About the Author

ರಾಘವ ಕಾವ್ಯನಾಮದ ಮೂಲಕ ಪರಿಚಿತರಾಗಿರುವ ಎಂ.ವಿ. ಸೀತಾರಾಮಯ್ಯ ಜನಿಸಿದ್ದು ಮೈಸೂರಿನಲ್ಲಿ.  ಮಕ್ಕಳಿಗಾಗಿ ಬರೆದ 'ಹೂವನು ಮಾರುತ ಹೂವಾಡಗಿತ್ತಿ' ಹಾಡು ಕನ್ನಡ ಭಾಷಾ ಪಠ್ಯಪುಸ್ತಕದಲ್ಲಿತ್ತು. ಕನ್ನಡ ಅಧ್ಯಾಪಕರಾಗಿದ್ದ ಇವರು ಸಾಹಿತ್ಯ ಕ್ಷೇತ್ರದಲ್ಲಿಯೂ ಮನೆಮಾತಾಗಿದ್ದರು. 

ಕನ್ನಡ ಸಾಹಿತ್ಯಕ್ಕೆ ಇವರ ಕೊಡುಗೆಗಳೆಂದರೆ  ಹಕ್ಕಿಹಾಡು, ರಾಗ, ಅಶೋಕ ಚಕ್ರ (ಕವನ ಸಂಗ್ರಹಗಳು), ರಾಘವ, ಕವನ ಕೋಶ, ಆ ಚಿತ್ರಗಳು, ಹಕ್ಕಿ ಹಾಡು, ರತಿದೇವಿ ಮತ್ತು ಇತರ ಕಥೆಗಳು, ಬಿಸಿಲು ಬೆಳದಿಂಗಳು, ನಿಲ್ದಾಣಗಳ ನಡುವೆ (ಕಥಾ ಸಂಕಲನಗಳು), ಭಾಗ್ಯಲಕ್ಷ್ಮಿ, ನಂಜಿನ ಸವಿ, ಜೀವನದ ಜೊತೆಗಾರ (ಕಾದಂಬರಿಗಳು), ತೆರೆಮರೆಯ ಚಿತ್ರಗಳು, ತೊಟ್ಟಿಲು ತೂಗದ ಕೈ (ನಾಟಕಗಳು), ಧೂಮಲೀಲೆ, ಮತ್ತು ಮುಗಿಲುಗಳು, ಹಿಡಿಹೂವು, (ಪ್ರಬಂಧಗಳು), ಕವಿರಾಜ ಮಾರ್ಗ, ಉದಯಾದಿತ್ಯಾಲಂಕಾರ, ಚಿನ್ನದ ಬೆಳಸು, ಅರ್ಚನ, , ಶ್ರೀಕೃಷ್ಣಬಾಲಲೀಲೆ (ಸಂಪಾದಿತ ಕೃತಿಗಳು) ಮುಂತಾದವು. 

ಇವರಿಗೆ  ಬಿ.ಎಂ.ಶ್ರೀ. ಸ್ವರ್ಣಪದಕ, ಕನ್ನಡ ಸಾಹಿತ್ಯ ಪರಿಷತ್ತಿನ ಬಹುಮಾನ, ದೇವರಾಜ ಬಹದ್ದೂರ್ ಬಹುಮಾನ, ಮೈಸೂರು ಸರ್ಕಾರದ ಸಾಹಿತ್ಯ ಮತ್ತು ಸಂಸ್ಕೃತಿ ಇಲಾಖೆಯ ಬಹುಮಾನ, ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ವಿಚಾರ ರತ್ನಾಕರ’ ಬಿರುದು, ದೊರೆತಿದೆ. ಬಿ.ಎಂ.ಶ್ರೀ ಪ್ರತಿಷ್ಠಾನದ ಸಂಸ್ಥಾಪಕರಾದ ಇವರು ಚಿತ್ರಕಾರರೂ ಆಗಿದ್ದರು. ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಯಾಗಿ ಸ್ಪಲ್ಪ ಸಮಯ ಸೇವೆ ಸಲ್ಲಿಸಿದ್ದರು.

ಎಂ.ವಿ. ಸೀತಾರಾಮಯ್ಯ

(09 Sep 1910-12 Mar 1990)

BY THE AUTHOR

ABOUT THE AUTHOR