ಬಿತ್ತಕ್ಕೆ ಬೇರಿನ ಚಿಂತೆ

Author : ದಂಡಪ್ಪ

Pages 218

₹ 360.00




Year of Publication: 2023
Published by: ಕ್ರೈಸ್ಟ್ ಕಾಲೇಜು ಕನ್ನಡ ಸಂಘ
Address: ಬೆಂಗಳೂರು

Synopsys

ಕಾದಂಬರಿಗಳನ್ನು ಆಧುನಿಕ ಮಹಾಕಾವ್ಯಗಳೆಂದು ಕರೆಯಲಾಗುತ್ತದೆ. ಕಾದಂಬರಿ ಪ್ರಕಾರದ ಬಗ್ಗೆ ಹಲವಾರು ಚರ್ಚೆಗಳು ನಡೆದಿವೆ. ಕಾದಂಬರಿಯಲ್ಲಿ ಸಮಾಜ, ಜನರ ಬದುಕಿನ ಸ್ವರೂಪ, ಸಂಸ್ಕೃತಿ, ನಾಗರಿಕತೆಯ ವಿಕಾಸ, ಮನುಷ್ಯನ ಏಳುಬೀಳಿನ ಚಾರಿತ್ರಿಕ ಸ್ವರೂಪ ಎಲ್ಲವೂ ಕಲಾತ್ಮಕವಾಗಿ ಅಭಿವ್ಯಕ್ತಿಯನ್ನು ಪಡೆದಿರುತ್ತವೆ. ಈ ಕಾರಣದಿಂದ ಕಾದಂಬರಿಯನ್ನು ಸಾಂಸ್ಕೃತಿಕ ನೆಲೆಗಳಲ್ಲಿ ಅಧ್ಯಯನ ಮಾಡಿ ವಿಶ್ಲೇಷಣೆ ಮಾಡುವ ಕ್ರಮವನ್ನು ಇಲ್ಲಿನ ಲೇಖನಗಳಲ್ಲಿ ಅನುಸರಿಸಲಾಗಿದೆ. ಹಾಗೆಂದ ಮಾತ್ರಕ್ಕೆ ಕಾದಂಬರಿಯ ಕಲಾತ್ಮಕ ಅಂಗಗಳಾದ ತಂತ್ರ, ರೂಪ, ಆಕೃತಿ, ಆಶಯಗಳ, ಸಾವಯವ ಸಂಬಂಧವನ್ನು ಗಮನಿಸುತ್ತಿಲ್ಲವೆಂದಲ್ಲ. ಆಕೃತಿ ಮತ್ತು ಆಶಯಗಳ ಸಾಂಗತ್ಯದಲ್ಲೇ ಒಂದು ಉತ್ತಮ ಕಲಾಕೃತಿ ಸೃಷ್ಟಿಯಾಗುತ್ತದೆ. ಆಶಯವೇ ಆಕೃತಿಯನ್ನು ಕಂಡುಕೊಳ್ಳುತ್ತದೆ. ಯಶಸ್ವಿಯಾದ ಕೃತಿಯಲ್ಲಿ ಆಶಯ ಮತ್ತು ಆಕೃತಿಗಳೆರಡೂ ಸಂಪೂರ್ಣವಾಗಿ ಬೆರೆತು ಹೋಗಿರುತ್ತವೆ. ಇದನ್ನು ಗಮನದಲ್ಲಿಟ್ಟುಕೊಂಡು ಇಲ್ಲಿನ ಲೇಖನಗಳನ್ನು ಬರೆಯಲಾಗಿದೆ.-ಎಚ್. ದಂಡಪ್ಪ (ಲೇಖಕರ ಮಾತಿನಿಂದ)

Related Books