ಇದು ರಹಸ್ಯಾತ್ಮಕ ರಮ್ಯ ಕಾದಂಬರಿ ಎಂದು ಭರಮಪ್ಪನ ಭೂತ ಕೃತಿಯ ಬಗ್ಗೆ ಲೇಖಕ ಶ್ರೀರಂಗ ಅವರು ಹೇಳಿಕೊಂಡಿದ್ದಾರೆ. ಭೂತದ ಬಗೆಗಿನ ಕಲ್ಪನೆಯನ್ನು ಕಥಾರೂಪದಲ್ಲಿ ಸುಂದರವಾಗಿ ಹೆಣೆದಿದ್ದು, ಕೊನೆಗೂ ಭರಮಪ್ಪನ ಭೂತ ಮನೆಯಲ್ಲಿರುವುದರಿಂದಲೇ ಅನಾಹುತಗಳಾದವು, ಎರಡು ಜೀವಗಳು ಸತ್ತವು ಎಂದು ಭರಮಪ್ಪನ ಬಾಯಿಂದಲೇ ಹೇಳಿಸುವ ಮೂಲಕ ಕಾದಂಬರಿ ಕೊನೆಗೊಳ್ಳುತ್ತದೆ. ಅಗೋಚರವಾದ ಈ ಭೂತದ ಅಸ್ತಿತ್ವವೂ ರಹಸ್ಯಮಯವಾಗಿಯೇ ಉಳಿಯುತ್ತದೆ. ಆದರೆ, ಅಗೋಚರ ಅಸ್ತಿತ್ವವೊಂದರ ನಂಬಿಕೆಯು ಹೇಗೆ ಜೀವನವನ್ನು ಅಸ್ಥಿರಗೊಳಿಸುತ್ತದೆ ಎಂಬುದನ್ನು ಲೇಖಕರು ತುಂಬಾ ಪರಿಣಾಮಕಾರಿಯಾಗಿ ಚಿತ್ರಿಸಿದ್ದೇ ಕಾದಂಬರಿಯ ಗಟ್ಟಿತನ.
ಶ್ರೀರಂಗ’ ಎಂದೇ ಖ್ಯಾತರಾಗಿರುವ ಆದ್ಯರಂಗಾಚಾರ್ಯರು ಕನ್ನಡ ನಾಟಕ ಪ್ರಪಂಚಕ್ಕೆ ವಿಶಿಷ್ಟ ಕೊಡುಗೆ ನೀಡಿದ ನಾಟಕಕಾರರು. ಅವರ ತಂದೆ ವಾಸುದೇವಾಚಾರ್ಯ ಜಾಗೀರದಾರ್ ಮತ್ತು ತಾಯಿ ರಮಾಬಾಯಿ. ವಿಜಾಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಅಗರ ಖೇಡದಲ್ಲಿ 1904ರ ಸೆಪ್ಟೆಂಬರ್ 26ರಂದು ಜನಿಸಿದರು. ವಿಜಾಪುರದಲ್ಲಿ ಶಾಲಾ ಶಿಕ್ಷಣ ಪೂರೈಸಿ, 1921ರಲ್ಲಿ ಪುಣೆಯ ಡೆಕ್ಕನ್ ಕಾಲೇಜಿಗೆ ಸೇರಿ ಬಿ. ಎ. (1925) ಪರೀಕ್ಷೆಯಲ್ಲಿ ಉತ್ತೀರ್ಣರಾದರು. 1925ರಲ್ಲಿ ಇಂಗ್ಲೆಂಡಿಗೆ ತೆರಳಿದ ಶ್ರೀರಂಗರು ಲಂಡನ್ ವಿಶ್ವವಿದ್ಯಾಲಯದಲ್ಲಿ ಭಾಷಾಶಾಸ್ತ್ರದಲ್ಲಿ ಎಂ. ಎ. ಪದವಿ ಪಡೆದು 1928ರಲ್ಲಿ ಭಾರತಕ್ಕೆ ಮರಳಿದರು. ಕೆಲವು ಕಾಲ ಹಾಫ್‍ಕಿನ್ ಸಂಸ್ಥೆಯಲ್ಲಿ ನೌಕರಿಯಲ್ಲಿದ್ದು 1930ರಲ್ಲಿ ...
READ MORE