ಚಪಲ ಮಲ್ಲಣ ಶಿವರಾಯ ಗೌಡ ಹರವಾಳ ಅವರ ಕಾದಂಬರಿಯಾಗಿದೆ. ರಮಣನ ಕಚೇ ಹರಕುತನ ಸುತ್ತ ಬರೆದಿರುತ್ತಾರೆ. ಭವಾನಿ ಮತ್ತು ಪಾರ್ವತಿ ಈ ಸರಕಾರಿ ಅಧಿಕಾರಿಯ ಕಾಮತೃಷೆಗೆ ಬಲಿಯಾಗುವರು. ಇತರ ಮಹಿಳೆಯರೂ ಕೂಡ ಈ ಪ್ರೇಮ ಚಾಂಡಾಲನ ಕಾಮತೃಷೆಗೆ ಬಲಿಯಾಗಿದ್ದು ಈತನ ಪತ್ನಿಯು ವಿಷಯ ಲಂಪಟ ಪತಿಯ ವಿರುದ್ಧ ಸೇಡು ತೀರಿಸಿಕೊಳ್ಳಲು ಪರಪುರುಷನ ಸಂಗ ಮಾಡುತ್ತಾಳೆ. ಇದು ಆಕೆಯ ಪ್ರತಿಭಟನೆ ಎಂದು ಪರಿಗಣಿಸಬಹುದು ಕೊನೆಯಲ್ಲಿ ಕಾದಂಬರಿಯ ನಾಯಕ ರಮಣನು ಹಲವು ಲೈಂಗಿಕ ವ್ಯಾಧಿಗಳಿಗೆ ಬಲಿಯಾಗುವನು. ಇವಿಷ್ಟು ಈ ಕಾದಂಬರಿಯ ಸ್ಕೂಲ ಪರಿಚಯ. ಈ ಕಾದಂಬರಿಯು ಅವರ ಪ್ರಥಮ ಕಾದಂಬರಿ ಕೃತಿಯಾಗಿದೆ.
ಮಲ್ಲಣ ಶಿವರಾಯ ಗೌಡ ಹರವಾಳ ಮೂಲತಃ ರಾಯಚೂರಿನವರು. ವಕೀಲ ವೃತ್ತಿಯ ಜೊತೆಗೆ ಸಾಹಿತ್ಯ ಮತ್ತು ಸಂಗೀತ ಕ್ಷೇತ್ರದಲ್ಲಿನ ಅವರ ಕೊಡುಗೆ ಅಪಾರ. ಕವಿಗೋಷ್ಠಿ,ಕವನ ವಾಚನವನ್ನು ಮಾಡಿದ್ದಾರೆ. ಅವರ 8 ಕೃತಿಗಳು ಪ್ರಕಟಗೊಂಡಿದೆ. ಕೃತಿಗಳು : ಚಪಲ ,ಧರ್ಮದ ಹುಲಿ, ಆಸೆಯ ಹುಳಿ, ಹೃದ್ರಾಬಾದ್ ಕರ್ನಾಟಕದ ಹುಲಿ, ಬೆಳಕಿನೆಡೆಗೆ, ಚೇರ್‍ಮನ್ ಗುಂಡವ್ವ, ಸಂತಿ ಸರದಾರ, ಜಾನಪದವೇ ಜ್ಞಾನಪದ. ...
READ MORE