‘ಗುರಿಕಾರ ದೇವನಾಂಪ್ರಿಯ’ ಬಿ.ಎನ್. ಯೋಗೇಶ್ ಅವರ ಕೃತಿಯಾಗಿದೆ. ರಾ.ನಂ. ಚಂದ್ರಶೇಖರ ಅವರ ಮುಮ್ಮಾತು ಬರಹವಿದೆ: ಇಡೀ ಕಾದಂಬರಿ ಏಕಪಾತ್ರ ಪ್ರಧಾನ ಕಥೆಯನ್ನು ಒಳಗೊಂಡಿದ್ದು, ಹೊಟೇಲ್ ಸತ್ವಯರ್‌ನಿಂದ ಐ.ಎ.ಎಸ್. ಅಧಿಕಾರಿಯಾಗಿ ನಂತರ ಶಾಸಕ ನಾಗುವ ಕಥಾನಾಯಕ ಆಶೋಕನ್ನು ಬಿಟ್ಟರೆ ಉಳಿದ ಪಾತ್ರಗಳು ನಾಯಕನ ಸುತ್ತ ತಿರುಗುತ್ತವೆ. ಅಶೋಕ ಸರ್ಕಾರದ ಅಧಿಕಾರಿಯಾಗಿ ಜನಪರ ಕೆಲಸ ಮಾಡುತ್ತಾನೆ. ದೇವನಾಂಪ್ರಿಯ ಅಂದರೆ ದೇವರಿಗೆ ಪ್ರಿಯನಾದವನು, ಇಲ್ಲಿ ಕಥಾನಾಯಕ 'ಜನ ಸೇವೆಯೇ ಜನಾರ್ದನ ಸೇವೆ' ಎಂದು ಕೆಲಸ ಮಾಡಿ ದೇವರಿಗೆ ಪ್ರಿಯನಾಗುತ್ತಾನೆ. ಹಿಂಸೆ, ಸ್ವಾರ್ಥ, ದ್ವೇಷವೇ ತಾಂಡವಾಡುತ್ತಿರುವ ಕಾಲ ಮಾನದಲ್ಲಿ ಒಳ್ಳೆಯದನ್ನು ಕಾಣುವ, ಮನಸಿದ್ದರೆ ಮಾರ್ಗ ಎಂಬಂತೆ ವಯೋಸಹಜವಾದ ತಪ್ಪುಗಳನ್ನು ತಿದ್ದಿಕೊಂಡು ದೊಡ್ಡದನ್ನು ಸಾಧಿಸಬಹುದೆಂಬು ದನ್ನು ಹೇಳುವ ಬಿ.ಎನ್. ಯೋಗೇಶ್ ಅವರ ಸಕಾರಾತ್ಮಕ ಧೋರಣೆ ಶ್ಲಾಘನೀಯ ಎಂಬುವುದನ್ನು ಈ ಪುಸ್ತಕದಲ್ಲಿ ಸುಂದರವಾಗಿ ಬಿಂಬಿಸಿದ್ದಾರೆ.