‘ಅಮಾತ್ಯ ಲಕ್ಷ್ಮೀಧರ’ ಕೊಂಡಜ್ಜಿ ಕೆ. ವೆಂಕಟೇಶ್ ಅವರ ಐತಿಹಾಸಿಕ ಕಾದಂಬರಿಯಾಗಿದೆ. ಐತಿಹಾಸಿಕ ಘಟನೆಗಳಿಗೆ ಹಾಗೂ ಸತ್ಯಕ್ಕೆ ಸಮೀಪಿಸುವ ನನ್ನ ಪ್ರಯತ್ನದಲ್ಲಿ ಆತನ ಕಾಲದ ರಾಜಕೀಯ, ಸಾಮಾಜಿಕ ಹಾಗೂ ಶ್ರೀಸಾಮಾನ್ಯನ ಜೀವನದ ಚಿತ್ರಣಗಳನ್ನು ಸೃಜಿಸುವ ಪ್ರಕ್ರಿಯೆಯಲ್ಲಿ ಉದ್ದಕ್ಕೂ ಇಲ್ಲಿ ಲೇಖಕರಿಗೆ ತೋಚಿದ್ದು ಧರ್ಮಪ್ರಜ್ಞೆ ಮತ್ತು ಆ ಕಾಲದ ಜನರ ನಂಬಿಕೆ. ಪ್ರಸ್ತುತ ಈ ಕಾದಂಬರಿಯ ನಾಯಕನೇ ಅಮಾತ್ಯ ಲಕ್ಷ್ಮೀಧರ. ಆತನಿಗೆ ಲಭಿಸಿದ ಲಕ್ಷ್ಮೀಧರನ ಶಾಸ್ತ್ರ-ಶಸ್ತ್ರ ಯೋಗದಾನವು ಸಾಮ್ರಾಜ್ಯವು ಭದ್ರವಾಗಿ ಬೆಳೆಯಲು ಕಾರಣವಾಯಿತು ಎನ್ನುವ ಲೇಖಕ ಮಧುರ ಕವಿ ರಚಿಸಿ, ಹರಿಹರದ ಧರಣೋಜ ಕೆತ್ತಿದ ಶಾಸನವು ಒಂದು ಅಪೂರ್ವ ಹಾಗೂ ಉನ್ನತ ಚಾರಿತ್ರಿಕ ದಾಖಲೆಯಾಗಿದೆ. ಈ ಶಾಸನವು ಬೆಳಕಿಗೆ ಬಾರದೇ ಹೋಗಿದ್ದಿದ್ದರೆ ಬಹುಷಃ ಅಮಾತ್ಯ ಲಕ್ಷ್ಮೀಧರನು ಕತ್ತಲೆಯಲ್ಲೇ ಉಳಿಯುತ್ತದಿದ್ದನ್ನು ಎಂದಿದ್ದಾರೆ.
ಕೊಂಡಜ್ಜಿ ಕೆ. ವೆಂಕಟೇಶ್ ಅವರು ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿದ್ದಾರೆ. ಎಂ.ಎ, ಬಿ.ಕಾಂ ಪದವೀಧರರು. ಸಾಹಿತ್ಯ ಅವರ ಆಸಕ್ತಿ ಕ್ಷೇತ್ರ. ಕೃತಿಗಳು: ಅಮಾತ್ಯ ಲಕ್ಷ್ಮೀಧರ ಐತಿಹಾಸಿಕ ಕಾದಂಬರಿ ...
READ MORE