ದೊಡ್ಡ ವೀರರಾಜೇಂದ್ರ

Author : ಬಿ. ಪ್ರಭಾಕರ ಶಿಶಿಲ

Pages 228

₹ 153.00




Year of Publication: 2018
Published by: ವಸಂತ ಪ್ರಕಾಶನ
Address: # 360, 10ನೇ ಬಿ;ಮುಖ್ಯರಸ್ತೆ, ಕಾಸ್ಮೊಪಾಲಿಟಿನ್ ್ ಕ್ಲಬ್, ಜಯನಗರ ಪೂರ್ವ, ಜಯನಗರ, ಬೆಂಗಳೂರು-560011,
Phone: 0802244 3996

Synopsys

ಲೇಖಕ ಡಾ. ಬಿ. ಪ್ರಭಾಕರ ಶಿಶಿಲ ಅವರ ಐತಿಹಾಸಿಕ ಕಾದಂಬರಿ-ದೊಡ್ಡ ವೀರರಾಜೇಂದ್ರ.. ಕ್ರಿ.ಶ. 1787-1809 ರವರೆಗೆ ಕೊಡಗಿನ ಹಾಲೇರಿ ಅರಸರು ಆಡಳಿತ ನಡೆಸಿದ್ದರು. ಈತನ ತಂದೆ 1ನೇ ಲಿಂಗರಾಜರು ಸಾವನ್ನಪ್ಪಿದಾಗ ದೊಡ್ಡ ವೀರರಾಜೇಂದ್ರನು ಅಪ್ರಾಪ್ತ ವಯಸ್ಕ. ಆದ್ದರಿಂದ, ಟಿಪ್ಪು ಸುಲ್ತಾನನು ರಾಣಿ ಪತ್ನಿ, ವೀರರಾಜೇಂದ್ರ, ಹಾಗೂ ವೀರರಾಜೇಂದ್ರನ ತಮ್ಮ ಈ ಮೂವರನ್ನು ಗೋರೂರಿನಲ್ಲಿ ಸೆರೆ ಇಟ್ಟ. ಇದರಿಂದ ಕೊಡಗಿನ ಜನತೆ ದಂಗೆ ಏಳುತ್ತಾರೆ. ಮಂಗಳೂರಿನ ವಿಜಯದ ನಂತರ ಟಿಪ್ಪು ಸುಲ್ತಾನನು ಕೊಡಿಗಿನ ಜನತೆ ತನಗೆ ಬೆಂಬಲಿಸಿದರೆ ರಕ್ಷಣೆ ನೀಡುವುದಾಗಿ ಭರವಸೆ ನೀಡುತ್ತಾನೆ. ಅದೇ ರೀತಿ ಮಾಡಿದಾಗ, ಮತ್ತೇ ಈ ಮೂವರನ್ನು ಬೇರೆ ಕಡೆ ಸೆರೆಯಲ್ಲಿ ಇಡುತ್ತಾನೆ. ನಂತರ ದೊಡ್ಡ ವೀರ ರಾಜೇಂದ್ರನು ತಪ್ಪಿಸಿಕೊಂಡು ತನ್ನ ರಾಜ್ಯ ಸೇರುತ್ತಾನೆ. ನಂತರ ಯುದ್ಧದ ಮೇಲೆ ಯುದ್ಧ ನಡೆಯುತ್ತಿದ್ದಂತೆ ವೀರ ರಾಜೇಂದ್ರನು ಕೊಡಗಿನ ಬಹುತೇಕ ಭಾಗವನ್ನು ವಶಪಡಿಸಿಕೊಳ್ಳುತ್ತಾನೆ. ಐತಿಹಾಸಿಕವಾದ ಈ ಘಟನಾವಳಿಯನ್ನು ಕಾದಂಬರಿಯ ಸ್ಪರ್ಶ ನೀಡುವ ಮೂಲಕ ಲೇಖಕರು ಉತ್ತಮ ಕಾದಂಬರಿಯಾಗಿಸಿದ್ದಾರೆ.

About the Author

ಬಿ. ಪ್ರಭಾಕರ ಶಿಶಿಲ
(21 December 1953)

ಲೇಖಕ ಡಾ. ಪ್ರಭಾಕರ ಶಿಶಿಲ ಅವರು ದಕ್ಷಿಣ ಕನ್ನಡ ಜಿಲ್ಲೆ ಸುಳ್ಯದ ನೆಹರೂ ಮೆಮೋರಿಯಲ್‌ ಕಾಲೇಜಿನ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದಾರೆ. ಸಾಹಿತ್ಯದತ್ತ ಹೆಚ್ಚಿನ ಆಸಕ್ತಿ ಹೊಂದಿರುವ ಅವರು ಹಲವು ಕೃತಿಗಳನ್ನು ರಚಿಸಿದ್ದಾರೆ. ಜೊತೆಗೆ ಅರ್ಥಶಾಸ್ತ್ರದ ಪಠ್ಯಪುಸ್ತಕಗಳನ್ನು ರಚಿಸಿದ್ದಾರೆ. ಕೃತಿಗಳು:  ಮತ್ಸ್ಯಗಂಧಿ, ಗಗ್ಗರ, ಬಾರಣೆ, ಗುಜರಿ ಅದ್ದಿಲಿಚ್ಚನ ಜಿಹಾದಿಯ, ಕೊಡಗಿನ ಐತಿಹ್ಯ ಕಥೆಗಳು, ಬೆಟ್ಟದಾ ಮೇಲೊಂದು, ಕಪಿಲಳ್ಳಿಯ ಕತೆಗಳು, ಜಲಲ ಜಲಧಾರೆ, ದೊಡ್ಡ ವೀರ ರಾಜೇಂದ್ರ, ಕೊಡಗಿನ ಕತೆಗಳು.  ಶಿಶಿಲರನ್ನೇ ಕುರಿತು ಅನೇಕ ಗ್ರಂಥಗಳು ಪ್ರಕಟವಾಗಿವೆ . ಸುವರ್ಣ ಅಭಿನಂದನಾ ಸ್ಮರಣಿಕೆ, ಸಾಹಿತ್ಯ ಶಿಶಿಲ: ಶಿಶಿಲರ ಸಮಗ್ರ ಸಾಹಿತ್ಯ ವಿಮರ್ಶೆ, ಶಿಶಿಲರ ಜೀವನ ಮತ್ತು ಸಾಧನೆಗಳು, ಪ್ರಭಾಕರ ಶಿಶಿಲರ ಸಾಹಿತ್ಯ ಕುರಿತು ಡಾ. ಮೋಹನ ಕುಮಾರ ...

READ MORE

Related Books