`ಬಯಕೆಯ ಬಲೆಯಲ್ಲಿ’ ಉಷಾನವರತ್ನರಾಂ ಅವರ ಕಾದಂಬರಿಯಾಗಿದೆ. ಯೌವ್ವನ ಒಂದು ಹುಚ್ಚು ಮಹಾಪೂರ. ಬದುಕಿನಲ್ಲಿ ಒಂದು ಮಹತ್ತರ ತಿರುವು. ಕೆಲವರು ಈಜಿ ದಡ ಸೇರುತ್ತಾರೆ. ಕೆಲವರು ಕೊಚ್ಚಿಹೋಗುತ್ತಾರೆ, ಕೆಲವರು ಮುಳುಗುತ್ತಾರೆ. ಬದುಕಿನ ಈ ಮಹತ್ತರ ತಿರುವಿನಲ್ಲಿ ಬಲೆ ಬೀಸಿದರೆ ಬಲೆಯಲ್ಲಿ ಸಿಕ್ಕಿಬೀಳುವವರೆಷ್ಟು ಮಂದಿಯೋ! ಆಗ ಯುವ ಜನಾಂಗಕ್ಕೆ ಬೇಕಾಗುವುದು ಪ್ರೀತಿ, ವಿಶ್ವಾಸ, ಭರವಸೆ, ಅವರನ್ನು ಅರ್ಥೈಸಿಕೊಂಡು ಮಾರ್ಗದರ್ಶನ ನೀಡಿ ಮುಂದೆ ಸಾಗಲು ದಾರಿ ಹಸನು ಮಾಡಿಕೊಡುವ ಹಿತೈಷಿಗಳು. ಇವುಗಳು ಲಭ್ಯವಾಗದೇ ಹೋದಲ್ಲಿ ಬದುಕು ಪ್ರಪಾತದಲ್ಲಿ ಬಿದ್ದುಹೋಗಬಹುದು. ಯೌವ್ವನದಲ್ಲಿ ನಡೆಯಬಹುದಾದ, ನಡೆಯುವ ನಡೆದಿರುವ ಒಂದು ಘಟನೆಯ ಸುತ್ತ ಹೆಣೆದಿರುವ ಕಥೆಯಿದು.
ಲೇಖಕಿ ಉಷಾ ನವರತ್ನರಾಂ ಅವರು ಹುಟ್ಟಿದ್ದು ಬೆಂಗಳೂರಿನಲ್ಲಿ. ತಂದೆ- ಎಂ.ವಿ. ಸುಬ್ಬರಾವ್. ತಾಯಿ- ಶಾಂತಾ. ಪ್ರಾರಂಭಿಕ ಶಿಕ್ಷಣವನ್ನು ಶಿವಮೊಗ್ಗದ ಮೇರಿ ಇಮ್ಯಾಕುಲೇಟ್ ಕಾನ್ವೆಂಟ್ ಹಾಗೂ ಬೆಂಗಳೂರಿನ ಮಹಿಳಾ ಸೇವಾ ಸಮಾಜದಲ್ಲಿ ಪೂರ್ಣಗೊಳಿಸಿದರು. ಆನಂತರ ಮೌಂಟ್ ಕಾರ್ಮಲ್ ಕಾಲೇಜಿನಿಂದ ಇಂಗ್ಲಿಷ್ ಸಾಹಿತ್ಯ ಹಾಗೂ ಇತಿಹಾಸದಲ್ಲಿ ಪದವಿ ಪಡೆದರು. ಪತ್ರಿಕೋದ್ಯಮದಲ್ಲಿ ಡಿಪ್ಲೊಮಾ ಪೂರೈಸಿದರು. ವಿದ್ಯಾರ್ಥಿನಿಯಾಗಿದ್ದಾಗಲೇ ಹಲವು ಲೇಖನಗಳನ್ನು ಪ್ರಕಟಿಸಿದರು. ಇಂಗ್ಲಿಷ್ ಮತ್ತು ಕನ್ನಡ ಪತ್ರಿಕೆಗಳ ಅಂಕಣಗಾರ್ತಿಯಾಗಿದ್ದು, ಗೆಳತಿ ಮತ್ತು ಉಷಾ ಪತ್ರಿಕೆಗಳ ಸಂಪಾದಕಿಯಾಗಿದ್ದರು. ಮಹಿಳಾ ಸೇವಾ ಸಮಾಜದಲ್ಲಿ ಅಧ್ಯಾಪಕಿಯಾಗಿ 27 ವರ್ಷ ಸೇವೆ ಸಲ್ಲಿಸಿ, ಸ್ವಯಂ ನಿವೃತ್ತಿ ಪಡೆದರು. ನಾಲ್ಕು ವರ್ಷ ರೀಜನಲ್ ಫಿಲಂ ಸೆನ್ಸಾರ್ ...
READ MORE