ಖ್ಯಾತ ಲೇಖಕಿ ಸಾಯಿಸುತೆ ಅವರ ಕಾದಂಬರಿ-ಅಪೂರ್ವ ಮೈತ್ರಿ. ಇದು ಸಾಮಾಜಿಕ ಕಾದಂಬರಿ. ಕಥಾ ವಸ್ತು, ನಿರೂಪಣಾ ಶೈಲಿ, ಪಾತ್ರಗಳ ಸೃಷ್ಟಿ ಹಾಗೂ ಸನ್ನಿವೇಶಗಳ ಜೋಡಣೆ ದೃಷ್ಟಿಯಿಂದ ಈ ಕೃತಿಯು ಓದುಗರನ್ನು ಸೆಳೆ ಯುತ್ತದೆ.
ಕನ್ನಡ ಕಾದಂಬರಿ ಲೋಕದ ಅನನ್ಯ ಪ್ರತಿಭೆ ಸಾಯಿಸುತೆ. ತಮ್ಮ ಕಾದಂಬರಿಗಳ ಮೂಲಕ ಹೆಂಗಳೆಯರ ಮೆಚ್ಚುಗೆಗೆ ಪಾತ್ರವಾದ ಲೇಖಕಿ. ಅವರು ಕನ್ನಡ ಓದುಗ ವಲಯ ವಿಸ್ತರಿಸಿದ ಬರಹಗಾರ್ತಿ ಕೂಡ. ಸಾಯಿಸುತೆ ಅವರು ಕೋಲಾರದಲ್ಲಿ 1942ರ ಆಗಸ್ಟ್ 20ರಂದು ಜನಿಸಿದರು. ಅವರ ಹೆಸರು ರತ್ನ. ’ಸಾಯಿಸುತೆ’ ಎಂಬುದು ಕಾವ್ಯನಾಮ. ತಂದೆ ವೆಂಕಟಪ್ಪ ಮತ್ತು ತಾಯಿ ಲಕ್ಷಮ್ಮ. ಕೋಲಾರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು, ಓದುವ ಹಂಬಲದಿಂದ ಕಾಲೇಜು ಮೆಟ್ಟಿಲೇರಿದ್ದರು. ಆದರೆ, 16ನೇ ವಯಸ್ಸಿಗೆ ಮದುವೆಯಾದರು. ನಂತರದಲ್ಲಿ ಅವರಿಗೆ ನೆರವಾದವರು ಸಾಹಿತ್ಯಪ್ರೇಮಿ ಪತಿ ಅಶ್ವತ್ಥನಾರಾಯಣ. ಮನೆಯಲ್ಲಿದ್ದ ಸಾಹಿತ್ಯ ಪುಸ್ತಕಗಳನ್ನು ಓದುತ್ತಾ ಸಾಹಿತ್ಯದ ಒಲವು ಬೆಳೆಸಿಕೊಂಡ ...
READ MORE