ಹೆಣ್ಣಿನ ಬಾಳು

Author : ಎ. ಸರಸಮ್ಮ

Pages 248

₹ 200.00




Year of Publication: 2020
Published by: ಎಸ್.ಎಲ್.ಎನ್ ಪಬ್ಲಿಷಿಂಗ್ ಹೌಸ್
Address: ನಂ.237, 6ನೇ ಮುಖ್ಯರಸ್ತೆ, 10ನೇ ಕ್ರಾಸ್, ಎಚ್.ಎಂ.ಟಿ ಲೇಔಟ್, ಆರ್.ಟಿ.ನಗರ, ಬೆಂಗಳೂರು-32
Phone: 6361370460

Synopsys

‘ಹೆಣ್ಣಿನ ಬಾಳು’ ಎ.ಸರಸಮ್ಮ ಅವರು ರಚಿಸಿರುವ ಸಾಮಾಜಿಕ ಕಾದಂಬರಿ. ಈ ಕಾದಂಬರಿಯ ಬಗ್ಗೆ ತಿಳಿಸಿರುವ ಲೇಖಕಿ ಸರಸಮ್ಮನವರು ‘ಎಲ್ಲಿ ಸ್ತ್ರೀಯರನ್ನು ಗೌರವಿಸುತ್ತಾರೋ ಅಲ್ಲಿ ದೇವತೆಗಳು ಸಂತೋಷಪಡುತ್ತಾರೆ ಎಂಬುದು ಹಿರಿಯರ ವೇದ ನುಡಿ. “ಹೆಣ್ಣು ಸಂಸಾರದ ಕಣ್ಣು” ಹೆಣ್ಣಿಲ್ಲದೆ ಈ ಜಗತ್ತೇ ಇಲ್ಲ. ಒಬ್ಬ ಪುರುಷನ ಯಶಸ್ಸಿನ ಹಿಂದೆ ಒಬ್ಬಳು ಹೆಣ್ಣಿರುತ್ತಾಳೆ ಎಂದು ನಾನಾ ವಿಧವಾಗಿ ಹೆಣ್ಣನ್ನು ಹಾಡಿ ಹೊಗಳುತ್ತಾರೆ. ಹೆಣ್ಣಿನ ತಾಳ್ಮೆಯನ್ನು ಭೂತಾಯಿಗೆ ಹೋಲಿಸುತ್ತಾರೆ. ಸಹನಶೀಲೆಯಾದ ಹೆಣ್ಣು ಸಂಸಾರವನ್ನು ನಿಭಾಯಿಸುವುದಷ್ಟೇ ಅಲ್ಲದೆ ಹೊರಗೆ ಎಲ್ಲಾ ರಂಗಗಳಲ್ಲೂ ಗಂಡಿನ ಸಮಕ್ಕೆ ದುಡಿಯುತ್ತಾಳೆ. ತಾನು ಹುಟ್ಟಿ ಬೆಳೆದ ಮನೆಯನ್ನು, ಹೆತ್ತವರನ್ನು, ಒಡಹುಟ್ಟಿದವರನ್ನು ಜೊತೆಗೂಡಿ ಆಡುತ್ತಿದ್ದ ಗೆಳತಿಯರನ್ನೂ ಒಟ್ಟಿನಲ್ಲಿ ತನ್ನ ಊರನ್ನು ಬಿಟ್ಟು “ಮದುವೆ” ಎಂಬ ಮೂರಕ್ಷರದ ಬಂಧನಕ್ಕೆ ಸಿಲುಕಿ ತನಗರಿವಿಲ್ಲದ ಅಪರಿಚಿತರಾದ ಮನೆಗೆ ಸೊಸೆಯಾಗಿ ಕಾಲಿಡುತ್ತಾಳೆ. ಆ ಮನೆಯೆ ತನ್ನ ಗುಡಿಯೆಂದು, ಮನೆ ಮಂದಿಯೆಲ್ಲ ತನ್ನವರೆಂದು ಪ್ರೀತಿಸುತ್ತಾ ಬಾಳುತ್ತಾಳೆ.

