ಫೋರ್ಡಿ ಒಂದು ವೈಜ್ಞಾನಿಕ ಹಿನ್ನಲೆಯ ಕಾದಂಬರಿ. ಆಂಟಿ ಮ್ಯಾಟರ್‌ಗಳ ಅನ್ವೇಷಣೆಯಲ್ಲಿದ್ದ ವಿಜ್ಞಾನಿಯೊಬ್ಬರು ಆಕಸ್ಮಿಕವಾಗಿ ನಾಲ್ಕನೇ ಆಯಾಮವನ್ನು ಪ್ರವೇಶಿಸುವುದು ಮತ್ತು ಆ ಲೋಕದ ವಿಶಿಷ್ಠ ಅನುಭವದ ಕಥೆ. ಇಲ್ಲಿ ಪ್ರೀತಿಯಲ್ಲಿ ಸಿಲುಕುವ ಜೋಡಿಗಳು, ದೆವ್ವ ಭೂತಗಳ ದರ್ಶನ, ಅವುಗಳನ್ನು ಕಂಡು ಹಿಡಿಯುವ ತಂಡದ ಪ್ರಯತ್ನ ಎಲ್ಲವೂ ಸೇರಿ ಕಥೆ ನಮ್ಮನ್ನು ಎಲ್ಲೆಲ್ಲಿಗೋ ಕರೆದೊಯ್ಯತ್ತದೆ. ಕನ್ನಡ ಸಾಹಿತ್ಯದಲ್ಲಿ ವೈಜ್ಞಾನಿಕ ಹಿನ್ನಲೆಯ ಕಥೆಗಳು ಕಡಿಮೆಯಿದ್ದು, ’ಫೋರ್ಡಿ’ ಆ ಕೊರತೆಯನ್ನು ನೀಗಿಸುತ್ತದೆ.
’ಗುರುಪದಾ ಬೇಲೂರ’ ಶ್ರೀ ಗುರುಪದಾಸ್ವಾಮಿ ಬಿ ಜಿ ಅವರ ಕಾವ್ಯನಾಮ. ವೃತ್ತಿಯಿಂದ ಸರ್ಕಾರಿ ಇಂಜಿನಿಯರ್ ಆಗಿರುವ ಗುರುಪಾದ ಸ್ವಾಮಿಯವರ ಹಲವು ಸಣ್ಣ ಕಥೆಗಳು ವಿವಿಧ ನಿಯತಕಾಲಿಕೆಗಳಲ್ಲಿ ಪ್ರಕಟವಾಗಿದೆ. ಗ್ರಾಮೀಣ ಅಭಿವೃದ್ಧಿಯಲ್ಲಿ ಅವರು ತಮ್ಮ ಸೇವೆಗಳನ್ನು ಸಲ್ಲಿಸಿದ್ದಾರೆ. ಗ್ರಾಮ ಪಂಚಾಯತ್ ಮಟ್ಟಕ್ಕೆ ಅಧಿಕಾರಗಳನ್ನು ವಿಕೇಂದ್ರೀಕರಣ ಮಾಡುವ ಹಿಂದಿನ ಉಪಕ್ರಮಗಳಲ್ಲಿ ಅವರು ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ಅವರು ಗ್ರಾಮೀಣ ಸಂಪರ್ಕ ಕಾರ್ಯಕ್ರಮವನ್ನು ಅಭಿವೃದ್ಧಿಪಡಿಸುವಲ್ಲಿ ತೊಡಗಿದ್ದರು. ಅವರು ವಾಟರ್ ಸೆಕ್ಟರ್ನಲ್ಲಿ ಕೆಲಸ ಮಾಡಿದ್ದಾರೆ ಮತ್ತು ಇಂಟಿಗ್ರೇಟೆಡ್ ವಾಟರ್ ಸಂಪನ್ಮೂಲ ನಿರ್ವಹಣಾ ಪರಿಕಲ್ಪನೆಯನ್ನು ಅನುಷ್ಠಾನಗೊಳಿಸುವಲ್ಲಿ ಪಾತ್ರ ವಹಿಸಿದ್ದಾರೆ. ಗುರುಪಾದ ಸ್ವಾಮಿಯವರು ತನ್ನ ಕೆಲಸದ ಅನುಭವಗಳನ್ನು ...
READ MORE