ಹಿರಿಯ ಲೇಖಕ ಅಂಬ್ರಯ್ಯ ಮಠ ಅವರು ನಿವೃತ್ತ ಕರ್ನಾಟಕ ಪವರ್ ಕಾರ್ಪೋರೇಷನ್ ( ಕೆಪಿಸಿ) ವ್ಯವಸ್ಥಾಪಕರು. ಶಿವಮೊಗ್ಗದ ಬಿದನೂರು ವಾಸಿ. ಜೂನ್ 1,1953ರಂದು ಜನಿಸಿದರು. ಅಂಕಣ ಸಂಕಲನ: ನಿಂತ ನೀರ ಕಲಕಬೇಡಿ, ಪರಮ ನೀಚನ ಹೆಜ್ಜೆ ಗುರುತು, ಬೆಳ್ಳಿ ಬೆಳಕಿಂಡಿ. ಪ್ರವಾಸಕಥನ: ಯೇಸು ನಡೆದಾಡಿದ ನಾಡಲ್ಲಿ. ಕಾದಂಬರಿ: ಬಿದನೂರು ರಾಣಿ ವೀರಮ್ಮಾಜಿ, ಅಹಲ್ಯೆ ಅಂತರಂಗ, ಅಂಬೆ, ಕೆಳಾದಿಕುಲತಿಲಕ ವೆಂಕಟಪ್ಪ ನಾಯಕ. ಒಕ್ಕೈ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಇಲ್ಲಿನ ಜಿ. ಆರ್. ರೇಬವಯ್ಯ ದತ್ತಿ ಪ್ರಶಸ್ತಿ ದೊರೆತಿದೆ. ಒಂದೊಮ್ಮೆ ಜಾರಿದಾಗ ಸಣ್ಣಕಥೆಯು ಇಂಗ್ಲೀಷ್ ಮತ್ತು ಹಿಂದಿ ಭಾಷೆಗೆ ಭಾಷಾಂತರಗೊಂಡಿದೆ.ಕೃತಿಗಳು: ಕೆಳದಿಯ ಕುಲತಿಲಕ ವೆಂಕಟಪ್ಪ ನಾಯಕ (ಸಂಶೋಧನಾ ಕೃತಿ), ಗತರಾಜಧಾನಿಯ ಸುತ್ತಮುತ್ತ ಹಾಗೂ ಐತಿಹಾಸಿಕ ಲೇಖನಗಳು.