ಹೊಸ ಸ್ಥಳ, ಹೊಸ ಜನ, ಮೊದಮೊದಲು ಗಾಬರಿಯಾದರೂ ಆ ಮನೆಯ ವಾತಾವರಣಕ್ಕೆ ಹೊಂದಿಕೊಳ್ಳುತ್ತಾಳೆ. ಹೊಂದಿಕೊಳ್ಳುವುದು ಆಕೆಗೆ ಅನಿವಾರ್ಯ ವಾಗಿರುತ್ತದೆ. ತಾಳಿಕಟ್ಟಿದ ಗಂಡನ ಕೈಹಿಡಿದು ಅವನನ್ನು ನಂಬಿ ಹಿಂಬಾಲಿಸಿ ಬಂದವಳನ್ನು ಅತ್ತೆ, ಮಾವ, ನಾದಿನಿ, ಮೈದುನ, ಭಾವ ಎಲ್ಲರೂ ಪ್ರೀತಿ, ವಿಶ್ವಾಸ ಆಧರಗಳಿಂದ ನೋಡಿಕೊಂಡಾಗ ಆಕೆಗೆ ಆ ಮನೆಯೆ ದೇವರ ಗುಡಿಯಂತೆ ಭಾಸವಾಗುತ್ತದೆ. ಅಲ್ಲಿ ಅವಳು ಸ್ವರ್ಗವನ್ನೇ ಕಾಣುತ್ತಾಳೆ. ಮನೆಯವರಲ್ಲಿ ಸ್ವಾರ್ಥ, ವಂಚನೆ, ಮೋಸಗಳು ತುಂಬಿ ಸೊಸೆಯಾಗಿ ಬಂದ ಹೆಣ್ಣು ತಮ್ಮಂತೆ ಅವಳೂ ಒಬ್ಬ ಮನುಷ್ಯಳು ಎಂಬುದನ್ನು ಮರೆತು ಅವಳಿಗೆ ಎಲ್ಲರೂ ಕಿರುಕುಳ ಕೊಟ್ಟಾಗ ಅಲ್ಲಿ ಅವಳು ನರಕವನ್ನು ಕಾಣುತ್ತಾಳೆ. ಉತ್ತಮ ಮನೆತನದಿಂದ ಬಂದಂತ ಹೆಣ್ಣು ಮಗಳು ತಾನು ಮೆಟ್ಟಿದ ಮನೆಯಲ್ಲಿ ಎಷ್ಟೇ ಕಷ್ಟ ಬಂದರೂ ಆ ಮನೆಯ ಶ್ರೇಯಸ್ಸಿಗಾಗಿ ಹಾಗೂ ಮನೆಯ ಮರ್ಯಾದೆಯನ್ನು ಕಾಪಾಡಲು ಎಲ್ಲವನ್ನು ಸಹಿಸಿಕೊಂಡು ಬಾಳುತ್ತಾಳೆ. ಇದು ಅನಾದಿ ಕಾಲದಿಂದಲೂ ನಡೆದುಕೊಂಡು ಬಂದ ರೀತಿಯಾಗಿದೆ ಎನ್ನುತ್ತಾರೆ. ಇಂಥಹ ಹೆಣ್ಣಿನ ಬದುಕಿನಲ್ಲಿ ನಡೆವ ಘಟನೆಗಳನ್ನು ಅತ್ಯಂತ ಸೂಕ್ಷ್ಮವಾಗಿ ಪ್ರತೀ ಪಾತ್ರಗಳ ಮೂಲಕ ಹಿಡಿದಿಟ್ಟಿದ್ದಾರೆ.

About the Author

ಎ. ಸರಸಮ್ಮ

ಲೇಖಕಿ ಎ. ಸರಸಮ್ಮ ಅವರು ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿದ್ದಾರೆ. ಸಾಹಿತ್ಯ ಅವರ ವಿಶೇಷ ಆಸಕ್ತಿಯಾಗಿದೆ. ವೃತ್ತಿಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ಅವರು ಪ್ರಸ್ತುತ ನಿವೃತ್ತರಾಗಿದ್ದರೆ.  ಕೃತಿಗಳು: ಮೋಸದ ಜಾಲ(ಕಾದಂಬರಿ), ಬಾಡಿಗೆ ಮನೆ, ಮನೆ ಮಗ, ನೀತಿ ಕಥೆಗಳು, ದನಗಳ ಚೆನ್ನಿ, ನಂದಾದೀಪ, ಜಾಲಿಯ ನೆರಳು, ಕಾವ್ಯ ಜ್ಯೋತಿ, ವಿಧಿ ನಿಯಮ, ಸನ್ಮಾರ್ಗ, ಹೆಣ್ಣಿನ ಬಾಳು, ಗುರಿ, ಪಾಪ ಪುಣ್ಯ, ಭಕ್ತಿಸಾರ, ಸ್ನೇಹ ಬಂಧನ, ಕಾಮನಬಿಲ್ಲು, ಮೋಸದ ಜಾಲ ...

READ MORE

Related Books