಷ್ಟಿಸಿದ ರಾಮಾಯಣದಂತೆ, ಭೀಮದುಶ್ಯಾಸನರನ್ನು ಚಿತ್ರಿಸಿದ ಮಹಾಭಾರತದಂತೆ ಪ್ರಸ್ತುತ ಕಾದಂಬರಿಯಲ್ಲಿ ವ್ಯವಸ್ಥೆಯನ್ನು ಕಾಪಾಡುವ ಮತ್ತು ವ್ಯವಸ್ಥೆಯನ್ನು ಕೆಡವುವ ವಿಭಿನ್ನ ಎರಡು ಬಗೆಯ ಪಾತ್ರಗಳಿವೆ. ಈ ಜಗತ್ತಿನಲ್ಲಿ ಒಳಿತು ಕೆಡಕುಗಳ ನಡುವೆ ಸಂಘರ್ಷ ನಿರಂತರ ಸಾಗಿದೆ. ಕೆಡಕನ್ನುಂಟು ಮಾಡುವ ಕೈ ಮತ್ತುಮನಸ್ಸುಗಳು ಒಮ್ಮೊಮ್ಮೆ ಮೇಲುಗೈ ಸಾಧಿಸುವಂತೆ ಅನ್ನಿಸಿದರೂ ಕೊನೆಗೆ ಯಶಸ್ಸು ಸಿಗುವುದು ಒಳಿತಿನ ಶಕ್ತಿಗೇ ಅನ್ನುವುದನ್ನು ಲೇಖಕಿ ಪರಿಣಾಮಕಾರಿಯಾಗಿ ಈ ಕೃತಿಯಲ್ಲಿ ವಿವರಿಸಿದ್ದಾರೆ.
ಬೆಳಗಾವಿ ತಾಲ್ಲೂಕು ಸುಳೇಭಾವಿಯಯವರಾದ ಪಾರ್ವತಿ ಅವರು ಗ್ರಾಮ ಪಂಚಾಯಿತಿ ಆಡಳಿತ ಸಹಾಯಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮೈಸೂರಿನ ಶಾಂಗ್ರೀ- ಲಾ ಅಕಾಡೆಮಿ ನಿರ್ದೇಶಕಿಯಾಗಿ ಸಾಮಾಜಿಕ ಮತ್ತು ಸಾಹಿತ್ಯಕ ಚಟುವಟಿಕೆಯಲ್ಲಿ ತೊಡಗಿದ್ದಾರೆ. ನೇಕಾರರ ಬದುಕು ಬವಣೆಯನ್ನು 'ಮಿಲನ' ಕಾದಂಬರಿಯಲ್ಲಿ ನೈಜವಾಗಿ, ಕಲಾತ್ಮಕವಾಗಿ ಕಟ್ಟಿಕೊಟ್ಟ ಪಾರ್ವತಿ ಪಿಟಗಿ ಐದು ಕಾದಂಬರಿ, ಒಂದು ಕಥಾ ಸಂಕಲನ, ಲೇಖನ ಸಂಕಲನ ಪ್ರಕಟಿಸಿದ್ದಾರೆ. ಅವರ ಹಲವು ಕಥೆ, ಕಾದಂಬರಿ, ಲೇಖನಗಳು ನಾಡಿನ ಹೆಸರಾಂತ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. `ಮಿಲನ' ಕಾದಂಬರಿಗೆ ದೇವರ ದಾಸಿಮಯ್ಯ ಸಾಹಿತ್ಯ ಶ್ರೀ ಪ್ರಶಸ್ತಿ ಸಂದಿದೆ. ಅವರ ಬಹುತೇಕ ಕಥೆ, ಕಾದಂಬರಿಗೆ ಪ್ರಶಸ್ತಿಗಳು ಸಂದಿವೆ. ಬೆಳಗಾವಿ ಜಿಲ್ಲೆಯ ಆಡುಭಾಷೆಯಲ್ಲಿ ...
READ MORE