ಸಿ.ಎಸ್. ನಾಗೇಶ್ ಕುಮಾರ್ ಅವರ ಐದನೇ ಪತ್ತೇದಾರಿ ರಹಸ್ಯಮಯ ಕಾದಂಬರಿ ‘ಅಬಲೆಯ ಬಲೆ’. ಇದು ಪತ್ತೇದಾರ ಜೋಡಿ- ವಿಜಯ್- ವಿಕ್ರಮರ ತನಿಖೆಯ ಸರಣಿಯಲ್ಲಿ ಎರಡನೇ ಪ್ರತ್ಯೇಕ ಕತೆಯಾಗಿದೆ. ಈಗಾಗಲೇ ಈ ನಿಸ್ಸೀಮ ಜೋಡಿಯ ಪರಿಶೋಧನೆ ಮತ್ತು ಸಾಹಸವನ್ನು ‘ಕರಾಳ ಗರ್ಭ’ ಕಾದಂಬರಿಯಲ್ಲಿ ಚಿತ್ರಿಸಿದ್ದಾರೆ. ‘ಅಬಲೆಯ ಬಲೆ’ ಎಂಬ ’ಪನ್’ ಶೀರ್ಷಿಕೆ ಇಟ್ಟಿರುವುದಕ್ಕೂ ಕತೆಯಲ್ಲಿ ಬಲವಾದ ಕಾರಣವಿದೆ. ಇದು ಇಂದಿನ ಪ್ರಸ್ತುತ ವಿದ್ಯಮಾನಗಳಲ್ಲಿ ತಲೆಬರಹದಲ್ಲಿ ಕಾಣಿಸಿಕೊಳ್ಳುವ ‘ಮನಿ ಲಾಂಡರಿಂಗ್’ ( ಅಕ್ರಮ ಹಣ ವಹಿವಾಟು) ವಿವಾದದ ಸುತ್ತ ಹೆಣೆದ ಓರ್ವ ಅಸಹಾಯಕ ತಾಯಿಯ ನಿಗೂಢ ಕತೆ. ಈಕೆ ಮತ್ತು ಪತ್ತೇದಾರರು ಹೇಗೆ ಚಿತ್ರರಂಗ ಮತ್ತು ಬ್ಯಾಂಕಿಂಗ್ ಎರಡನ್ನೂ ಸುತ್ತಿರುವ ಕರಾಳ ದಂಧೆಯ ಮುಸುಕನ್ನು ಸರಿಸಬಲ್ಲರು ಎಂಬುದೇ ಸ್ವಾರಸ್ಯ ಕತೆ.
ಹವ್ಯಾಸಿ ದ್ವಿಭಾಷಾ ಬರಹಗಾರ ನಾಗೇಶ್ ಕುಮಾರ್ ಸಿ.ಎಸ್. ಅವರು ಜನಿಸಿದ್ದು ಬೆಂಗಳೂರಿನಲ್ಲಿ. ಸಿವಿಲ್ ಇಂಜಿನಿಯರಿಂಗ್ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಚೆನ್ನೈ ನಗರದ ಬಹುರಾಷ್ಟ್ರೀಯ ಸಂಸ್ಥೆಯೊಂದರಲ್ಲಿ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಬರೆದ ಸಣ್ಣ ಕತೆ, ಕಿರು ಕಾದಂಬರಿಗಳು ತರಂಗ, ತುಷಾರ ಉತ್ಥಾನ, ಸುಧಾ, ಕರ್ಮವೀರ ಸೇರಿದಂತೆ ಹಲವಾರು ನಿಯತಕಾಲಿಕಗಳಲ್ಲಿ ಪ್ರಕಟವಾಗಿದೆ. ರಕ್ತಚಂದನ, ನಾಳೆಯನ್ನು ಗೆದ್ದವನು ಇವರ ಪ್ರಮುಖ ಕೃತಿಗಳು. ‘ಕರಾಳ ಗರ್ಭ’ ಅವರ ಆಡಿಯೋ ಪುಸ್ತಕ ಇತ್ತೀಚೆಗೆ ಬಿಡುಗಡೆಗೊಂಡಿದ್ದು ಕೇಳುಗರಿಂದ ಮೆಚ್ಚುಗೆ ಪಡೆದಿದೆ. ...
READ MORE