ಕತೆ ತಾನೇ ಮುಕ್ತಾಯವಾಗುತ್ತದೆಯೋ ಕತೆಗಾರ ಮುಗಿಸುತ್ತಾನೆಯೋ ಎನ್ನುವ ಪ್ರಶ್ನೆಗೆ ಈ ಜಗತ್ತಿನಲ್ಲಿ ಉತ್ತರವಿಲ್ಲ ಎನ್ನುತ್ತದೆ ಯಶವಂತ ಚಿತ್ತಾಲರ ‘ದಿಗಂಬರ’ ಕಾದಂಬರಿ. ಕೃತಿನಿಷ್ಠ ವಿಮರ್ಶಕರು ಕೃತಿಯ ಸ್ವರೂಪದ ಆಧಾರದ ಮೇಲೆ, ಇಲ್ಲಿಗೆ ಈ ಕತೆ ಮುಗಿಯುತ್ತದೆ ಹಾಗೂ ಅದು ಸಮಗ್ರವಾಗಿದೆ ಎಂದು ಸಾಬೀತು ಮಾಡಲು ಯತ್ನಿಸುವುದನ್ನು ಕಾಣಬಹುದು. ಇಲ್ಲಿನ ಪ್ರತಿಯೊಂದು ಪಾತ್ರಗಳು ಲೇಖಕ ಬರೆಯುತ್ತಾ ಹೋದಂತೆ ಹಲವು ಮಗ್ಗುಲುಗಳಿಗೆ ಸಾಕ್ಷಿಯಾಗುತ್ತದೆ. ಸನ್ನಿವೇಶಕ್ಕೆ ತಕ್ಕಂತೆ ಹೊರಹೊಮ್ಮುವ ಪಾತ್ರಗಳು ಸಂದರ್ಭಗಳನ್ನು ಹಾಗೂ ಕಥನದ ಬಂಧವನ್ನು ಬಿರುಕಿಲ್ಲದೇ, ವಿರೋಧಾಭಾಸಗಳಿಲ್ಲದೇ ಕಟ್ಟಲು ಎಂಥ ಸ್ಪಷ್ಟತೆಯ ಅಗತ್ಯವಿದೆಯೆಂಬುದನ್ನು ತಿಳಿಸುವಂತಿದೆ. ‘ದಿಗಂಬರ’ ಕಾದಂಬರಿಯ ಓದಿನ ಅನುಭವ ಶ್ರೀಮಂತವಾಗಲು ಸಾಕಾಗುವಷ್ಟು ಕೊನೆಯನ್ನು ಹಾಗೂ ನಮ್ಮ ಕಲ್ಪನೆಯಲ್ಲಿ ಪೂರ್ತಿಗೊಳಿಸಲು, ಅದರ ವಿವಿಧ ಸಾಧ್ಯತೆಗಳನ್ನು ಯೋಚಿಸಲು ಅವಶ್ಯವಾಗುವಷ್ಟು ಗಾತ್ರ ಮತ್ತು ಹೂರಣವನ್ನು ಒಳಗೊಂಡಿದೆ ಎಂಬುದನ್ನು ನಾವು ಇಲ್ಲಿ ಅರಿಯಬಹುದು.
ತಮ್ಮ ಸಣ್ಣಕತೆಗಳ ಮೂಲಕ ಆಧುನಿಕ ಕನ್ನಡ ಕಥಾಸಾಹಿತ್ಯದ ಮೇರೆಗಳನ್ನು ವಿಸ್ತರಿಸಿದವರು ಯಶವಂತ ಚಿತ್ತಾಲ. ಅವರೊಬ್ಬ ಮಹತ್ವದ ಲೇಖಕ. ನವ್ಯ ಸಾಹಿತ್ಯದ ಪ್ರಮುಖ ಕತೆಗಾರ ಚಿತ್ತಾಲರು ಕತೆ ಹೇಳುವುದರಲ್ಲಿ ಸಿದ್ಧಹಸ್ತರು. ಕತೆಗಳ ಮೂಲಕ ಬರವಣಿಗೆ ಆರಂಭಿಸಿದ ಯಶವಂತರ ಮೊದಲ ಕತೆ 'ಬೊಮ್ಮಿಯ ಹುಲ್ಲು ಹೊರೆ'. ಅವರ ಮೊದಲ ಕತೆಯನ್ನು ಕನ್ನಡದ ಮಹತ್ವದ ಕತೆಗಳಲ್ಲಿ ಒಂದು ಗುರುತಿಸಲಾಗುತ್ತದೆ. ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಹನೇಹಳ್ಳಿಯವರಾದ ಯಶವಂತ ಅವರು 1928ರ ಆಗಸ್ಟ್ 3ರಂದು ಜನಿಸಿದರು. ತಂದೆ ವಿಠೋಬ, ತಾಯಿ ರುಕ್ಕಿಣಿ. ಖ್ಯಾತ ಕವಿ ಗಂಗಾಧರ ಚಿತ್ತಾಲರು ಅವರ ಹಿರಿಯ ಸಹೋದರ. ಹನೇಹಳ್ಳಿ, ಕುಮಟೆ, ಧಾರವಾಡ, ಮುಂಬಯಿಗಳಲ್ಲಿ ...
READ MORE