`ಛತ್ರಪತಿ ಶಿವಾಜಿ’ ವೀರಕೇಸರಿ ಸೀತರಾಮ ಶಾಸ್ತ್ರಿ ಅವರ ಪೌರಾಣಿಕ ಕೃತಿಯಾಗಿದೆ. ಶಿವಾಜಿ ಮಹಾರಾಜ ಎಂಬ ಹೆಸರು ಇತಿಹಾಸದ ಪುಟಗಳಲ್ಲಿ ಶೌರ್ಯ, ಯುದ್ಧನೀತಿ, ಸಮರ್ಥ ಹೋರಾಟಗಾರನೆಂದು ಬಿಂಬಿತವಾಗಿ ಅತಂತ್ರ ವಾಗಿದ್ದ ಹಿಂದೂ ಸಮಾಜದ ಪುನರ್ನಿಮಾಣ ಮಾಡಿದ ಮಹಾಛಲವಾದಿ ರಾಜನೆಂದರೆ ಅತಿಶಯೋಕ್ತಿಯೇನಲ್ಲಾ. ಅವನ ಯುದ್ಧತಂತ್ರಗಳು, ಧೈರ್ಯ, ಸಾಹಸಗಾಥೆಗಳನ್ನು ದಾಖಲಿಸದೆ ನಮ್ಮ ಭಾರತದ ಇತಿಹಾಸದ ವರ್ಣನೆ ಸಾಧ್ಯವಿಲ್ಲಾ. ಶಿವಾಜಿ ಆಯುಧಗಳಿಂದ ಎದುರಾಳಿಯನ್ನು ಮಣಿಸುವುದಕ್ಕಿಂತ ಮಾನಸಿಕವಾಗಿ ಅವರ ಸ್ಥಿತಿಯನ್ನರಿತು ಮಾರ್ಮಿಕವಾಗಿ ಯುದ್ಧ ಮಾಡುತ್ತಿದ್ದನೆಂದು ಹೇಳಲಾಗುತ್ತದೆ. ಇಂತಹ ದೇಶಪ್ರೇಮಿ, ಹಿಂದೂ ರಾಷ್ಟ್ರದಲ್ಲಿ ಮುಸ್ಲಿಂರ ಪ್ರಾಬಲ್ಯ ಮೆರೆಯುತ್ತಿರುವಾಗ ಹಿಂದೂಗಳ ಪುನರುತ್ಥಾನಕ್ಕಾಗಿ ಹೇಗೆ ಹೋರಾಡಿ ಜಯದ ಹಾದಿ ಹಿಡಿದ ಎಂಬುದನ್ನು "ಛತ್ರಪತಿ ಶಿವಾಜಿ" ಪುಸ್ತಕದಲ್ಲಿ ವಿವರಿಸಲಾಗಿದೆ.
ಸಾಹಿತಿ ಸೀತಾರಾಮಶಾಸ್ತ್ರಿಗಳು ಮೂಲತಃ ನಂಜನಗೂಡಿನವರು. ತಂದೆ- ನಾಗೇಶ ಶಾಸ್ತ್ರಿಗಳು. ತಾಯಿ- ಪಾರ್ವತಮ್ಮ. ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡು ತಾಯಿಯೊಂದಿಗೆ ಶೃಂಗೇರಿಗೆ ಬಂದ ಅವರು, ಸೋದರ ಮಾವಂದಿರ ಸಂಪರ್ಕದಲ್ಲಿ ಬೆಳೆದರು. ಗುರುಕುಲದಲ್ಲಿ ಶಿಕ್ಷಣ ಪ್ರಾರಂಭಿಸಿದರು. ಈ ವೇಳೆ ಶ್ರೀ ಚಂದ್ರಶೇಖರ ಭಾರತೀ ಮಹಾಸ್ವಾಮಿಗಳು ಸೀತಾರಾಮಶಾಸ್ತ್ರಿಗಳ ಸಹಪಾಠಿಗಳಾಗಿದ್ದರು. ಉದ್ಯೋಗಕ್ಕಾಗಿ ಬೆಂಗಳೂರಿಗೆ ತೆರಳಿದ ಅವರು ಶಂಕರ ಮಠದ ಅಧಿಕಾರಿಯಾಗಿ ಕೆಲಕಾಲ ಕಾರ್ಯನಿರ್ವಹಿಸಿದರು. ಆನಂತರ ಗೀರ್ವಾಣ ಭಾರತಿ ಸಂಸ್ಕೃತ ಮಹಾಲಯದಲ್ಲಿ ಅಧ್ಯಾಪಕ ವೃತ್ತಿ ಆರಂಭಿಸಿದರು. ಈ ವೇಳೆ ಗುರುಕುಲ ಶಿಕ್ಷಣ ಪದ್ಧತಿಯನ್ನು ಅನುಷ್ಠಾನಕ್ಕೆ ತಂದರು. ಶಂಕರ ಮಠಕ್ಕೆ ಭೇಟಿ ನೀಡಿದ ರವೀಂದ್ರನಾಥ ಠಾಕೂರರಿಂದ ಗುರುಕುಲ ...
READ MORE