‘ಅನೂಹ್ಯ’ ಕೆ.ಎಸ್. ರಾಧಾಕೃಷ್ಣ ಅವರ ಮೊದಲ ಕಾದಂಬರಿ. ಕಥಾವಸ್ತು ಅತ್ಯಂತ ಭಿನ್ನವಾದದ್ದು. ಪ್ರತಿಯೊಂದು ಸಮಾಜದಲ್ಲೂ ವಿಚಿತ್ರವಾಗಿ ಕಾಣುವ ಬದುಕೊಂದನ್ನ ಲೇಖಕರು ಈ ಕಾದಂಬರಿಯಲ್ಲಿ ಪರಿಚಯಿಸಿದ್ದಾರೆ. ಈ ಕಾದಂಬರಿಯನ್ನು ಓದಿದ ಕೆಲವು ಸ್ನೇಹಿತರು ಇಂಥ ಬದುಕು ನಮ್ಮ ಸಮಾಜದಲ್ಲಿ ವಿಚಿತ್ರವಾಗಿ ಕಾಡುತ್ತದೆ ಎಂದು ಲೇಖಕರು ಹೇಳಿದ್ದಾರೆ.
ಪ್ರತಿಯೊಂದು ರೀತಿಯ ಬದುಕು ಪ್ರತಿಯೊಂದು ಸಮಾಜದಲ್ಲೂ ವಿಚಿತ್ರವಾಗಿ ಕಾಣುತ್ತದೆ ಬದುಕೇ ಅಂಥದು ಅದು ನಮ್ಮೆಲ್ಲರ ಕಲ್ಪನೆಯ ಒಟ್ಟು ವೈಶಾಲ್ಯಕ್ಕಿಂತಲೂ ಹೆಚ್ಚು ಹರಹು ಉಳ್ಳದ್ದು. ಅದರ ತೀವ್ರತೆಯನ್ನು ಅನುಭವಿಸಬೇಕಾದರೆ ಅದರ ಸಂವೇದನೆಗಳೊಂದಿಗೆ ನಮ್ಮನ್ನು ಒಂದಾಗಿಸಿಕೊಳ್ಳಬೇಕು. ಹಾಗಲ್ಲದಿದ್ದರೆ ಅದರ ಸೊಬಗು ಸಾವಿಗೆ ಸಾಮೀಪ್ಯ ಹೊಂದಿದ ಚಿತ್ರಹಿಂಸೆಯಾಗುತ್ತದೆ ಎನ್ನುತ್ತಾರೆ. ವಿಭಿನ್ನ ಕತಾವಸ್ತುಗಳ ಮೂಲಕ ವಿಭಿನ್ನ ಪಾತ್ರಗಳ ಮೂಲಕ ಈ ಕಾದಂಬರಿಯು ಓದುಗರನ್ನು ಹಿಡಿದಿಡುತ್ತದೆ.