ಕಾದಂಬರಿಕಾರ್ತಿ ಚಿತ್ರಲೇಖಾ ಅವರ ಸಾಮಾಜಿಕ ಕಾದಂಬರಿ ಅಂಬರದ ಚಂದಿರ. ಒಂದು ಹೆಣ್ಣಿನ ಮರುವಿವಾಹ ಮಾಡುವಾಗ ಹೆಚ್ಚು ಎಚ್ಚರದಿಂದ ಇರಬೇಕು, ಒಮ್ಮೆ ಮಾಡಿದ ತಪ್ಪನ್ನೇ ಪುನಃ ಮಾಡಿದರೆ ಬಲಿಪಶುವಾಗುವುದು ಆಕೆ ಹಡೆದ ಮಗು. ಇದನ್ನು ತಿಳಿಸುವ ಪ್ರಯತ್ನವೇ "ಅಂಬರದ ಚಂದಿರ. "
ಸಾಹಿತಿ, ಕಾದಂಬರಿಗಾರ್ತಿ ಚಿತ್ರಲೇಖಾ ಎಸ್ ಅವರು 1945 ಮೇ 01 ಜನಿಸಿದರು. ಇವರ ಬಹುತೇಕ ಕಾದಂಬರಿಗಳು ಸಿನಿಮಾಗಳಾಗಿವೆ. ‘ಮುದುಡಿದ ತಾವರೆ ಅರಳಿತು, ಸಮಯದ ಗೊಂಬೆ’ ಕನ್ನಡದಲ್ಲಿ ಚಲನಚಿತ್ರವಾಗಿದೆ. ‘ಪ್ರೇಮಪಲ್ಲವಿ, ಸ್ವರ್ಗದ ನೆರಳು, ಕೆಂಪಾದ ದೀಪ, ಹೂಮಂಚ, 47 ದಿನಗಳು 1987, ಕರುಣಹತ್ಯೆ, ನಂಜಾದ ನೆನಪು, ಸಂಗಮಿಸದ ನದಿಗಳು’ ಅವರ ಪ್ರಮುಖ ಕಾದಂಬರಿಗಳು. ...
READ MORE