ಸಾಹಿತಿ ಎಚ್.ಎಂ. ಶಂಕರ ನಾರಾಯಣ ರಾವ್ ಅವರು ಚಂದ್ರಗುಪ್ತ ಮೌರ್ಯರ ಆಡಳಿತ ಹಾಗೂ ಐತಿಹಾಸಿಕ ಸಂಗತಿಗಳನ್ನು ಆಧರಿಸಿ ಬರೆದ ಕಾದಂಬರಿ ಇದು. ಮೌರ್ಯರ ಮರಣ, ಮಿತ್ರ ಪ್ರೇಮಿ ಚಂದನದಾಸ, ಪರ್ವತರಾಜನ ಮರಣ, ಲಂಪಾಕಾಧಿಪತಿಯ ಪರಾಜಯ ಹೀಗೆ ವಿವಿಧ ಅಧ್ಯಾಯಗಳಡಿ ಕಥೆಯು ಸಾಗುತ್ತದೆ. ನಂದರಾಜನನ್ನು ಕೊಂದು ಚಂದ್ರಗುಪ್ತ ಮೌರ್ಯನನ್ನು ಪಟ್ಟಕ್ಕೆ ಕುಳ್ಳಿರಿಸಿ ಚಾಣಕ್ಯನು ಅರಸನಿಗೆ ರಾಜನೀತಿ ಬೋಧಿಸುವುದೂ ಕಾದಂಬರಿಯ ಜೀವಾಳವಾಗಿದೆ.
ಪ್ರಕಾಶಕ, ಬರಹಗಾರ, ಪ್ರಾಧ್ಯಾಪಕ ಹೀಗೆ ಹಲವು ಹೊಣೆಗಾರಿಕೆ ಸಮರ್ಥವಾಗಿ ನಿರ್ವಹಿಸಿದ ಪ್ರೊ. ಎಚ್. ಎಂ. ಶಂಕರನಾರಾಯಣ ರಾವ್, 1935-1990ರ ಅವಧಿಯಲ್ಲಿ, ಕನ್ನಡ ಕವಿಕಾವ್ಯ ಮಾಲೆ ಅಥವಾ ಶಾರದಾ ಮಂದಿರ ಪ್ರಕಾಶನ ಸಂಸ್ಥೆ ಯಿಂದ ಉತ್ತಮ ಕೃತಿಗಳನ್ನು ಪ್ರಕಟಿಸಿದ್ದರು. ಇವರು ಮೂಲತಃ ದಾವಣಗೆರೆ ಜಿಲ್ಲೆಯ ಹರಿಹರದವರು. ಹರಿಹರೇಶ್ವರ ದೇವಾಲಯದ ಅರ್ಚಕ ಮಲ್ಲಾರಿ ಭಟ್ಟ ಮತ್ತು ಭೀಮಕ್ಕ ಅವರ ಪುತ್ರರು. (ಜನನ: 21-11-1913) ಹರಿಹರ ಮತ್ತು ದಾವಣಗೆರೆಯಲ್ಲಿ ಪ್ರೌಢ ಶಿಕ್ಷಣ ನಂತರ ಮೈಸೂರಿನಲ್ಲಿ ಉನ್ನತ ಶಿಕ್ಷಣ ಪಡೆದರು. ವಾರನ್ನ ತಿಂದೇ ಎಂ.ಎ. ಪದವೀಧರರಾದರು. ಮೈಸೂರಿನ ಬನುಮಯ್ಯ ಹೈಸ್ಕೂಲಿನಲ್ಲಿ ಉಪಾಧ್ಯಾಯರಾದರು. ನಂತರ, 1945ರಲ್ಲಿ ಶಾರದಾ ವಿಲಾಸ ...
READ MORE