ಮೀನಾ ಹರೀಶ್ ಕೋಟ್ಯಾನ್ ಅವರ ಕಾದಂಬರಿ ’ಭಾವದ ಬೆಳಕಲ್ಲಿ’. ಕೃತಿಗೆ ಮುನ್ನುಡಿ ಬರೆದ ಎನ್ನೇಬಿ ಮೊಗ್ರಾಲ್ ಪುತ್ತೂರು ‘ಎಲ್ಲೂ ಶಬ್ದಗಳ ಅಬ್ಬರ ಕಾಣದು. ಪ್ರತಿಯೊಂದು ಕೃತಿಯೂ ಪ್ರಶಾಂತವಾಗಿ ಹರಿಯುತ್ತಲೇ ಸಮಾಜದ ಮೇಲೆ ಚಿಕಿತ್ಸಕ ದೃಷ್ಟಿಯನ್ನು ಬೀರುತ್ತಾ ಮೊನಚುತನವನ್ನು ಮೆರೆಯುತ್ತದೆ. ಕಾದಂಬರಿಯೊಳಗೆ ಸಿಕ್ಕುಗಳನ್ನು, ಕಗ್ಗಂಟುಗಳನ್ನು ತರುವುದರಲ್ಲಿ ಇವರು ತೋರುವ ಪ್ರಾವೀಣ್ಯತೆ ಅನನ್ಯವಾದದ್ದು. ಈ ಸಿಕ್ಕು ಬಗೆಹರಿಯುವ ಬಗೆ ಹೇಗಪ್ಪಾ ಎಂದು ಓದುಗರು ತಲೆಕೆಡಿಸಿ ಕೂರುವ ಗಳಿಗೆಯಲ್ಲಿ, ಇವರು ಲೀಲಾಜಾಲವಾಗಿ, ಕನ್ವಿನ್ಸಿಂಗ್ ಆಗಿ ಆ ಸಿಕ್ಕುಗಳನ್ನು ಬಿಡಿಸಿ ತಲೆದೂಗುವಂತೆ ಮಾಡುತ್ತಾರೆ, ಅದೊಂದು 'ಟ್ರಿಕ್' ಅವರ ಬತ್ತಳಿಕೆಯ ವಿಶೇಷ ಅಸ್ತ್ರ, `ಭಾವದ ಬೆಳಕಲ್ಲಿ' ಕೃತಿಯಲ್ಲಿ ನೀವು ಅಂಥಾ ಸಂದರ್ಭಗಳನ್ನು ಧಾರಾಳವಾಗಿ ಕಾಣಬಹುದು.’ ಎಂದು ಪ್ರಶಂಸಿದ್ದಾರೆ
ಲೇಖಕಿ ಮೀನಾ ಹರೀಶ್ ಕೊಟ್ಯಾನ್ ಮೂಲತಃ ಮಂಗಳೂರಿನವರು. ತಂದೆ- ಜನ್ನಪೂಜಾರಿ, ತಾಯಿ- ಭವಾನಿ. ಮೈಸೂರಿನಲ್ಲಿ ಶಿಕ್ಷಣ ಪೂರೈಸಿದ ಅವರು 34 ಕಾದಂಬರಿಗಳನ್ನು ಪ್ರಕಟಿಸಿದ್ದಾರೆ. ಅಲ್ಲದೇ ನಾಡಿನ ಹಲವು ಪತ್ರಿಕೆಗಳಲ್ಲಿ ಅವರ ಕಾದಂಬರಿಗಳು ಪ್ರಕಟಗೊಂಡು ಜನ ಮನ್ನಣೆ ಪಡೆದಿವೆ. ...
READ MORE