‘ಅರಿವಿನ ಹರಿವು’ ಲೇಖಕ ಸಿ. ನಾಗಣ್ಣ ಅವರ ಅಂಕಣ ಬರಹಗಳ ಸಂಕಲನ. ಈ ಕೃತಿಗೆ ಡಾ.ಎನ್.ಎಸ್. ತಾರಾನಾಥ ಅವರು ಬೆನ್ನುಡಿ ಬರೆದಿದ್ದಾರೆ. ಜನಸಾಮಾನ್ಯರು ಅರಿಯದ ಸಂಗತಿಗಳನ್ನು, ತಿಳಿಯದ ತಲ್ಲಣಗಳನ್ನು, ಅವರಿಗೆ ಅಪರಿಚಿತವಾದ ವ್ಯಕ್ತಿಗಳನ್ನು ಪರಿಚಯಿಸುವುದು, ಅವರನ್ನು ಎಚ್ಚರಿಸುವುದು ಅಂಕಣದ ಉದ್ದೇಶ. ಅದನ್ನು ಈಡೇರಿಸುವುದೇ ನಾಗಣ್ಣ ಅವರ ಮುಖ್ಯಗುರಿ, ಹಾಗಾಗಿ ಅವರ ಅಂಕಣಗಳ ಭಾಷೆ ಸರಳ, ನೇರ, ನಿರಾಡಂಬರ, ದಿಟ್ಟ, ನಾಗಣ್ಣ ಅವರಿಗೆ ಬರೆಹ ಶಬ್ದ ಸಂಭ್ರಮವಲ್ಲ, ರಂಜನೆಯ ಲೀಲೆಯಲ್ಲ, ಉಪದೇಶದ ವಾಗದ್ವೈತವಲ್ಲ, ಅಂದು-ಇಂದು-ಮುಂದುಗಳನ್ನು ತಿಳಿಸುವ ಅರಿವಿನ ಹರಿವು. ಈ ಚೇತನವಾಹಿನಿಯಲ್ಲಿ ಮೀಯಲು ವ್ಯಯಿಸುವ ವೇಳೆ ಖಂಡಿತ ವ್ಯರ್ಥವಲ್ಲ ಎನ್ನುತ್ತಾರೆ ತಾರಾನಾಥ. ಇಲ್ಲಿ ವಿವಿಧ ವಿಚಾರಗಳಿಗೆ ಸಂಬಂಧಿಸಿದಂತೆ ಸಿ.ನಾಗಣ್ಣ ಅವರು ಬರೆದ ಅಂಕಣಗಳು ಸಂಕಲನಗೊಂಡಿವೆ.
ಡಾ. ಸಿ. ನಾಗಣ್ಣ ಅವರು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ತೌಲನಿಕ ಸಾಹಿತ್ಯ ಮತ್ತು ಭಾಷಾಂತರ ವಿಭಾಗದ ಪ್ರಾಧ್ಯಾಪಕರಾಗಿಯೂ, ಮೈಸೂರು ಮಹಾರಾಜಾ ಕಾಲೇಜಿನಲ್ಲಿ ಇಂಗ್ಲಿಷ್ ಸಾಹಿತ್ಯ ಬೋಧಕರಾಗಿಯೂ ಸೇವೆ ಸಲ್ಲಿಸಿ ನಿವೃತ್ತರು. ಕವಿ, ವಿಮರ್ಶಕ, ಭಾಷಾಂತರಕಾರರಾಗಿ ಹಲವು ಗ್ರಂಥಗಳನ್ನು ರಚಿಸಿದ್ದಾರೆ. ಭಾರತೀಯ ಜ್ಞಾನಪೀಠ, ಸರಸ್ವತಿ ಸಮ್ಮಾನ್, ಕೇಂದ್ರ ಸಾಹಿತ್ಯ ಅಕಾಡೆಮಿಯ ಕನ್ನಡ ಸಲಹಾ ಸಮಿತಿಯ ಸದಸ್ಯರಾಗಿ ಕೆಲಸ ನಿರ್ವಹಿಸಿದ್ದರು. ಆಫ್ರಿಕನ್ ಲೇಖಕ ಚಿನುವ ಅಚಿಬೆಯ ಥಿಂಗ್ಸ್ ಫಾಲ್ ಅಪಾರ್ಟ್ ಕೃತಿಯನ್ನು ‘ಭಂಗ’ ಶೀರ್ಷಿಕೆಯಡಿ ಅನುವಾದಿಸಿದ್ದಾರೆ ಖ್ಯಾತ ಬರಹಗಾರ ಸಿ.ಎನ್. ರಾಮಚಂದ್ರನ್ ಅವರ ಬದುಕು-ಬರೆಹ ಕುರಿತ ಕೃತಿ ಪ್ರಕಟಿಸಿದ್ದಾರೆ. ...
READ MORE