'ಬಾರೇ ಭಾಗ್ಯದ ಸಿರಿಯೇ ಮತ್ತು ಮನ ಹಿಗ್ಗಿ ಹೂವಾಯ್ತು' ಹೆಚ್. ಜಿ. ರಾಧದೇವಿ ಅವರ ಕಾದಂಬರಿಯಾಗಿದೆ. ಬಡ ಕುಟುಂಬದ ನಾರಾಯಣರಾಯರು ಮತ್ತು ಪದ್ದಮ್ಮ ದಂಪತಿಗಳಿಗೆ ಮೂವರು ಹೆಣ್ಣುಮಕ್ಕಳು: ಪಾರ್ವತಿ, ವಿಶಾಲಾಕ್ಷಿ ಮತ್ತು ಸಾವಿತ್ರಿ. ಹೊಟ್ಟೆ ತುಂಬಾ ಉಣ್ಣಲು ಅನ್ನವಿಲ್ಲದಿದ್ದರೂ, ವಂಶ ಉದ್ಧಾರ ಮಾಡಲು ಗಂಡು ಮಗು ಬೇಕೆಂಬ ಆಸೆಯಿಂದ ಕುಟುಂಬ ಬೆಳೆಸಿಕೊಂಡಿದ್ದರು. ಆರೋಗ್ಯ ಸರಿ ಇಲ್ಲದ ಪದ್ದಮ್ಮ ಸದಾ ಗೊಣಗುತ್ತಾ, ಯಾರನ್ನಾದರೂ ಆಕ್ಷೇಪಿಸುತ್ತಾ ಮಲಗಿಕೊಂಡೆ ಇರುತ್ತಿದ್ದರು. ಮೊದಲು ಅನಾರೋಗ್ಯದಿಂದ ಅನಿವಾರ್ಯವಾಗಿದ್ದ ವಿರಾಮ ಅಭ್ಯಾಸವಾದ ಮೇಲೆ ಸೋಮಾರಿತನವಾಗುತ್ತದೆ. ತುಂಬು ಸಂಸಾರದ ನೊಗಕ್ಕೆ ಕತ್ತು ನೀಡಿದ ಪತಿ ನಾರಾಯಣರಾಯರು ಇನ್ನೂರು ರೂಪಾಯಿ ಸಂಬಳಕ್ಕಾಗಿ ದುಡಿದು, ಸಂಸಾರದ ಖರ್ಚು ನಿಭಾಯಿಸಲಾಗದೆ ಸೋತು ಮೌನಿಯಾಗಿ ದಿನ ದೂಡುತ್ತಾರೆ. ಇಂಥಹ ಸಾಮಾಜಿಕ ಕಥಾವಸ್ತುವನ್ನು ಒಳಗೊಂಡಿರುವ ಈ ಎರಡು ಕಾದಂಬರಿಗಳು ಓದುಗರಿಗೆ ಸಾಮಾಜಿಕ ಬದುಕಿನ ನಿದರ್ಶಗಳಂತಿವೆ.
ಕನ್ನಡ ಕಾದಂಬರಿಗಾರ್ತಿ ಹೆಚ್. ಜಿ.ರಾಧಾದೇವಿ ಅವರು ತಮ್ಮ ವೃತ್ತಿ ಜೀವನದಲ್ಲಿ 30ಕ್ಕೂ ಹೆಚ್ಚು ಕಾದಂಬರಿಗಳನ್ನು ರಚಿಸಿದ್ದಾರೆ. ಹುಟ್ಟಿದ್ದು ಕೋಲಾರ ಜಿಲ್ಲೆಯ ಶಿಡ್ಲಘಟ್ಟದಲ್ಲಿ. ತಂದೆ ಗೋಪಿನಾಥಾಚಾರ್. ಪ್ರಾಥಮಿಕ ಶಾಲಾ ಶಿಕ್ಷಕರು.ಕೋಲಾರದಲ್ಲಿ ಸರಕಾರಿ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ.-ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದರು. ಮುಂದಿನ ಓದಿಗೆ ತಡೆಯುಂಟಾಗಿ, ಮನೆ ಪಾಠ ಆರಂಭಿಸಿದರು.ಈ ಅನುಭವವೇ ಶಾಲಾ ಶಿಕ್ಷಕಿಯಾಗುವ ಅವಕಾಶಕ್ಕೆ ದಾರಿಯಾಯಿತು. ದುಡಿಯುವ ಮಹಿಳಾ ವರ್ಗ ಕುರಿತ ಅನೆಕ ಸಮಸ್ಯೆಗಳನ್ನು ತಮ್ಮ ಕತೆ ಕಾದಂಬರಿಗಳ ಮೂಲಕ ಬೆಳಕು ಚೆಲ್ಲಿದ್ದು, ಈ ಬಗ್ಗೆ ಹಲವಾರು ಲೇಖನಗಳನ್ನು ಸಹ ಬರೆದಿದ್ದಾರೆ. ‘ಅನುರಾಗ ಅರಳಿತು, ಒಲವಿನ ಸುಧೆ ಒಲಿದು ಬಂದ ಅಪ್ಸರೆ, ಕತ್ತಲಲ್ಲಿ ಕಂಡ ಮಿಂಚು, ...
READ MORE