ಸಾಹಿತ್ಯ ಪ್ರಭೇದವು ಜೀವನ ಸಂಪರ್ಕದಿಂದಲೇ ಬೆಳೆಯ ಬೇಕಾಗಿರುವುದರಿಂದಲೂ, ಮಾನವನ ಜೀವನದಲ್ಲಿ ವಿವಿಧತೆಯ ಹಾಸು ಹೊಕ್ಕಾಗಿರುವುದರಿಂದಲೂ ವೈವಿಧ್ಯವು ಕಾದಂಬರಿಯ ಜೀವ ಜೀವಾಳವಾಗಿರುವುದರಿಂದ ಕಂಗೊಳಿಸುವುದು. ಇದರಲ್ಲಿ ಒಂದು ಜೀವಿಯ ಜೀವಮಾನದಲ್ಲಿಯ ಕೆಲವು ಸಮಸ್ಯೆಗಳ ಚರ್ಚೆ ನಡೆಯಬಹುದು. ಇಲ್ಲವೆ ಒಂದು ಜೀವನದ ಸಮಗ್ರ ಚಿತ್ರವೇ ರೂಪುಗೊಂಡು ಅರಳಬಹುದು. ಕಥೆಯ ಪರಿಸರವು ವಿಸ್ತಾರವಾಗಿದ್ದರೆ ಅದು ಒಂದು ತಲೆಮಾರಿನಲ್ಲಿಯೇ ಮುಗಿಯದೆ ಮೂರು ನಾಲ್ಕು ತಲೆಮಾರುಗಳಲ್ಲಿಯೂ ಬಳಸಿ ನಿಲ್ಲಬಹುದು. ಪ್ರಸ್ತುತ ಕಾದಂಬರಿಕಾರ ಕೃಷ್ಣಮೂರ್ತಿ ಪುರಾಣಿಕರ ಸಾಮಾಜಿಕ ಕಾದಂಬರಿ ಹಬ್ಬಿದ ಬಳ್ಳಿ ಸಾಮಾಜಿಕ ಸಮಸ್ಯೆಗಳನ್ನು ಆಧಾರಿತವಾಗಿರುವ ಕಾದಂಬರಿಯಾಗಿದೆ.
ಅಗ್ರಶ್ರೇಣಿಯ ಕಾದಂಬರಿಕಾರ ಕೃಷ್ಣಮೂರ್ತಿ ಪುರಾಣಿಕರು ಹುಟ್ಟಿದ್ದು ಬಾಗಲಕೋಟ ಜಿಲ್ಲೆಯ ಬೀಳಗಿಯಲ್ಲಿ.1911 ಸೆಪ್ಟಂಬರ್ 5ರಂದು. 1933ರಿಂದ ಸಾಹಿತ್ಯ ಕೃಷಿ ಆರಂಭಿಸಿದ ಪುರಾಣಿಕರು 1946ರಲ್ಲಿ 'ರಾಮೂನ ಕಥೆಗಳು' ಪ್ರಕಟಿಸಿದರು. ಅವರ 'ಧರ್ಮದೇವತೆ' ಕಾದಂಬರಿ 'ಕರುಣೆಯೇ ಕುಟುಂಬದ ಕಣ್ಣು' ಎಂಬ ಚಲನಚಿತ್ರವಾಗಿದೆ. ಪುರಾಣಿಕರ 11 ಕೃತಿಗಳು ಬೆಳ್ಳೆತೆರೆ ಕಂಡಿವೆ. 'ಸನಾದಿ ಅಪ್ಪಣ್ಣ' ಕನ್ನಡಿಗರೆಂದೂ ಮರೆಯದ ಕೃತಿ. ಮೊದಲ ಪ್ರಕಟಿತ ಗದ್ಯ ಕೃತಿ, 'ರಾಮೂನ ಕಥೆಗಳು'. ಮೊದಲ ಕವನ ಸಂಕಲನ 'ಬಾಳ ಕನಸು'. ಮೊದಲ ಕಾದಂಬರಿ 'ಮುಗಿಲಮಲ್ಲಿಗೆ'. 'ಮೌನಗೌರಿ', 'ಮುತ್ತೈದೆ', `ಮನೆ ತುಂಬಿದ ಹೆಣ್ಣು', 'ಮಣ್ಣಿನ ಮಗಳು', 'ಕುಲವಧು', 'ಮನಸೋತ ಮನದನ್ನೆ', 'ಧರ್ಮ ...
READ MORE