ಲೇಖಕಿ ಎಸ್. ಸುಶೀಲಾ ಚಿಂತಾಮಣಿ ಅವರ ಕಾದಂಬರಿ-ಅಮ್ಮಾ ನೀ ಏಕೆ ಮದುವೆ ಆದೆ...? ಮದುವೆ ಬಂಧಗಳು, ಸಂಬಂಧಗಳು ಅನುಬಂಧಗಳ ಸ್ವರೂಪ-ಸ್ವಭಾವಗಳನ್ನು ತಿಳಿಸಿಕೊಡುವ ಕಾದಂಬರಿ ಇದು. ವಸ್ತು, ನಿರೂಪಣಾ ಶೈಲಿ, ಪಾತ್ರಗಳ ಸೃಷ್ಟಿ, ಸನ್ನಿವೇಶಗಳ ಕಲಾತ್ಮಕ ಜೋಡಣೆ, ಪರಿಣಾಮಕಾರಿ ಸಂಭಾಷಣೆ ಇತ್ಯಾದಿ ಸಾಹಿತ್ಯಕ ಅಂಶಗಳಿಂದ ಈ ಕಾದಂಬರಿಯು ಓದುಗರ ಗಮನ ಸೆಳೆಯುತ್ತದೆ.
ಲೇಖಕಿ ಎಸ್. ಸುಶೀಲಾ ಚಿಂತಾಮಣಿ ಅವರು ಬೆಂಗಳೂರಿನ ಹೈಕೋರ್ಟ್ ನ್ಯಾಯವಾದಿಗಳು. ಬೆಂಗಳೂರು ಮಧ್ಯಸ್ಥಿಕೆ ಕೇಂದ್ರದಲ್ಲಿ ಹಿರಿಯ ಮಧ್ಯಸ್ಥಿಕೆಗಾರರು. ಕಿರುತೆರೆ ವಾಹಿನಿಗಳ ಕಾನೂನು ಸಲಹೆಗಾರರು. ಪತ್ರಿಕೆಗಳಲ್ಲಿ ಕಾನೂನು ಬರಹಗಳ ಅಂಕಣಗಾರ್ತಿಯೂ ಹೌದು. ಸಣ್ಣ ಕಥೆ, ನೀಳ್ಗತೆ, ಕವನಗಳನ್ನು ಬರೆದಿದ್ದಾರೆ. ಕೃತಿಗಳು: ಅಮ್ಮಾ ನೀ ಏಕೆ ಮದುವೆಯಾದೆ (ಕಾದಂಬರಿ) ...
READ MORE