"ಲೆಸ್ಬಿಯನ್ ತರಹದ ಮೈಲಿಗೆ ವಸ್ತು ಆರಿಸಿಕೊಂಡು ಕೃತಿ ರಚಿಸಿದ್ದಕ್ಕೆ ಮೊದಲು ಅಬಿನಂದನೆ ಹೇಳುವೆ.." ಇದು ಬೆನ್ನುಡಿ ಬರೆದ ವಸುಧೇಂದ್ರರ ಸಾಲು. ಈ ಕೃತಿ ಲೆಸ್ಬಿಯನ್ ಕಥಾ ಹಂದರ ಹೊಮ್ದಿದೆ. ಸಲಿಂಗಕಾಮದ ಭೂಮಿಕೆಯನ್ನು ಒಳಗೊಂಡ, ಉಮೇಶ ದೇಸಾಯಿಯವರು ಬರೆದ ಕಿರುಕಾದಂಬರಿ ’ಭಿನ್ನ’ ವು ಮೇಲಿನ ಎಲ್ಲ ವರ್ಗೀಕರಣಗಳನ್ನು ಒಳಗೊಂಡ ಒಂದು ಅದ್ಭುತ, ಆಧುನಿಕ ಕಾದಂಬರಿಯಾಗಿದೆ. ಹಾಗಿದ್ದರೂ ಸಹ ಈ ಕಾದಂಬರಿಯೂ ಈ ಎಲ್ಲ ವರ್ಗಗಳ ಕಾದಂಬರಿಗಳಿಂತ ಭಿನ್ನವಾಗಿಯೂ ಇದೆ. ಈ ಕೃತಿಯಲ್ಲಿ ಸಲಿಂಗಕಾಮಿಗಳ ಮನೋಸ್ಥಿತಿ, ಮನೋವೇದನೆ ಹಾಗು ಸಾಮಾಜಿಕ ಬವಣೆಗಳನ್ನು ತೋರಿಸುವ ಚಲನಚಿತ್ರ ಹಾಗು ಕತೆಗಳು ಇಲ್ಲಿವೆ. ಇಂದಿಗೂ ಟಾಬೂ ಆಗಿರುವ ಈ ತರಹದ ಸಂಬಂಧ ಅದರ ಫಲಾಫಲಗಳೇನು ಹಾಗೂ ಇದು ಯಾಕೆ ಇನ್ನೂ ಸ್ವೀಕೃತವಾಗಿಲ್ಲ ಇತ್ಯಾದಿ ವಸ್ತು ಒಳಗೊಂಡಂತಹ ಪುಸ್ತಕ ಇದಾಗಿದೆ.
ಹುಬ್ಬಳ್ಳಿಯಲ್ಲಿ ಜನಿಸಿದ ಉಮೇಶ ದೇಸಾಯಿ ಸದ್ಯ ಬೆಂಗಳೂರಿನಲ್ಲಿ ಲೆಕ್ಕಿಗರಾಗಿ ಕೆಲಸ ಮಾಡುತ್ತಿದ್ದಾರೆ. ಮೊದಲಿಂದಲೂ ಸಾಹಿತ್ಯದಲ್ಲಿ ಆಸಕ್ತಿ. ’ಚೌಕಟ್ಟಿನಾಚೆ’ ಕಥಾಸಂಕಲನ ಹಾಗೂ ’ಭಿನ್ನ’ ಕಾದಂಬರಿ ಪ್ರಕಟಿಸಿದ್ದಾರೆ. ಸ್ವತಃ ಪ್ರಕಾಶನ ಸಂಸ್ಥೆ ನಡೆಸುತ್ತಿದ್ದು ಹೊಸ ಬರಹಗಾರರನ್ನು ಪ್ರೋತ್ಸಾಹಿಸುತ್ತಿದ್ದಾರೆ. ...
READ MORE