ಭೋಗ ಮತ್ತು ತ್ಯಾಗಗಳ ಮುಖಾಮುಖಿ, ಸಂಘರ್ಷವೆ ಕಾದಂಬರಿಯ ಕೇಂದ್ರಬಿಂದು. ತ್ಯಾಗಭೂಮಿಯಾದ ಭಾರತದ ನೆಲ, ಮಣ್ಣಿನ ಮಹತ್ವ, ದೇಶಾಭಿಮಾನ, ಭೋಗ-ತ್ಯಾಗಗಳ ಮೇಲಾಟವನ್ನು ಕಾದಂಬರಿಕಾರ ಇಲ್ಲಿ ನೈಜವಗಿ ಚಿತ್ರಿಸಿದ್ದಾರೆ. ಭಾರತೀಯ ಜೀವನ ಮೌಲ್ಯಗಳನ್ನು ಪ್ರತಿಪಾದಿಸುತ್ತಾ ಕೆಲವು ಸನ್ನಿವೇಶಗಳು ಹಣದ ದುರಾಸೆಯ ನೀರಸತನವನ್ನು ಪ್ರದರ್ಶಿಸುತ್ತದೆ. ಕಾದಂಬರಿಯ ಮುಖ್ಯ ಪಾತ್ರಗಳು ಬದುಕಿಗೆ ಬಹಳ ಮುಖ್ಯವಾಗಿ ಬೇಕಾಗಿರುವ ಏನನ್ನೋ ಕಳೆದುಕೊಂಡದ್ದನ್ನು ಅರಸುತ್ತಾ, ಅದು ವೈರಾಗ್ಯವೇ ಅಥವಾ ನಿರಾಶೆಯೇ ಎಂದು ಬುದ್ಧನಂತೆ, ಬಾಹುಬಲಿಯಂತೆ ಇನ್ನುಳಿದ ಆಯಸ್ಸಿನಲ್ಲಿ ತಾವೇನು ಪಡೆಯಬಹುದೆಂದು ನಿರ್ಧರಿಸುತ್ತಾ ಓದುಗನನ್ನು ಆಲೋಚನೆಗೆ ತಳ್ಳುತ್ತವೆ.
ಕಾದಂಬರಿಕಾರ, ಉಪನ್ಯಾಸಕ, ಸಂಶೋಧಕ ರವೀಶ್ ಅವರು ರಾಮನಗರ ಜಿಲ್ಲೆಯ, ಕನಕಪುರ ತಾಲ್ಲೂಕಿನ ಯಡಮಾರನಹಳ್ಳಿ ಗ್ರಾಮದವರು. ಕರ್ಮಯೋಗಿ ಕರಿಯಪ್ಪರವರು ಸ್ಥಾಪಿಸಿರುವ ರೂರಲ್ ಕಾಲೇಜಿನಿಂದ ಬಿ. ಎ. ಪದವಿ ಗಳಿಸಿ, ಬೆಂಗಳೂರು ವಿಶ್ವವಿದ್ಯಾಲಯದಿಂದ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದು, ಇಂದಿರಾಗಾಂಧಿ ಮುಕ್ತ ವಿಶ್ವವಿದ್ಯಾಲಯದಿಂದ ಸಮಾಜ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಗಳಿಸಿ ಪ್ರಸ್ತುತ ಬೆಂಗಳೂರು ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದಲ್ಲಿ ಸಂಶೋಧನೆ ನಡೆಸುತ್ತಿದ್ದಾರೆ. ಬಾಲ್ಯದಿಂದಲೇ ಸಾಹಿತ್ಯದೊಲವು ಮೊದಲಾಯಿತು. ತಮ್ಮ ಬರಹಗಳಲ್ಲಿ ಹಳ್ಳಿಗಾಡಿನ ಚಿತ್ರಣವನ್ನು ಕಣ್ಣು ಕಟ್ಟುವಂತೆ ಮೂಡಿಸಿ ಓದುಗರನ್ನು ನಿಬ್ಬೆರಗಾಗಿಸುತ್ತಾರೆ. ರವೀಶ್ ಅವರು ಮೂವತ್ತಕ್ಕೂ ಅಧಿಕ ಸಂಶೋಧನಾ ಲೇಖನಗಳು ಯು.ಜಿ.ಸಿ. ಮಾನ್ಯತೆ ಪಡೆದಿರುವ ...
READ MORE