ಬೆಳಕಿನಿಂದ ಕತ್ತಲೆಡೆಗೆ

Author : ಶೋಭಾ ಹೆಗಡೆ

Pages 280

₹ 225.00




Year of Publication: 2016
Published by: ಸ್ನೇಹ ಬುಕ್ ಹೌಸ್
Address: #165, 10ನೇ ಮುಖ್ಯ ರಸ್ತೆ, ಶ್ರೀನಗರ, ಬೆಂಗಳೂರು-560050
Phone: 9845031335

Synopsys

`ಬೆಳಕಿನಿಂದ ಕತ್ತಲೆಡೆಗೆ’ ಕೃತಿಯು ಶೋಭಾ ಹೆಗಡೆ ಅವರ ಕಾದಂಬರಿಯಾಗಿದೆ. ಈ ಕೃತಿಗೆ ಬೆನ್ನುಡಿ ಬರೆದಿರುವ ಎಮ್.ಎಸ್.ಕೊಡಗಲಿ ಅವರು, ಅನಂತತೆಯನ್ನು ಕನ್ನಡಿಯಲ್ಲಿ ಹಿಡಿದಿಡುವುದಾಗಲಿ, ಬ್ರಹ್ಮಾಂಡವನ್ನು ಅಂಗೈಯಲ್ಲಿ ದರ್ಶನ ಮಾಡಿಸುವುದಾಗಲಿ ಅಸಾಧ್ಯವಾದದ್ದು, ಆದರೆ ಅವೆರಡನ್ನೂ ತಮ್ಮ ಕೃತಿ 'ಬೆಳಕಿನಿಂದ ಕತ್ತಲೆಡೆಗೆ ಯಲ್ಲಿ ಯಶಸ್ವಿಯಾಗಿ ಮಾಡಿತೋರಿಸಿದ್ದಾರೆಂದರೆ ಆಶ್ಚರ್ಯವಾಗುವುದು. ಎಂತಹ ನಿಷ್ಣಾತ ಲೇಖಕರೂ ಹಿಂಜರಿಯುವ ವಿಷಯವನ್ನು ಇವರು ಆರಿಸಿಕೊಂಡಿದ್ದಾರೆ. ಬದುಕು, ಜೀವನ ಹಾಗೂ ಜೀವನದ ಗುರಿಗಳಂತಹ ಗಹನ ವಿಷಯವನ್ನು ಕೇವಲ ಸರಸ ಸಂಭಾಷಣೆಯ ಮೂಲಕ ಜಿಜ್ಞಾಸು ಮತ್ತು ಸಾಮಾನ್ಯ ಓದುಗರಿಬ್ಬರಿಗೂ ನೇರವಾಗಿ ಹೃದಯ ತಟ್ಟುವಂತೆ ಬರೆದಿದ್ದಾರೆ. ಧರ್ಮ-ಜಾತಿಗಳನ್ನೇ ಅಸ್ತವಾಗಿ ಬಳಸಿಕೊಂಡು ಇಡೀ ಮಾನವ ಕುಲವನ್ನೇ ಅಶಾಂತಿಗೆ ತಳ್ಳಲಾಗುತ್ತಿದೆ. ಎಲ್ಲ ದೇಶಗಳಲ್ಲಿ ರಕ್ತಪಾತವಾಗುತ್ತಿರುವುದನ್ನು ಕಾಣುತ್ತಿದ್ದೇವೆ. ಹಿಂದೆಂದಿಗಿಂತಲೂ ಇಂದು ಸಾಮಾಜಿಕ ಜೀವನವು ತಲ್ಲಣಗೊಂಡಿದೆ. ಮನುಷ್ಯ ಮನುಷ್ಯನನ್ನೇ ಕೊಲ್ಲುವ ದುಃಸ್ಥಿತಿಗೆ ಇಳಿದಿದ್ದಾನೆ. ಸ್ವಾರ್ಥ, ದ್ವೇಷ ಹಾಗೂ ಅಧಿಕಾರದಾಹಗಳಿಂದ ವಿಕಾರಗೊಂಡ ಅವನ ಮನಸ್ಸು ಸಾಮಾಜಿಕ ವ್ಯವಸ್ಥೆಯನ್ನೇ ಸರ್ವನಾಶದ ಅಂಚಿಗೆ ಮುಟ್ಟಿಸಿದೆ. ಇಂತಹ ಅಸ್ತವ್ಯಸ್ತಗೊಂಡ ಮನಸ್ಸನ್ನು ಪುನಃ ಸಮತೋಲನ ಸ್ಥಿತಿಗೆ ತಂದಾಗ ಮಾತ್ರ ಸಮಾಜದಲ್ಲಿ ಶಾಂತಿ-ಸುವ್ಯವಸ್ಥೆ ತರಲು ಸಾಧ್ಯವಿದೆ. ಧರ್ಮ-ಜಾತಿಗಳನ್ನು ಬೆಸೆಯಲು ಮತ್ತು ಜನರಲ್ಲಿ ನೆಮ್ಮದಿ ಮೂಡಿಸಲು ತನ್ನ ಇಡೀ ಜೀವನವನ್ನೇ ಮುಡುಪಾಗಿಟ್ಟ ಒಬ್ಬ ವ್ಯಕ್ತಿಯ ಸುತ್ತಲೂ ಮನೋಜ್ಞವಾಗಿ ಹೆಣೆದಿರುವ ಈ ಕೃತಿ ಅಮೋಘವಾದುದು. ಕನ್ನಡ ಸಾರಸ್ವತಲೋಕಕ್ಕೆ ಹೊಸ ಶೈಲಿಯಲ್ಲಿ ಇಂತಹ ಅಪೂರ್ವ ಕೃತಿಯನ್ನು ಅರ್ಪಿಸಿದ ಲೇಖಕಿ ಅಭಿನಂದನಾರ್ಹರು. ಸಹೃದಯ ಓದುಗರು ಉತ್ತೇಜನ ನೀಡುವರೆಂದು ಆಶಿಸುತ್ತೇನೆ ಎಂದಿದ್ದಾರೆ.

