ಅಮೃತ ದೀಪ

Author : ವಾಣಿ ರಾವ್

Pages 224

₹ 165.00




Year of Publication: 2015
Published by: ಪಟೇಲ್ ಎಂಟರ್ ಪ್ರೈಸೆಸ್ ಮಂಡ್ಯ
Address: ಪಟೇಲ್ ಎಂಟರ್ ಪ್ರೈಸಸ್, ಹಿರಿಕಳಲೆ ಕಸಬ ( ಹೆಚ್), ಕೆ. ಆರ್. ಪೇಟ್ (ತಾ), ಮಂಡ್ಯ.

Synopsys

‘ಅಮೃತ ದೀಪ’ ವಾಣಿ ರಾವ್ ಅವರ ಕಾದಂಬರಿಯಾಗಿದೆ. ಲೇಖಕಿಯ ನುಡಿ ಬರಹವಿದೆ: ನಾನು ಇಂಗ್ಲೆಂಡಿಗೆ ಹೋಗುವವರೆಗೂ, ಬ್ರಿಟಿಷರ ಮೇಲೆ ನನಗೆ ಸ್ವಲ್ಪ ಪ್ರಿಜಡೀಸ್ ಇತ್ತೆಂದು ಹೇಳಬಹುದು. ಆದರೆ ಅಲ್ಲಿಗೆ ಹೋದ ಮೇಲೆ ನನ್ನ ಅನೇಕ ಪೂರ್ವಭಾವೀ ಅಭಿಪ್ರಾಯಗಳನ್ನು ಬದಲಿಸಿಕೊಳ್ಳಬೇಕಾಯಿತು. ಆ ಬದಲಾವಣೆಯನ್ನು ತಂದ ವಾತಾವರಣ, ಅನುಭವಗಳೇ ಈ ಕಾದಂಬರಿಗೆ ಮೂಲವಾಯಿತೆನ್ನಬಹುದು. ಅಲ್ಲಿ ನಾನಿದ್ದಾಗ, ಆದ ಅನುಭವಗಳೇ ಕಂಬ್ರಿಯಾನವಾದರೆ ಅಲ್ಲಿಂದ ಮುಂದೆ ಸ್ಕಾಟ್‌ಲೆಂಡ್‌ನಲ್ಲಿ ಅನೇಕ ಭಾರತೀಯ ಹೆಸರಿನ ಅರಮನೆಗಳನ್ನು ನೋಡಿದಾಗ ನನಗೆ ಸ್ಕಾಟ್‌ಲೆಂಡ್ ಸೈನ್ಯದವರು, ಭಾರತಕ್ಕೆ ಎಷ್ಟೊಂದು ಸಂಬಂಧಗಳನ್ನಿಟ್ಟು ಕೊಂಡಿದ್ದರೆಂಬ ವಿಷಯ ತಿಳಿದುಬಂದಿತು. ಮತ್ತು ಅಲ್ಲಿಯ ಪ್ರಜಾಪಾಲನೆ, ರೇಲ್ವೆ- ಸಂಚಾರ ಮಾರ್ಗ ಪೊಲೀಸು ವ್ಯವಸ್ಥೆ ನನ್ನ ಮನಸ್ಸಿನ ಮೇಲೆ ಅಪಾರವಾದ ಆಲೋಚನೆಗಳನ್ನು ಹೇರಿತು. ಹಾಗಾಗಿ ಈ ಅನುಭವಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳುವ ಬಯಕೆಯಿಂದ ಸ್ಕಾಟ್‌ಲೆಂಡನ್ನು ಭಾರತಕ್ಕೆ ಇಳಿಸ ಬೇಕಾಯಿತು.

About the Author

ವಾಣಿ ರಾವ್
(04 October 1931)

ಕವಿತೆ, ಕತೆ, ಕಾದಂಬರಿ ಕ್ಷೇತ್ರದಲ್ಲಿ ಬರವಣಿಗೆಯ ಮೂಲಕ ತಮ್ಮದೇ ಛಾಪು ಮೂಡಿಸಿದ ಬರಹಗಾರ್ತಿ ವಾಣಿ ರಾವ್‌ ಅವರು 1931 ಅಕ್ಟೋಬರ್‌ 4ರಂದು ಜನಿಸಿದರು. ತಾಯಿ ಇಂದಿರಾಬಾಯಿ. ತಂದೆ ಭೀಮಾಚಾರ್‌. ಹೋಮಿಯೋಪತಿಯಲ್ಲಿ ಪಿಎಚ್‌ಡಿ ಪದವೀಧರರು. ಕಾಲೇಜು ದಿನಗಳಿಂದಲೇ ಸಾಹಿತ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಇವರು ರಚಿಸಿದ ಕವಿತೆ, ಮಕ್ಕಳ ಕತೆಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.  ವಾಣಿ ಅವರು ರಚಿಸಿದ ಪ್ರಮುಖ ಕೃತಿಗಳೆಂದರೆ ಸುಪ್ತಚೇತನ, ದರ್ಪಣ, ಆಕಾಶದೀಪ, ಹೇಮಶೃಂಗ (ಕಾದಂಬರಿ); ವನಸುಮ, ನೀಲಕೊಳ, ಗಣೇಶ ಎಲ್ಲಿ, ಮಾಯಾವಿ (ಮಕ್ಕಳ ಕತೆ), ಸಿಂಧು-ಬಿಂದು (ಭಾಷಾಂತರ); ಚಿನ್ನಯ ರಾಮಾಯಣ, ಮಗು, ಸ್ವಾಮಿ ಪ್ರಣವಾನಂದಜೀ (ವೈದ್ಯಕೀಯ); ಹೋಮಿಯೋಪತಿ, ಮೆಟೀರಿಯಾ ಮೆಡಿಕಾ ಸೂತ್ರಗಳು (ಕವನ ಸಂಕಲನ); ...

READ MORE

Related Books