ಗುಳೆ

Author : ಗೀತಾ ನಾಗಭೂಷಣ

Pages 192

₹ 200.00




Year of Publication: 2020
Published by: ಕನ್ನಡನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘ ನಿಯಮಿತ
Address: ಜಿ-2, ವಿ. ವಿ. ಹಾಸ್ಟೆಲ್‌ ಕಾಂಪ್ಲೆಕ್ಸ್, ಸೇಡಂ ರಸ್ತೆ, ಕಲಬುರಗಿ- 585105
Phone: 8095897118

Synopsys

ಬಿಸಿಲೂರೆಂದೇ ಹೆಸರಾಗಿರುವ ಕಲಬುರಗಿ ಜಿಲ್ಲೆಯಲ್ಲಿ ಮಳೆ ಬಾರದೆ 'ಬರ' ಬೀಳುತ್ತದೆ. ಈ ದಿನಗಳಲ್ಲಿ ಬಹುತೇಕ ರೈತ ಕಾರ್ಮಿಕರೆಲ್ಲ ದುಡಿದುಂಡು ಬದುಕಲು ನೆರೆ ರಾಜ್ಯಗಳಿಗೆ 'ಗುಳೆ’ ಹೊರಡುತ್ತಾರೆ. ಆಗ ಒಂದು ಕುಟುಂಬ ಮುಂಬೈ ಕಡೆಗೆ ನಡೆಯುವ ಬದುಕಿನ ದಾರುಣತೆಯೇ ಈ ಕಾದಂಬರಿ -'ಗುಳೆ’. `ಸುಧಾ' ವಾರ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿದ್ದು, ಓದುಗರ ಅಂತಃಕರಣ ತಟ್ಟುವಲ್ಲಿ ಯಶಸ್ವಿಯಾಗಿದೆ.

ಕೆಳವರ್ಗ ಬಡ,ಅನಕ್ಷರಸ್ಥ, ಪರಿವಾರದ ಕಥೆ ಬದುಕಿನ ಸಂಘರ್ಷದ ವಿವಿಧ ಮಜಲುಗಳ ಅನಾವರಣ. ಇದರ ಶೀರ್ಷಿಕೆಯೇ ಹೇಳುವಂತೆ ಕಥಾನಾಯಕ ಸಿರಿಮಂತ ಕುಟುಂಬ ಗುಳೆ ಹೋಗುವ ಹೋಗುವ ಸ್ಥಿತಿಯ ಜೀವನಗಾಥೆ ಕಟ್ಟಿಕೊಡುತ್ತದೆ. ಸಮಾನ್ಯವಾಗಿ ಗುಳೆ ಹೋಗಲು ಒಂದು ಬಲವಾದ ಕಾರಣ ಇರುತ್ತದೆ. ಅತಿವೃಷ್ಟಿ-ಅನಾವೃಷ್ಟಿ,ಬರಗಾಲ, ನಿರುದ್ಯೋಗ, ಸಂಕ್ರಮಿಕ ರೋಗ ಬಾಧೆ,ಮುಂತಾದ ಯಾವುದಾದರೂ ನಿಮಿತ್ತವಾಗಿ ತಳ ಬಿಡಿಸುವ ಸಾಧ್ಯತೆ. ಈ ಕಾದಂಬರಿಯಲ್ಲಿ ಕಲ್ಬುರ್ಗಿಯ ಸಣ್ಣ ಶಿಕ್ಷಣ ಚೂರು ನಿವಾಸಿಗಳಾದ ಸಿರಿಮಂತ ಹೊನ್ನಮ್ಮ ಮತ್ತವರ ಮಗಳು ನೀಲಮ್ಮ ಎರಡು ಕಾರಣಗಳಿಂದಾಗಿ ಗುಳೆ ಹೋಗುತ್ತಾರೆ.  ಅಲ್ಲದೆ ಗುಳೆ  ಕಾದಂಬರಿಯಲ್ಲಿ ಜೋಗಿನಿ ಪದ್ಧತಿ ಹಳೆ ಸಮಸ್ಯೆಯಾದರೆ ಗುಳೆ  ಹೋಗುವುದು ಹೊಸ ಸಮಸ್ಯೆಯಾಗಿ ಕಾದಂಬರಿ ಬೆಳೆಯುತ್ತದೆ.ಹಳೆಬೇರು ಹೊಸಚಿಗುರು ಸಕಾರಾತ್ಮಕವಾಗಿ ಬೆಳೆದರೆ ಬದುಕು ಸುಂದರ ಅದೇ ನಕಾರಾತ್ಮಕವಾಗಿದ್ದರೆ ಜೀವನ ನರಕ. ಎನ್ನುವುದನ್ನು ಈ ಕಾದಂಬರಿಯಲ್ಲಿ ಎತ್ತಿ ತೋರಿಸಿದ್ದಾರೆ