About the Author

ಶೋಭಾ ಹೆಗಡೆ

ಶೋಭಾ ಹೆಗಡೆ ಅವರು ಹುಟ್ಟಿ ಬೆಳೆದಿದ್ದು ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕಿನ ತುಂಬೆಮನೆಯಲ್ಲಿ. ಎಳವೆಯಲ್ಲೇ ಸಾಂಸ್ಕೃತಿಕ ಮತ್ತು ಸಾಹಿತ್ಯ ವಾತಾವರಣದ ಪ್ರಭಾವ ಗಾಢವಾಗಿದ್ದರಿಂದ ಓದು ಮತ್ತು ಬರವಣಿಗೆ ಜೊತೆಯಲ್ಲೇ ಸಾಗುತ್ತ ಈಗ ಅಂಕಣಕಾರ್ತಿ ಹಾಗೂ ಕಾದಂಬರಿಯಾಗಿ ಮೈದಳೆದಿದ್ದಾರೆ. ಸುಮಾರು ಇಪ್ಪತ್ತು ವರ್ಷಗಳ ಕಾಲ ಆಕಾಶವಾಣಿ ಮತ್ತು ದೂರದರ್ಶನದ ಕಾರ್ಯಕ್ರಮಗಳ ನಿರೂಪಣೆ, ನಿರ್ವಹಣೆ ಮತ್ತು ಆಯೋಜನೆಯಲ್ಲಿ ತೊಡಗಿಕೊಂಡು, ನೇರಪ್ರಸಾರದ ಕಾರ್ಯಕ್ರಮ `ಓ ಸಖಿ'ಯನ್ನು ನಿರ್ವಹಿಸಿದ್ದಾರೆ. `ಬೆಳಕಿನಿಂದ ಕತ್ತಲಿನೆಡೆಗೆ' ಮತ್ತು `ಆತಿಥೇಯನಾದ ಅತಿಥಿ' ಎಂಬ ಎರಡು ಕಾದಂಬರಿಗಳು ಪ್ರಕಟವಾಗಿವೆ. `ಆತಿಥೇಯನಾದ ಅತಿಥಿ' ಮಿನಿ ಕಾದಂಬರಿಯು ತರಂಗ ವಾರಪತ್ರಿಕೆಯ ಮೆಚ್ಚುಗೆಯ ಬಹುಮಾನ ...

READ MORE

Related Books