.ಇಲ್ಲಿ ಬರುವ ಪ್ರತಿಯೊಂದು ಪಾತ್ರವು ಅತ್ಯಂತ ಸಹಜತೆಯಿಂದ ಮೂಡಿಬಂದಿರುವುದು ಓದಿನ ಉತ್ಸಾಹ ಇಮ್ಮಡಿಸುತ್ತದೆ.ಸಣ್ಣ ಚುಂಚೂರು, ಶಿವಲಿಂಗೇಶ್ವರ ಸಾವಳಗಿ, ಇಂತಹ ಸಣ್ಣಪುಟ್ಟ ಹಳ್ಳಿಯ ಜನಜೀವನದ ಚಿತ್ರಣದಲ್ಲಿ ಬರಹಗಾರ್ತಿಯ ಚಿತ್ರ ಶಕ್ತಿಯನ್ನು ಕಾಣುತ್ತೇವೆ. ಇಲ್ಲಿ  ಬರುವ ಹಿರಿಯ ಜೋಗಿಣಿ ಅಂಬವ್ವ,ತುಳಜಾ, ಪೂಜಾರಪ್ಪ ಮುಕುಡಪ್ಪ,ಇತ್ಯಾದಿ ಪಾತ್ರಗಳು ಕೆಲಕಾಲ ಮನದಲ್ಲಿ ಉಳಿಯುತ್ತವೆ.ಗೀತಾ ನಾಗಭೂಷಣ್ ಅವರ ಹಳ್ಳಿಯ ಬದುಕಿನ ಪರದಾಟ ಅಂತ್ಯ ಕಾಣದ ಸಮಾಜಿಕ ಪಿಡುಗು ಪಟ್ಟಣದಲ್ಲಿ ದುಡಿಯುವವರ ಜೀವನ ಆಧುನಿಕ ಬದುಕಿನಲ್ಲಿ ಪಟ್ಟಣಗಳ ಮೋಸ ವಂಚನೆ ಯಲ್ಲಿ ಸಿಗುವ ಪರೋಪಕಾರಿ ಮನಸ್ಸಿನ ವ್ಯಕ್ತಿಗಳು ಎಲ್ಲವನ್ನೂ ಮನೋಜ್ಞವಾಗಿ ಈ ಕಾದಂಬರಿಯಲ್ಲಿ ಚಿತ್ರಿಸಿದ್ದಾರೆ.

About the Author

ಗೀತಾ ನಾಗಭೂಷಣ
(25 March 1942 - 28 June 2020)

ಕನ್ನಡದ ಲೇಖಕಿಯರಲ್ಲಿ ಒಬ್ಬರಾದ ಗೀತಾ ನಾಗಭೂಷಣ ಅವರು ತಮ್ಮ ಕಾದಂಬರಿ-ಕತೆಗಳ ಮೂಲಕ ಜನಪ್ರಿಯರಾದವರು. ಗುಲ್ಬರ್ಗದ ಬಡ ಕುಟುಂಬದಲ್ಲಿ 1942ರ ಮಾರ್ಚ್ 25ರಂದು ಜನಿಸಿದರು. ತಂದೆ ಶಾಂತಪ್ಪ-ತಾಯಿ ಶರಣಮ್ಮ. ಮೆಟ್ರಿಕ್ ಮುಗಿಸಿದ ಮೇಲೆ ಕೆಲವುಕಾಲ ಕಲೆಕ್ಟರ್ ಕಛೇರಿಯಲ್ಲಿ ಉದ್ಯೋಗ ಮಾಡಿ ಬೆಳಗಿನ ಶಾಲೆಯಲ್ಲಿ ಓದಿ ಪದವಿ ಪಡೆದು, ಸಂಜೆ ಕಾಲೇಜಿನಲ್ಲಿ ಓದಿ ಬಿಎಡ್ ಮತ್ತು ಎಂ.ಎ. ಪದವಿ ಗಳಿಸಿದರು. ಓದುವಾಗಲೇ ಉದ್ಯೋಗ ಮಾಡುತ್ತಿದ್ದ ಇವರು ಎಂ.ಎ. ಪದವಿ ಗಳಿಸಿದ ನಂತರ ಶ್ರೀ ನಗರೇಶ್ವರ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ, ಪ್ರಾಧ್ಯಾಪಕಿಯಾಗಿ, ಪ್ರಾಚಾರ್ಯೆಯಾಗಿ 30ವರ್ಷಗಳ ಸೇವೆ ಸಲ್ಲಿಸಿ ನಿವೃತ್ತರಾದರು. ...

READ MORE

Related Books